2021ಕ್ಕೆ ಕೆಲ ಫೋನ್​ನಲ್ಲಿ ವಾಟ್ಸ್​ಆ್ಯಪ್​ ಇರಲ್ಲ!

whatsap
Published on

ನವದೆಹಲಿ: ಫೇಸ್​ಬುಕ್ ಒಡೆತನದ ವಾಟ್ಸ್​ಆ್ಯಪ್​ ಜಾಲತಾಣ ಅಪ್ಲಿಕೇಷನ್ ಹೊಸ ವರ್ಷದಿಂದ ಕೆಲವು ಹಳೆಯ ಆಂಡ್ರಾಯ್್ಡ ಮತ್ತು ಐಒಎಸ್ ಸ್ಮಾರ್ಟ್​ಫೋನ್​ಗಳಲ್ಲಿ ಕಾರ್ಯನಿರ್ವಹಿಸುವುದನ್ನು ಸ್ಥಗಿತಗೊಳಿಸಲಿದೆ. ಹಳೆಯ ಆಪರೇಟಿಂಗ್ ಸಿಸ್ಟಮ್​ನಲ್ಲಿ ಕೆಲಸ ನಿರ್ವಹಿಸುತ್ತಿರುವ ಅಂದರೆ ಐಒಎಸ್ 9ಗಿಂತ ಕೆಳಗಿನ ಆವೃತ್ತಿ ಅಥವಾ ಆಂಡ್ರಾಯ್ಡ್ 4.0.3 ಆಪರೇಟಿಂಗ್ ಸಿಸ್ಟಂಗಳಲ್ಲಿ ಕಾರ್ಯನಿರ್ವಹಿಸದ ಸ್ಮಾರ್ಟ್​ಫೋನ್​ಗಳಲ್ಲಿ ವಾಟ್ಸ್​ಆ್ಯಪ್​ ಕೆಲಸ ನಿರ್ವಹಿಸುವುದಿಲ್ಲ ಎಂದು ತಿಳಿದುಬಂದಿದೆ. ಹೀಗಾಗಿ ವಾಟ್ಸ್​ಆ್ಯಪ್​​ನ ಸೇವೆಯನ್ನು ನಿರಂತರವಾಗಿ ಪಡೆಯಲು ಮೊಬೈಲ್ ಆಪರೇಟಿಂಗ್ ಸಿಸ್ಟಂನ ಇತ್ತೀಚಿನ ಆವೃತ್ತಿಯನ್ನು ಬಳಸಿ ಎಂದು ವಾಟ್ಸ್​ಆ್ಯಪ್​ ಸಲಹೆ ನೀಡಿದೆ.

ಐಫೋನ್ 4 ಎಸ್, ಐಫೋನ್ 5, ಐಫೋನ್ 5 ಎಸ್, ಐಫೋನ್ 6 ಮತ್ತು ಐಫೋನ್ 6 ಎಸ್ ಅನ್ನು ಬಳಸುವವರು ವಾಟ್ಸ್​ಆ್ಯಪ್​ ಬಳಕೆಯನ್ನು ಮುಂದುವರಿಸಲು ಐಒಎಸ್ 9 ಅಥವಾ ನಂತರದ ಆಪರೇಟಿಂಗ್ ಸಿಸ್ಟಮ್ ಅಪ್ಡೇಟ್ ಮಾಡಿಕೊಳ್ಳಬೇಕಾಗುತ್ತದೆ. ಪ್ರತಿ ವರ್ಷಾಂತ್ಯಕ್ಕೆ ವಾಟ್ಸ್​ಆ್ಯಪ್​ ಹಳೆಯ ಐಒಎಸ್ ಮತ್ತು ಆಂಡ್ರಾಯ್ಡ್ ಸ್ಮಾರ್ಟ್​ಫೋನ್​ಗಳಿಗೆ ತನ್ನ ಲಭ್ಯತೆಯನ್ನು ಕೊನೆಗೊಳಿಸುತ್ತದೆ. ಕಳೆದ ವರ್ಷ ಐಒಎಸ್ 8 ಅಥವಾ ಅದಕ್ಕಿಂತ ಹಳೆಯದಾದ ಸ್ಮಾರ್ಟ್​ಫೋನ್​ಗಳಿಗೆ ಮತ್ತು ಆವೃತ್ತಿ 2.3.7 ಅಥವಾ ಅದಕ್ಕಿಂತ ಹಳೆಯದಾದ ಆಂಡ್ರಾಯ್ಡ್ ಫೋನ್​ಗಳಿಗೆ ವಾಟ್ಸ್​ಆ್ಯಪ್​ ಸೇವೆಯನ್ನು ನಿಲ್ಲಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net