

ದಾವಣಗೆರೆ: ಆಹಾರ ಕಿಟ್ ಪಡೆಯಲು ಬಂದಿದ್ದ ಜನತೆ ನಾ ಮುಂದು, ತಾ ಮುಂದು ಎಂಬಂತೆ ಒಮ್ಮೆಲೆ ನುಗ್ಗಿದ್ದರಿಂದ ವೃದ್ಧರು, ಮಹಿಳೆಯರು ತುಳಿತಕ್ಕೊಳಗಾದರು.
ಜಗಳೂರು ಪಟ್ಟಣದ ತರಳಬಾಳು ಕೇಂದ್ರದ ಮುಖ್ಯದ್ವಾರದಲ್ಲಿ ಮಂಗಳವಾರ ಅರಸಿಕೆರೆ ಹೋಬಳಿ ಕಲ್ಲುಗಣಿ ಕ್ರಷರ್ ಮಾಲೀಕರು ಆಹಾರ ಕಿಟ್ಗಳನ್ನು ನೀಡಿದ್ದರು. ಇದನ್ನು ಪಡೆಯಲು ಬಂದಿದ್ದ ಸುತ್ತಮುತ್ತಲ ಸಾರ್ವಜನಿಕರ ನಡುವೆ ನೂಕುನುಗ್ಗಲು ಏರ್ಪಟ್ಟಿತು.
ಇದನ್ನೂ ಓದಿರಿ ಚೆನ್ನೈನಲ್ಲಿನ್ನು ಕ್ಷೌರ ಮಾಡಿಸಲು ಆಧಾರ್ ಕಡ್ಡಾಯ..!
ಆಹಾರ್ ಕಿಟ್ ವಿತರಿಸಲು ಸಂಸದ ಜಿ.ಎಂ.ಸಿದ್ದೇಶ್ವರ್ ಮತ್ತು ಶಾಸಕ ಎಸ್.ವಿ. ರಾಮಚಂದ್ರ ಅವರ ಬರುವಿಕೆ ತಡವಾಗಿದ್ದರಿಂದ ಜನರನ್ನು ನಿಯಂತ್ರಿಸಲು ಪೊಲೀಸರು ವಿಫಲರಾದರು. ಒಮ್ಮೆಲೆ ಗೇಟ್ ತೆರೆದಿದ್ದರಿಂದ ನೂಕುನುಗ್ಗಲು ಏರ್ಪಟ್ಟಿತು. ಗೇಟ್ ಮುಂದೆ ಆರಂಭದಲ್ಲಿ ನಿಂತಿದ್ದ ವೃದ್ಧರು ಕಾಲ್ತುಳಿತಕ್ಕೆ ಸಿಕ್ಕರು. ಸ್ಥಳದಲ್ಲೇ ಇದ್ದ ಕೆಲವರು ಮಧ್ಯ ಪ್ರವೇಶಿಸಿ ಅವರನ್ನು ರಕ್ಷಿಸಿದರು.