ನೈಟ್​ ಕರ್ಫ್ಯೂ ಇಲ್ಲ ಅಂತ ಹೊಸ ವರ್ಷಕ್ಕೆ ಬೇಕಾಬಿಟ್ಟಿ ಓಡಾಡಿದರೆ ಬೀಳುತ್ತೆ ಕೇಸ್​! ಬೆಂಗಳೂರಲ್ಲಿ ನ್ಯೂ ಇಯರ್​ ಪಾರ್ಟಿಗೆ ಬ್ರೇಕ್​!

new year
Published on

ಬೆಂಗಳೂರು: ರಾಜ್ಯದಲ್ಲಿ ನೈಟ್​ ಕರ್ಫ್ಯೂ ಮಾಡುವ ನಿರ್ಧಾರವನ್ನು ರಾಜ್ಯ ಸರ್ಕಾರ ಕೈ ಬಿಟ್ಟಿದೆ. ಹಾಗೆಂದ ಮಾತ್ರಕ್ಕೆ ಹೊಸ ವರ್ಷದ ಪಾರ್ಟಿಯನ್ನು ಗ್ರ್ಯಾಂಡ್​ ಆಗಿ ಮಾಡೋಣ ಎಂದು ನೀವಂದುಕೊಂಡಿದ್ದರೆ ಎಚ್ಚರ! ಹೊಸ ವರ್ಷದ ದಿನದಂದು ಅಡ್ಡಾದಿಡ್ಡಿ ಓಡಾಡುವವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವುದಕ್ಕೆ ಸರ್ಕಾರ ಸಿದ್ಧವಾಗಿದೆ.

ಡಿಸೆಂಬರ್​ 31 ಮತ್ತು ಜನವರಿ 1ರಂದು ಬೆಂಗಳೂರಿನಲ್ಲಿ ಖಡಕ್​ ರೂಲ್ಸ್​ ಜಾರಿ ಮಾಡಲು ಸರ್ಕಾರ ಸಿದ್ಧತೆ ನಡೆಸಿದೆ. ಈ ಎರಡು ದಿನ ನಗರದಾದ್ಯಂತ ಖಾಕಿ ಹದ್ದಿನ ಕಣ್ಣಿಡಲಿದೆ. ಇದಕ್ಕೆಂದೇ ಬೆಂಗಳೂರಿಗೆ ಹೊಸ ಗೈಡ್‌ಲೈನ್ಸ್ ಜಾರಿಯಾಗಲಿದೆ. ಸಾರ್ವಜನಿಕ ಸ್ಥಳ, ರಸ್ತೆಗಳಲ್ಲಿ ಸಂಭ್ರಮಾಚರಣೆ ನಿಷೇಧಿಸಿ ಪೊಲೀಸ್ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಲಿದೆ.

ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಜ್ ಸ್ಟ್ರೀಟ್ ರಸ್ತೆಗೆ ಎಂಟ್ರಿ ಇರುವುದಿಲ್ಲ. ಈ ರಸ್ತೆಗಳಲ್ಲಿ ಕಲರ್​ಫುಲ್​ ಲೈಟಿಂಗ್ಸ್​ ಹಾಕುವಂತಿಲ್ಲ. ನಗರದ ಎಲ್ಲಾ ಪ್ರಮುಖ ರಸ್ತೆಗಳು ಬಂದ್ ಮಾಡಲಾಗುವುದು. ನಗರಕ್ಕೆ ಎಂಟ್ರಿ ಕೊಡುವ ಎಲ್ಲಾ ರಸ್ತೆಗಳಲ್ಲಿ ನಾಕಾ ಬಂದಿ ಹಾಕಲಾಗುವುದು. ಫ್ಲೈ ಓವರ್ ಗಳು ಕ್ಲೊಸ್ ಮಾಡಲು ಚಿಂತನೆ ನಡೆಸಲಾಗುತ್ತಿದೆ. ಸುಖಾ‌ ಸುಮ್ಮನೆ ಕುಡಿದು ರಸ್ತೆಗೆ ಇಳಿಯುವಂತಿಲ್ಲ. ಎಲ್ಲರೂ ಮನೆಯಲ್ಲೇ ಪಾರ್ಟಿ ಮಾಡಿಕೊಳ್ಳಬೇಕು. ಮನೆಯಲ್ಲಿ ಪಾರ್ಟಿ ಮಾಡಿದ್ರು ಸೌಂಡ್ ಮಾಡೊ ಹಾಗಿಲ್ಲ. ಡಿಜೆ ಹಾಕುವಂತಿಲ್ಲ ಎನ್ನುವ ನಿಯಮಗಳು ಜಾರಿಯಾಗಲಿವೆ.

ಈ ಎರಡು ದಿನದಂದು ಪೊಲೀಸ್ ಇಲಾಖೆಯಿಂದ ನಗರದಾದ್ಯಂತ ಸೆಕ್ಷನ್​ 144 ಜಾರಿ ಮಾಡಲು ಚಿಂತನೆ ನಡೆಸಲಾಗುತ್ತಿದೆ. ಈ ಕುರಿತಾಗಿ ಈಗಾಗಲೇ ಹಿರಿಯ ಅಧಿಕಾರಿಗಳಿಂದ ಸಭೆ ನಡೆಸಲಾಗಿದೆ. ಪೊಲೀಸ್ ಆಯುಕ್ತ ಕಮಲ್‌ ಪಂತ್ ರಿಂದ ಸಭೆ ನಡೆಸಲಾಗಿದ್ದು, ಶೀಘ್ರವೇ ಮಾರ್ಗಸೂಚಿ ಬಿಡುಗಡೆಯಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net