More

    ಭೂಮಿತಾಯಿಗೆ ಪ್ಲಾಸ್ಟಿಕ್ ಮಾರಕ

    ಧಾರವಾಡ: ಎಲ್ಲವನ್ನು ನೀಡುವ ಭೂಮಿ ತಾಯಿಯನ್ನು ನಾವೆಷ್ಟು ರಕ್ಷಿಸುತ್ತೇವೆ ಎಂದು ಆಲೋಚಿಸಬೇಕಿದೆ. ನಿತ್ಯ ನಾವು ಬಳಸುವ ಪ್ಲಾಸ್ಟಿಕ್ ಭೂಮಿ ತಾಯಿಯ ಉಸಿರುಗಟ್ಟುವಂತೆ ಮಾಡುತ್ತಿದೆ. ಆದ್ದರಿಂದ ಮಕ್ಕಳು ಪ್ಲಾಸ್ಟಿಕ್ ವಸ್ತು ಬಳಕೆ ಕಡಿಮೆ ಮಾಡಬೇಕು ಎಂದು ಚಿಲಿಪಿಲಿ ಸಂಸ್ಥೆಯ ಅಧ್ಯಕ್ಷ ಶಂಕರ ಹಲಗತ್ತಿ ಹೇಳಿದರು.
    ಹುಬ್ಬಳ್ಳಿ- ಧಾರವಾಡ ಮಹಾನಗರ ಪರಿಸರ ಸಮಿತಿ ಹಾಗೂ ಚಿಲಿಪಿಲಿ ಸಂಸ್ಥೆಯ ಸಹಯೋಗದಲ್ಲಿ ಸ್ಕೌಟ್ ಮತ್ತು ಗೌಡ್ಸ್ ಸಂಸ್ಥೆಯ ಆವರಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ `ವಿಶ್ವ ಭೂ ದಿನಾಚಣೆÀ ಉದ್ಘಾಟಿಸಿ ಅವರು ಮಾತನಾಡಿದರು.
    ಮಹಾನಗರಗಳಲ್ಲಿ ನಿತ್ಯ ಕಸ ನಿರ್ವಹಣೆಗಾಗಿ ವಾಹನಗಳು ಬರುತ್ತವೆ. ಧ್ವನಿಸುರುಳಿ ಮೂಲಕ ಕಸ ನಿರ್ವಹಣೆ ಕುರಿತು ತಿಳಿಹೇಳಲಾಗುತ್ತದೆ. ಆದರೂ ಜನ ವಾಹನದಲ್ಲಿ ಕಸ ಹಾಕದೆ ಬೀದಿಯಲ್ಲಿ ಎಸೆಯುತ್ತಿದ್ದಾರೆ. ಪರಿಸರ ಚೆನ್ನಾಗಿ ಇದ್ದರೆ ಮಾತ್ರ ಭೂಮಿ ಚೆನ್ನಾಗಿರುತ್ತದೆ ಎಂದರು.
    ಭೂ ದಿನಾಚರಣೆಯ ಕುರಿತು ಉಪನ್ಯಾಸ ನೀಡಿದ ನಿವೃತ್ತ ಶಿಕ್ಷಕ ಕೆ.ಎಚ್. ನಾಯಕ ಮಾತನಾಡಿ, ಭೂಮಿಯನ್ನು ಜನ್ಮದಾತೆಯಂತೆ ಕಾಳಜಿಯಿಂದ ನೋಡಬೇಕು. ತಾಯಿ ಮಕ್ಕಳಿಗೆ ಬೇಕಾಗಿದ್ದೆಲ್ಲವನ್ನೂ ನೀಡುವಂತೆ ಭೂಮಿ ತಾಯಿಯೂ ಮನುಷ್ಯನ ಎಲ್ಲ ಬೇಡಿಕೆಗಳನ್ನು ಈಡೇರಿಸುತÁ್ತ ಬರುತ್ತಿರುವುದರಿಂದ ಭೂತಾಯಿ ಎಂದು ಕರೆಯಲಾಗುತ್ತದೆ ಎಂದರು.
    ಪರಿಸರ ಸಮಿತಿಯ ಕಾರ್ಯದರ್ಶಿ ವಿಲಾಸ ಕುಲಕರ್ಣಿ ಸ್ವಾಗತಿಸಿದರು. ಜಾನವಪದ ಹಿರಿಯ ಕಲಾವಿದೆ ಪ್ರಮಿಳಾ ಜಕ್ಕನ್ನವರ ಪರಿಸರ ಗೀತೆ ಹಾಡಿದರು. ಸಿಕಂದರ ದಂಡಿನ ನಿರ್ವಹಿಸಿದರು. ಯಲ್ಲಪ್ಪ ಬೆಂಡಿಗೇರಿ, ಶ್ರುತಿ ಹುರಳಿಕೊಪ್ಪ, ಸೋಮು ಕಾರಿಗನೂರ, ನೇತ್ರಾ ಪವಾರ, ಆಫ್ರೀನ್ ಜಕಾತಿ, ರೇಷ್ಮಾ ತಹಸೀಲ್ದಾರ್, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts