ಮಹಾರಾಷ್ಟ್ರದಲ್ಲಿ ಭೀಕರ ಅಪಘಾತ: ದೇವರ ದರ್ಶನಕ್ಕೆ ಹೋಗಿದ್ದ ಬೀದರ್​ನ ನಾಲ್ವರು ದುರ್ಮರಣ | Horrific Accident

Untitled design (8)
Published on

Horrific Accident: ದೇವಸ್ಥಾನಕ್ಕೆ ಹೋಗಿ ಹಿಂತಿರುಗುವ ವೇಳೆ ಮಹಾರಾಷ್ಟ್ರದ ಉಮರ್ಗಾ ಬಳಿ‌ ನಡೆದ ರಸ್ತೆ ಅಪಘಾತದಲ್ಲಿ ಕರ್ನಾಟಕದ ಬೀದರ್ ಜಿಲ್ಲೆಯ ನಾಲ್ವರು ಮೃತಪಟ್ಟಿರುವ ಘಟನೆ ಮಂಗಳವಾರ ನಡೆದಿದೆ.

ಮೃತರು ಬೀದರ್ ತಾಲೂಕಿನ ಖಾಶೆಂಪುರ (ಬಿ) ನಿವಾಸಿಗಳು. ರತಿಕಾಂತ (28), ಶಿವಕುಮಾರ ವಗ್ಗೆ (25) ಸದಾನಂದ (24), ಹಾಗೂ ಸಂತೋಷ (25) ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡ ಒಬ್ಬ ಉಮರ್ಗಾ ಆಸ್ಪತ್ರೆಗೆ ದಾಖಲು. ಸ್ಥಳಕ್ಕೆ ಉಮರ್ಗಾ ಪೊಲೀಸರು ಭೇಟಿ‌ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ.

ಮಹಾರಾಷ್ಟ್ರದ ಹುಲಜ್ಯಾಂತಿ ದೇವಸ್ಥಾನ ಹೋಗಿ ವಾಪಸ ಬರುವಾಗ ನಡೆದ ಘಟನೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net