More

    ವೆಂಟಿಲೇಟರ್ ತಯಾರಿಸಲು ಭಾರತದ ಮೂರು ಕಂಪನಿಗಳಿಗೆ ನಾಸಾ ಗ್ರೀನ್ ಸಿಗ್ನಲ್

    ವಾಷಿಂಗ್ಟನ್: ಕೋವಿಡ್-19 ರೋಗಿಗಳಿಗೆ ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾದ ವೆಂಟಿಲೇಟರ್‌ಗಳನ್ನು ತಯಾರಿಸಲು ಮೂರು ಭಾರತೀಯ ಕಂಪನಿಗಳಿಗೆ ನಾಸಾ ಪರವಾನಗಿ ನೀಡಿದೆ.
    ಆಲ್ಫಾ ಡಿಸೈನ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್, ಭಾರತ್ ಫೊರ್ಜ್ ಲಿಮಿಟೆಡ್ ಮತ್ತು ಮೇಧಾ ಸರ್ವೋ ಡ್ರೈವ್ಸ್ ಪ್ರೈವೇಟ್ ಲಿಮಿಟೆಡ್ – ಈ ಮೂರು ಭಾರತೀಯ ಕಂಪನಿಗಳಿಗೆ ಪರವಾನಗಿ ನೀಡಲಾಗಿದೆ ಎಂದು ಬಾಹ್ಯಾಕಾಶ  ಸಂಸ್ಥೆ ಶುಕ್ರವಾರ ಪ್ರಕಟಣೆಯಲ್ಲಿ ತಿಳಿಸಿದೆ.

    ಇದನ್ನೂ ಓದಿ: ಕೊನೆಗೂ ಸ್ವದೇಶಕ್ಕೆ ಪ್ರಯಾಣ ಆರಂಭಿಸಿದ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್

    ವೆಂಟಿಲೇಟರ್ ತಯಾರಿಸಲು ಭಾರತೀಯ ಸಂಸ್ಥೆಗಳಲ್ಲದೆ, ಅಮೆರಿಕದ ಎಂಟು ಮತ್ತು ಬ್ರೆಜಿಲ್​ನ ಮೂರು ಕಂಪನಿಗಳು ಸೇರಿದಂತೆ 18 ಇತರ ಕಂಪನಿಗಳನ್ನು ಆಯ್ಕೆ ಮಾಡಲಾಗಿದೆ.
    ಬಾಹ್ಯಾಕಾಶ ಸಂಶೋಧನೆ ಹಾಗೂ ವೈಮಾನಿಕ ಮತ್ತು ಸಂಬಂಧಿಸಿದ ಕಾರ್ಯಕ್ರಮಗಳಿಗೆ ಅಮೆರಿಕದಲ್ಲಿ ಸ್ವತಂತ್ರ ಏಜೆನ್ಸಿಯಾಗಿರುವ ನಾಸಾ ದಕ್ಷಿಣ ಕ್ಯಾಲಿಫೋರ್ನಿಯಾದ ತನ್ನ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿಯಲ್ಲಿ (ಜೆಎಲ್​​ಪಿ) ವಿಶೇಷವಾಗಿ ಕೋವಿಡ್-19 ರೋಗಿಗಳಿಗೆ ವೆಂಟಿಲೇಟರ್ ಅನ್ನು ಅಭಿವೃದ್ಧಿಪಡಿಸುತ್ತಿದೆ.

    ಟಿವಿ, ರೇಡಿಯೋದಲ್ಲಿ ಶಿಕ್ಷಣ ನೀಡಲು ಅನುಮತಿ ನೀಡಿ; ಮಹಾರಾಷ್ಟ್ರ ಶಿಕ್ಷಣ ಸಚಿವೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts