ಅಣಬೆ ಸಾರು, ಪಲ್ಯ...ಆಹಾ! ಮಶ್ರೂಮ್​ನಲ್ಲಿವೆ ಹಲವು ಆರೋಗ್ಯಕಾರಿ ಪ್ರಯೋಜನಗಳು | Mushrooms

ವಿಜಯವಾಣಿ (39)
Published on

Mushrooms: ಮಲೆನಾಡಿನ ಪ್ರದೇಶಗಳಲ್ಲಿ ಹೇರಳವಾಗಿ ಸಿಗುವ ಅಣಬೆಗಳು/ಮಶ್ರೂಮ್​ಗಳು ನಮ್ಮ ಆರೋಗ್ಯಕ್ಕೆ ಹತ್ತು ಹಲವು ಪ್ರಯೋಜನಗಳನ್ನು ನೀಡುತ್ತದೆ. ಇದರಲ್ಲಿ ಸಾಕಷ್ಟು ಪೋಷಕಾಂಶಗಳು ಅಡಗಿದ್ದು, ನಾಲಿಗೆಗೆ ರುಚಿ ನೀಡುವುದರ ಜೊತೆಗೆ ದೇಹಕ್ಕೆ ಬೇಕಾದ ಅಗತ್ಯ ಆರೋಗ್ಯಕಾರಿ ಅಂಶವನ್ನೇ ಒದಗಿಸುತ್ತದೆ. ಆದಾಗ್ಯೂ, ಈ ಅಣಬೆಗಳಲ್ಲಿ ಒಂದೆರೆಡಲ್ಲ! ಹಲವು ವೆರೈಟಿಗಳಿವೆ. ತಿನ್ನಲು ಯೋಗ್ಯವಿರುವ ಎಲ್ಲ ರೀತಿಯ ಅಣಬೆಗಳು ಆರೋಗ್ಯಕ್ಕೆ ಉತ್ತಮವೇ.

ಅದ್ಭುತ ಅಣಬೆ

ದಿನನಿತ್ಯ ವ್ಯಾಯಾಮ, ಜಿಮ್​ಗೆ ಹೋಗುವವರು ತಮ್ಮ ಡಯಟ್​ ಚಾರ್ಟ್​ನಲ್ಲಿ ಅಣಬೆಗಳನ್ನು ಸೇರಿಸಿಕೊಂಡಿರುತ್ತಾರೆ. ದಿನನಿತ್ಯದ ಉಪಹಾರದಲ್ಲಿ ಮಶ್ರೂಮ್​ಗೆ ಒಂದಷ್ಟು ಜಾಗವನ್ನು ಮೀಸಲಿಟ್ಟಿರುತ್ತಾರೆ. ಕಾರಣ, ಇದರಿಂದ ದೇಹಕ್ಕೆ ಸಿಗುವ ಹಲವು ಉತ್ತಮ ಪ್ರಯೋಜನಗಳು. ಆದ್ದರಿಂದ, ಅಣಬೆಗಳನ್ನು ತಿನ್ನುವುದರಿಂದಾಗುವ ಲಾಭಗಳ ಬಗ್ಗೆ ಇಲ್ಲಿ ವಿವರವಾಗಿ ತಿಳಿಯೋಣ

1. ಪೋಷಕಾಂಶಗಳು ಸಮೃದ್ಧ

ಅಣಬೆಗಳು ಜೀವಸತ್ವಗಳು, ಖನಿಜ, ಪ್ರೋಟೀನ್‌ ಮತ್ತು ಇತರ ಪೋಷಕಾಂಶಗಳಿಂದ ಸಮೃದ್ಧವಾಗಿವೆ. ವಿಶೇಷವಾಗಿ ವಿಟಮಿನ್ ಡಿ, ವಿಟಮಿನ್ ಬಿ-ಕಾಂಪ್ಲೆಕ್ಸ್, ಸೆಲೆನಿಯಮ್, ಪೊಟ್ಯಾಸಿಯಂ ಮತ್ತು ಫೈಬರ್‌ನಲ್ಲಿ ಹೇರಳವಾಗಿವೆ. ಈ ಪೋಷಕಾಂಶಗಳು ಆರೋಗ್ಯಕ್ಕೆ ಒಳ್ಳೆಯದು.

2. ದ್ರವ ನಿಯಂತ್ರಣ

ಅಣಬೆಗಳು ಹೆಚ್ಚಿನ ನೀರಿನಾಂಶವನ್ನು ಹೊಂದಿರುತ್ತವೆ. ಇದು ದೇಹದಲ್ಲಿ ನೀರನ್ನು ಉಳಿಸಿಕೊಳ್ಳಲು ಸಹಕಾರಿ. ಅವುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ನೀರಿನ ಹೀರಿಕೊಳ್ಳುವಿಕೆ ಹೆಚ್ಚಾಗುತ್ತದೆ.

3. ತೂಕ ಇಳಿಕೆ

ಅಣಬೆಗಳು ಕಡಿಮೆ ಕ್ಯಾಲೋರಿಗಳನ್ನು ಮತ್ತು ಹೆಚ್ಚಿನ ಪೋಷಕಾಂಶಗಳನ್ನು ಹೊಂದಿವೆ. ಹೀಗಾಗಿ, ಇವುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ತೂಕ ಇಳಿಸಿಕೊಳ್ಳಲು ಸಹಾಯವಾಗುತ್ತದೆ. ಮಶ್ರೂಮ್​ನಲ್ಲಿ ಫೈಬರ್ ಅಂಶವಿದ್ದು, ಇದು ಹಸಿವನ್ನು ಕಡಿಮೆ ಮಾಡುತ್ತದೆ.

4. ರಕ್ತಹೀನತೆ ತಡೆಗಟ್ಟುವಿಕೆ

ಅಣಬೆಗಳು ಕಬ್ಬಿಣ, ಫೋಲೇಟ್ ಮತ್ತು ವಿಟಮಿನ್ ಬಿ 12 ನಂತಹ ಪ್ರಮುಖ ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ. ಇವು ರಕ್ತಹೀನತೆಯನ್ನು ತಡೆಯಲು ಸಹಾಯ ಮಾಡುತ್ತವೆ. ಹೊಸ ರಕ್ತ ಕಣಗಳ ಉತ್ಪಾದನೆಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ.

5. ಹೃದಯದ ಆರೋಗ್ಯ ಸುಧಾರಣೆ

ಅಣಬೆಗಳು ಉತ್ಕರ್ಷಣ ನಿರೋಧಕಗಳು, ಕೊಲೆಸ್ಟ್ರಾಲ್ ನಿಯಂತ್ರಣ ಮತ್ತು ರಕ್ತದೊತ್ತಡ ಕಂಟ್ರೋಲ್​ನಂತಹ ಹೃದಯ ಸಂಬಂಧಿತ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಇವುಗಳಲ್ಲಿರುವ ಫೈಬರ್ ಮತ್ತು ಕೊಬ್ಬಿನಾಮ್ಲಗಳು ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ.

6. ಗ್ಲೂಕೋಸ್ ಮಟ್ಟ ನಿಯಂತ್ರಣ

ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸಲು ಅಣಬೆಗಳು ಉತ್ತಮವಾಗಿವೆ. ಮಧುಮೇಹ ಕಾಯಿಲೆ ಇರುವವರು ತಮ್ಮ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಣದಲ್ಲಿಡಲು ಅಣಬೆಗಳನ್ನು ಬಳಸುವುದು ಉತ್ತಮ.

7. ಹೆಚ್ಚಿನ ರೋಗನಿರೋಧಕ ಶಕ್ತಿ

ಮಶ್ರೂಮ್​ ಕೆಲವು ನೈಸರ್ಗಿಕ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ. ಇವು ಶೀತ ಮತ್ತು ಮಾಂಸ ಖಂಡಗಳ ನೋವನ್ನು ನಿಯಂತ್ರಿಸುತ್ತದೆ ಮತ್ತು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಣಬೆ ಸೇವನೆ ಹೃದಯ, ಕ್ಯಾನ್ಸರ್, ಮೂತ್ರಪಿಂಡದ ಸಮಸ್ಯೆಗಳು ಮತ್ತು ಇತರ ದೀರ್ಘಕಾಲದ ಕಾಯಿಲೆಗಳನ್ನು ತಡೆಗಟ್ಟಲು ಸಹಕಾರಿ.

8. ಮಾನಸಿಕ ಆರೋಗ್ಯ

ಅಣಬೆಗಳಲ್ಲಿರುವ ವಿಟಮಿನ್ ಬಿ12 ಮತ್ತು ಇತರ ಪೋಷಕಾಂಶಗಳು ಮಾನಸಿಕ ಒತ್ತಡವನ್ನು ನಿಯಂತ್ರಣಕ್ಕೆ ತರುತ್ತವೆ. ಪ್ರತಿದಿನ ಮಶ್ರೂಮ್​ ಸೇವಿಸುವುದರಿಂದ ಆತಂಕ, ಖಿನ್ನತೆ ಮತ್ತು ಒತ್ತಡ ಕಡಿಮೆಯಾಗುತ್ತದೆ. ಮಾನಸಿಕ ಸ್ಪಷ್ಟತೆಯನ್ನು ಹೆಚ್ಚಿಸುವಲ್ಲಿ ಇದು ಉಪಯುಕ್ತವಾಗಿದೆ,(ಏಜೆನ್ಸೀಸ್).ವಿಶೇಷ ಸೂಚನೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net