More

    ಚೆನ್ನೈನಲ್ಲಿನ್ನು ಕ್ಷೌರ ಮಾಡಿಸಲು ಆಧಾರ್ ಕಡ್ಡಾಯ..!

    ಚೆನ್ನೈ: ಸರಕಾರದ ಹೊಸ ನಿಯಮಗಳ ಪ್ರಕಾರ ಸಲೂನ್‌ಗಲ್ಲಿ ಗ್ರಾಹಕರಿಗೆ ಸೇವೆ ನೀಡುವ ಮೊದಲು ಅವರ ಹೆಸರು, ವಿಳಾಸ, ದೂರವಾಣಿ ಸಂಖ್ಯೆ ಮತ್ತು ಆಧಾರ್ ಕಾರ್ಡ್ ಸಂಖ್ಯೆಯನ್ನು ತೆಗೆದುಕೊಳ್ಳುವುದು ಕಡ್ಡಾಯಗೊಳಿಸಿದೆ.
    ಚೆನ್ನೈನಲ್ಲಿರುವ ಸಲೂನ್‌ಗಳಲ್ಲಿ ಗ್ರಾಹಕರಿಗೆ ಕ್ಷೌರ ಮಾಡುವ ಮೊದಲು ಅವರ ಆಧಾರ್ ಕಾರ್ಡ್‌ಗಳನ್ನು ಪರಿಶೀಲಿಸುತ್ತದೆ.
    ಕರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ತಮಿಳುನಾಡು ಸರ್ಕಾರ ಸಾರ್ವಜನಿಕ ಸಾರಿಗೆ ಮತ್ತು ರೆಸ್ಟೋರೆಂಟ್‌ಗಳ ಭಾಗಶಃ ಮತ್ತು ಷರತ್ತುಬದ್ಧ ಪುನರಾರಂಭದಂಥಹ ಕೆಲವು ಸಡಿಲಿಕೆಯೊಂದಿಗೆ ಭಾನುವಾರ ಲಾಕ್‌ಡೌನ್ ಅನ್ನು ಜೂನ್ 30 ರವರೆಗೆ ವಿಸ್ತರಿಸಿದೆ.

    ಇದನ್ನೂ ಓದಿ: ನಿರ್ಗತಿಕರಿಗೆ ಸಹಾಯ ಹಸ್ತ ನೀಡಿದ ಅಂಗವಿಕಲ ಭಿಕ್ಷಕ; ‘ಮನ್ ಕಿ ಬಾತ್​​’ನಲ್ಲಿ ಶ್ಲಾಘಿಸಿದ ಪ್ರಧಾನಿ ಮೋದಿ

    ಹಾಗೆಯೇ ಮತ್ತು ಸಲೂನ್​​​ಗಳನ್ನು ತೆರೆಯಲು ಅವಕಾಶ ಕಲ್ಪಿಸಿದೆ. ಸಲೂನ್​​ಗಳಲ್ಲಿ ರಾಜ್ಯ ಸರ್ಕಾರ ಹೊರಡಿಸಿರುವ ಕಟ್ಟುನಿಟ್ಟಾದ ಸಾಮಾಜಿಕ ದೂರ ಮಾರ್ಗಸೂಚಿಗಳನ್ನು ಪಾಲಿಸಬೇಕಾಗುತ್ತದೆ. ಹಾಗೆಯೇ, ಕೋವಿಡ್-19 ಸೋಂಕು ಹೆಚ್ಚಿರುವ ಹಾಗೂ ಕಂಟೇನ್ಮೆಂಟ್ ಪ್ರದೇಶಗಳಲ್ಲಿ ಲಾಕ್​​ಡೌನ್ ಮುಂದುವರಿಯಲಿದೆ.
    ಕೋವಿಡ್-19 ರೋಗದಿಂದ ಹೆಚ್ಚು ಹಾನಿಗೊಳಗಾದ ರಾಜ್ಯಗಳ ಪಟ್ಟಿಯಲ್ಲಿ ತಮಿಳುನಾಡು ಒಟ್ಟು 23,495 ಸಕ್ರಿಯ ಪ್ರಕರಣಗಳೊಂದಿಗೆ ಮಹಾರಾಷ್ಟ್ರ ನಂತರ ಎರಡನೇ ಸ್ಥಾನದಲ್ಲಿದೆ.

    ನಿತ್ಯವೂ ನೂರಾರು ನಿರ್ಗತಿಕರಿಗೆ ಕೈ ತುತ್ತು ನೀಡುತ್ತಿದ್ದಾರೆ ಈ ದಂಪತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts