

ಬೆಂಗಳೂರು: ಲಿಂಕ್ಡ್‌ಇನ್‌ನ 2025ರ "ಟಾಪ್ ಸ್ಟಾರ್ಟ್‌ಅಪ್ಸ್ ಇಂಡಿಯಾ" ಪಟ್ಟಿಯ ಪ್ರಕಾರ, ಭಾರತದ 10 ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಸ್ಟಾರ್ಟ್‌ಅಪ್‌ಗಳು(Startup World) ಸ್ಟಾರ್ಟ್‌ಅಪ್ ಜಗತ್ತನ್ನು ಆಳುತ್ತಿವೆ.
ಹೌದು, ಈ ಪಟ್ಟಿ ನೇಮಕಾತಿ ವೇಗ, ಉದ್ಯೋಗ ಹುಡುಕಾಟ ಮತ್ತು ಪ್ರತಿಷ್ಠಿತ ಕಂಪನಿಗಳಿಂದ ಆಕರ್ಷಿತ ಪ್ರತಿಭೆಗಳನ್ನು ಆಧರಿಸಿ ರಚಿಸಲಾಗಿದೆ. 2025ರ ಮೊದಲ 9 ತಿಂಗಳಲ್ಲಿ ಭಾರತೀಯ ಸ್ಟಾರ್ಟ್‌ಅಪ್‌ಗಳಿಗೆ 9 ಬಿಲಿಯನ್ ಡಾಲರ್‌ಗೂ ಹೆಚ್ಚು ಹೂಡಿಕೆಯಾಗಿದ್ದು, ಇವುಗಳು AI, ಕ್ವಿಕ್ ಕಾಮರ್ಸ್ ಮತ್ತು ಫಿನ್‌ಟೆಕ್‌ನಂತಹ ಕ್ಷೇತ್ರಗಳಲ್ಲಿ ಕ್ರಾಂತಿ ತರುತ್ತಿವೆ ಎಂದು ವರದಿ ಹೇಳುತ್ತಿದೆ.
ದೊಡ್ಡ ಅಲೆಯನ್ನು ಸೃಷ್ಟಿಸುತ್ತಿರುವವರು ಜೆಪ್ಟೊ (Zepto) ಜೆಪ್ಟೊ (#1) ಕ್ವಿಕ್ ಡೆಲಿವರಿ ಪ್ಲಾಟ್‌ಫಾರ್ಮ್ ಆಗಿ ಮುಂದುಳಿದಿದ್ದು, ಗ್ರಾಸರಿ, ಎಲೆಕ್ಟ್ರಾನಿಕ್ಸ್ ಮತ್ತು ಬ್ಯೂಟಿ ಉತ್ಪನ್ನಗಳನ್ನು 10 ನಿಮಿಷಗಳಲ್ಲಿ ಡೆಲಿವರಿ ಮಾಡುತ್ತದೆ. 50ಕ್ಕೂ ಹೆಚ್ಚು ಭಾರತೀಯ ನಗರಗಳಲ್ಲಿ ಹೌಸ್‌ಹೋಲ್ಡ್ ಹೆಸರಾಗಿ ಬದಲಾವಣೆಯನ್ನು ತಂದಿದ್ದು, ಕ್ವಿಕ್ ಕಾಮರ್ಸ್ ಅಲೆಯನ್ನು ನಡೆಸುತ್ತಿದೆ. ಇದು ಮೂರನೇ ವರ್ಷ ಸತತವಾಗಿ ಟಾಪ್ ಸ್ಥಾನ ಪಡೆದಿದೆ.
1. Zepto-ಬೆಂಗಳೂರು-ಕ್ವಿಕ್ ಡೆಲಿವರಿ-ಗ್ರಾಸರಿ, ಎಲೆಕ್ಟ್ರಾನಿಕ್ಸ್‌ಗೆ 10 ನಿಮಿಷ ಡೆಲಿವರಿ. 50+ ನಗರಗಳಲ್ಲಿ ಜನಪ್ರಿಯ.
2.Lucidity - ಬೆಂಗಳೂರು- ಕ್ಲೌಡ್ ಸ್ಟೋರೇಜ್- ಉದ್ಯಮಗಳಿಗೆ ಕ್ಲೌಡ್ ಡೇಟಾ ನಿರ್ವಹಣೆ ಸರಳೀಕರಣ.
3.Swish-ಬೆಂಗಳೂರು- ಫುಡ್ ಡೆಲಿವರಿ- 10 ನಿಮಿಷ ಫುಡ್ ಡೆಲಿವರಿ, ಬೆಂಗಳೂರಿನಲ್ಲಿ ಆರಂಭ.
4.Weekday-ಬೆಂಗಳೂರು-AI ಹೈರಿಂಗ್- AIಯಿಂದ ಇಂಜಿನಿಯರ್‌ಗಳ ನೇಮಕಾತಿ ಸಹಾಯ.
5. Jar-ಬೆಂಗಳೂರು-ಫೈನಾನ್ಷಿಯಲ್ ಸೇವಿಂಗ್ಸ್- ಡಿಜಿಟಲ್ ಗೋಲ್ಡ್‌ನಲ್ಲಿ ದೈನಂದಿನ ಸಂಚಯ.
6.Convin-ಬೆಂಗಳೂರು-AI ಕಾಂಟ್ಯಾಕ್ಟ್ ಸೆಂಟರ್- ಕಸ್ಟಮರ್ ಸರ್ವೀಸ್ ಮತ್ತು ಸೇಲ್ಸ್ ಸುಧಾರಣೆ.
7.Bhanzu-ಹೈದರಾಬಾದ್-ಮ್ಯಾಥ್ ಲರ್ನಿಂಗ್- ಮ್ಯಾಥ್ ಅನ್ನು ಮಜಾ ಮಾಡುವಂತೆ ಕಲಿಸುವ ಪ್ಲಾಟ್‌ಫಾರ್ಮ್.
8.Refyne India-ಬೆಂಗಳೂರು-ಫೈನಾನ್ಷಿಯಲ್ ವೆಲ್‌ನೆಸ್-ಸಾಲರಿ-ಆನ್-ಡಿಮ್ಯಾಂಡ್ ಮತ್ತು ಫೈನಾನ್ಷಿಯಲ್ ಲಿಟರಸಿ.
9.EMotorad-ಪುಣೆ-ಇಲೆಕ್ಟ್ರಿಕ್ ಬೈಕ್‌ಗಳು-ಸ್ಟೈಲಿಷ್ ಇ-ಬೈಕ್‌ಗಳ ಡಿಸೈನ್ ಮತ್ತು ತಯಾರಿಕೆ.
10.tlys-ದೆಹಲಿ-ವೀಸಾ ಅಪ್ಲಿಕೇಶನ್-ಅಂತರರಾಷ್ಟ್ರೀಯ ವೀಸಾ ಸರಳೀಕರಣ.
ಈ ಸ್ಟಾರ್ಟ್‌ಅಪ್‌ಗಳು ಭಾರತದ ಸ್ಟಾರ್ಟ್‌ಅಪ್ ಇಕೋಸಿಸ್ಟಮ್ ಅನ್ನು ಬಲಪಡಿಸುತ್ತಿವೆ. ಹೆಚ್ಚಿನ ವಿವರಗಳಿಗೆ ಲಿಂಕ್ಡ್‌ಇನ್ ಅಧಿಕೃತ ಪಟ್ಟಿಯನ್ನು ಪರಿಶೀಲಿಸಿ.(ಏಜೆನ್ಸೀಸ್)