More

    ನಿತ್ಯವೂ ನೂರಾರು ನಿರ್ಗತಿಕರಿಗೆ ಕೈ ತುತ್ತು ನೀಡುತ್ತಿದ್ದಾರೆ ಈ ದಂಪತಿ

    ರಾಜಸ್ಥಾನ: ಕರೊನಾ ವೈರಸ್ ಹರಡುವಿಕೆಯಿಂದಾಗಿ ಜಾರಿಗೊಳಿಸಲಾದ ಲಾಕ್​​ಡೌನ್ ನಿಂದಾಗಿ ತಾತ್ಕಾಲಿಕವಾಗಿ ಬದುಕು ಕಳೆದುಕೊಂಡ ವಲಸೆ ಕಾರ್ಮಿಕರು, ನಿರ್ಗತಿಕರಿಗಾಗಿ ಮಿಡಿವ ಹೃದಯಿಗಳು ಅವರಿಗಾಗಿ ಸಹಾಯ ಹಸ್ತ ಚಾಚುತ್ತಲೇ ಇದ್ದಾರೆ. ನೂರರ ಅಜ್ಜಿ ತನ್ನ ಆ ಇಳಿ ವಯಸ್ಸಿನಲ್ಲೂ ವಲಸೆ ಕಾರ್ಮಿಕರಿಗಾಗಿ ಆಹಾರದ ಪ್ಯಾಕೆಟ್ ತಯಾರಿಸಿ, ಅವರಿಗೆ ನೀಡಿದ್ದು ಆಯಿತು. ಮೂರರ ಬಾಲಕನೂ ಕೇಕ್ ಮಾಡಿ ನಿರ್ಗತಿಕರಿಗೆ ನೀಡಿದ್ದೂ ಆಯಿತು. ಅಂಥ ಉದಾರಿಗಳ ಪಟ್ಟಿ ಬೆಳೆಯುತ್ತಲೇ ಇದೆ. ಅಂಥವರ ಮಧ್ಯೆ ಜೈಪುರ ಜಿಲ್ಲೆಯ ಚಕ್ಸುದ ಉಪ ವಿಭಾಗೀಯ ಅಧಿಕಾರಿ ಕೂಡ ಒಬ್ಬರು.
    ವಲಸಿಗರು, ನಿರ್ಗತಿಕರಿಗಾಗಿ ಆಹಾರ ತಯಾರಿಸುವಲ್ಲಿ ಎಸ್‌ಡಿಒ ಓಂಪ್ರಕಾಶ್ ಸಹಾರನ್ ಮತ್ತು ಅವರ ಪತ್ನಿ ಎರಡು ತಿಂಗಳಿಂದ ತೀವ್ರ ಕಾರ್ಯನಿರತರಾಗಿದ್ದಾರೆ.

    ಇದನ್ನೂ ಓದಿ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ; ಬಾಲಕಿ ಈಗ ಎಂಟು ತಿಂಗಳ ಗರ್ಭಿಣಿ

    ದಂಪತಿ ಬೆಳಗಿನ ಜಾವ 4 ಗಂಟೆಗೆ ಎದ್ದು 23-24 ಕೆಜಿ ತರಕಾರಿ ಕತ್ತರಿಸಿ ಅಡುಗೆಯವರ ಸಹಾಯದಿಂದ ರೊಟ್ಟಿ, ಅನ್ನ ಮಾಡುತ್ತಾರೆ. ಹೀಗೆ ತಯಾರಿಸಿದ ಆಹಾರವನ್ನು ಸಣ್ಣ ಪ್ಯಾಕೆಟ್‌ಗಳಲ್ಲಿ ಹಾಕುತ್ತಾರೆ.
    ನಂತರ ಅವರ ಇಬ್ಬರು ಪುತ್ರಿಯರು ಸಹಾಯಕ್ಕೆ ಸೇರುತ್ತಾರೆ. ಅಡುಗೆ ತಯಾರಿಸಲು ಇವರ ಒಟ್ಟಾರೆ ಕುಟುಂಬದವರು ಅಡುಗೆ ಮನೆಯಲ್ಲಿ ಅಂದಾಜು ಆರು ಗಂಟೆ ಕಳೆಯುತ್ತಾರೆ. ಬೆಳಿಗ್ಗೆ 10 ಗಂಟೆಗೆ ಎಸ್‌ಡಿಒ ಅಂದಾಜು ನೂರಿಪ್ಪತ್ತು ನಿರ್ಗತಿಕರಿಗಾಗಿ ಆಹಾರದ ಪ್ಯಾಕೆಟ್ ಹೊತ್ತೊಯ್ಯುತ್ತಾರೆ.
    ನಿರ್ಗತಿಕರಿಗೆ ನೂರಾರು ರೊಟ್ಟಿ ಮತ್ತು ಕಿಲೋಗಟ್ಟಲೆ ಪಲ್ಯ ತಯಾರಿಸುವುದು ಅವರ ಪತ್ನಿಯ ದಿನಚರಿಯಾಗಿದೆ. ಆಹಾರ ಸಾಮಗ್ರಿಗಳನ್ನು ಖರೀದಿಸಲು ದಿನಕ್ಕೆ ಅಂದಾಜು 5,000 ರೂ. ಖರ್ಚು ಮಾಡುತ್ತಾರೆ.

    ಇದನ್ನೂ ಓದಿ: ಕರೊನಾ ಸಮಯದಲ್ಲಿ ಮುದ ನೀಡುವ ನಾವಿಕ ಕಾರ್ಯಕ್ರಮಗಳು

    “ನಾವು ರೈತ ಕುಟುಂಬದಿಂದ ಬಂದವರು, ಆದ್ದರಿಂದ, ನಾವು ನಮ್ಮ ಹಳ್ಳಿಯಿಂದ ಗೋಧಿಯನ್ನು ಪಡೆಯುತ್ತೇವೆ. ಉಳಿದ ಆಹಾರ ಸಾಮಗ್ರಿಯನ್ನು ನನ್ನ ಪತಿ ಮಾರುಕಟ್ಟೆಯಿಂದ ಖರೀದಿಸುತ್ತಾರೆ. ಒಟ್ಟಾರೆ, ನಾವು ಪ್ರತಿದಿನ 484 ರೊಟ್ಟಿಗಳನ್ನು ತಯಾರಿಸುತ್ತೇವೆ. ಬಡ ಜನರಿಗೆ ಇದರಿಂದ ಸಹಾಯವಾಗುವುದರಿಂದ ನಮಗೂ ಸಂತೋಷವಾಗುತ್ತದೆ. ಕೆಲವೊಮ್ಮೆ ನನ್ನ ಪತಿ ಕಾರ್ಯನಿರತವಾಗಿದ್ದಾಗ ನಾನು ಕಾರಿನಲ್ಲಿ ಆಹಾರವನ್ನು ವಿತರಿಸುತ್ತೇನೆ ”ಎಂದು ಪತ್ನಿ ವಿಕಾಸ್ ಹೇಳಿದ್ದಾರೆ.
    “ಲಾಕ್‌ಡೌನ್ ಘೋಷಿಸಿದಾಗ, ವಲಸೆ ಕಾರ್ಮಿಕರ ದುಃಸ್ಥಿತಿಯನ್ನು ನನಗೆ ನೋಡಲಾಗಲಿಲ್ಲ. ವಲಸಿಗರಿಗೆ ಆಹಾರದಂತಹ ಮೂಲಭೂತ ಸೌಲಭ್ಯವನ್ನು ಒದಗಿಸುವ ನನ್ನ ಬಯಕೆಯನ್ನು ನನ್ನ ಪತ್ನಿಗೆ ತಿಳಿಸಿದಾಗ ಅವರು ತಮಗೆ ಸಾಧ್ಯವಾದಷ್ಟು ಆಹಾರ ತಯಾರಿಸುವುದಾಗಿ ಮರು ಮಾತಿಲ್ಲದೆ ಒಪ್ಪಿಕೊಂಡರು.ಅಲ್ಲಿಂದ ಇದು ಕಾರ್ಯಸಾಧ್ಯವಾಯಿತು.

    ಇದನ್ನೂ ಓದಿ: ವೆಂಟಿಲೇಟರ್ ತಯಾರಿಸಲು ಭಾರತದ ಮೂರು ಕಂಪನಿಗಳಿಗೆ ನಾಸಾ ಗ್ರೀನ್ ಸಿಗ್ನಲ್

    “ಆರಂಭದಲ್ಲಿ, ನಾವು 100 ಜನರಿಗೆ ಆಹಾರ ಪ್ಯಾಕೆಟ್‌ಗಳನ್ನು ವಿತರಿಸುತ್ತಿದ್ದೆವು. ಈಗ, ನಾವು ಅವುಗಳನ್ನು 121 ಜನರಿಗೆ ಒದಗಿಸುತ್ತಿದ್ದೇವೆ. ಪ್ರತಿ ಪ್ಯಾಕೆಟ್‌ನಲ್ಲಿ ನಾಲ್ಕು ರೊಟ್ಟಿಗಳು ಮತ್ತು ಪಲ್ಯ ಇರುತ್ತವೆ. ಕೆಲವೊಮ್ಮೆ, ನಾವು ರೊಟ್ಟಿ ಬದಲಿಗೆ ಅನ್ನ ತಯಾರಿಸುತ್ತೇವೆ. ನನ್ನ ಪತ್ನಿಯ ಸಹಕಾರದ ಹೊರತಾಗಿ ಅದು ಸಾಧ್ಯವಾಗುತ್ತಿರಲಿಲ್ಲ, ”ಸಹಾರನ್ ಹೇಳಿದರು. 
    ”ಮಾರ್ಚ್ 23 ರಿಂದ ನಾವು ಸೇವೆ ಆರಂಭಿಸಿದ್ದೇವೆ.  ಕನಿಷ್ಠ ಇಬ್ಬರು ನಿರ್ಗತಿಕರಿಗೆ ಆಹಾರವನ್ನು ನೀಡಲು ಇತರರನ್ನು ಪ್ರೇರೇಪಿಸುತ್ತಿದ್ದೇವೆ. ಲಾಕ್‌ಡೌನ್ ಅನ್ನು ತೆಗೆದುಹಾಕುವವರೆಗೆ ಮತ್ತು ನಿರ್ಗತಿಕರಿಗಾಗಿ ನಾವು ಕೆಲಸವನ್ನು ಮುಂದುವರಿಸುತ್ತೇವೆ ”ಎಂದು ಉಪ ವಿಭಾಗಾಧಿಕಾರಿ ಹೇಳಿದರು.

    ಟಿವಿ, ರೇಡಿಯೋದಲ್ಲಿ ಶಿಕ್ಷಣ ನೀಡಲು ಅನುಮತಿ ನೀಡಿ; ಮಹಾರಾಷ್ಟ್ರ ಶಿಕ್ಷಣ ಸಚಿವೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts