More

    ಆಹಾರಕ್ಕಾಗಿ ಪರದಾಡುವ ದಿನಗಳು ದೂರವಿಲ್ಲ – ನ್ಯಾಯಾಧೀಶ

    ಸಿರಗುಪ್ಪ: ಭೂಮಿ ಎಂದರೆ ಮಣ್ಣು ಮಾತ್ರವಲ್ಲ. ಸಕಲ ಜೀವಿಗಳು, ನದಿ, ಪರ್ವತ, ಸಮುದ್ರ, ಅರಣ್ಯ, ಅನಿಲ ಹಾಗೂ ಖನಿಜ ಸಂಪತ್ತಿನಿಂದ ಕೂಡಿದೆ. ಸ್ವಾರ್ಥಕ್ಕಾಗಿ ಮಾನವನು ಸ್ವಯಂಕೃತ ಅಪರಾಧಕ್ಕೆ ಮುಂದಾಗಿದ್ದಾನೆ. ಮಿತಿಮೀರಿದ ಪರಿಸರ ಮಾಲಿನ್ಯದಿಂದಾಗಿ ಮಳೆ ಇಲ್ಲದೆ ನೀರಿಗಾಗಿ ಪರದಾಡುವಂತಾಗಿದೆ ಎಂದು ಜೆಎಂಎಫ್‌ಸಿ ನ್ಯಾಯಾಧೀಶ ಹಾಜಿ ಹುಸೇನ್‌ಸಾಬ್ ಯಾದವಾಡ ಕಳವಳ ವ್ಯಕ್ತಪಡಿಸಿದರು.

    ಇದನ್ನೂ ಓದಿ: ಇಂದಿಗೂ ಜೀವಂತವಿದೆ ಸುಂದರಿಯರ ಬೆತ್ತಲೆ ದೇಹದ ಮೇಲೆ ಆಹಾರ ಸವಿಯೋ ವಿಚಿತ್ರ ಪದ್ಧತಿ!

    ನಗರದ ವಕೀಲರ ಸಂಘದ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ ಹಾಗೂ ವಕೀಲರ ಸಂಘ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಭೂಮಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ದಿನದಿಂದ ದಿನಕ್ಕೆ ಭೂಮಿ ಮೇಲೆ ಹೆಚ್ಚುತ್ತಿರುವ ಜನಸಂಖ್ಯೆಯಿಂದಾಗಿ ಕೃಷಿಭೂಮಿ ಮಾಯವಾಗುತ್ತಿದೆ. ಮುಂದೊಂದು ದಿನ ಬರೀ ನೀರು ಮಾತ್ರವಲ್ಲ, ಆಹಾರಕ್ಕಾಗಿಯೂ ಪರದಾಡುವಂತಹ ಕಾಲ ಬರಲಿದೆ ಎಂದು ಎಚ್ಚರಿಸಿದರು.

    ಹಿರಿಯ ವಕೀಲ ಎನ್.ಅಬ್ದುಲ್‌ಸಾಬ್, ವೆಂಕೋಬ ಮಾತನಾಡಿದರು. ಸರ್ಕಾರಿ ಸಹಾಯಕ ಅಭಿಯೋಜಕಿ ಶಾರದಾ, ವಕೀಲರ ಸಂಘದ ಅಧ್ಯಕ್ಷ ಎಸ್.ಮಂಜುನಾಥಗೌಡ, ಕಾರ್ಯದರ್ಶಿ ಎಚ್.ಪ್ಯಾಟೆಗೌಡ, ಪ್ಯಾನಲ್ ವಕೀಲರಾದ ಮಲ್ಲಿಗೌಡ, ವೆಂಕಟೇಶ್ ನಾಯ್ಕ, ಕೆ.ಸಣ್ಣಹುಸೇನ್, ಹಿರಿಯ ವಕೀಲರಾದ ಪತ್ತಾರ್ ವೀರಣ್ಣ, ಎಸ್.ಶ್ರೀನಿವಾಸ, ಸಿದ್ದಲಿಂಗಯ್ಯ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts