ಹಿಂದಕ್ಕೆ ಬಂದ ಹಿಟಾಚಿ ವಾಹನ, ಮರಳಿ ಬಾರದ ಲೋಕಕ್ಕೆ 3 ವರ್ಷದ ಮಗು; ತಂದೆಯ ಜೊತೆಗಿದ್ದಾಗಲೇ ದುರಂತ..

Child
Published on

ಬೆಂಗಳೂರು: ಜಗತ್ತೇ ಹೊಸ ವರ್ಷದ ಸಂಭ್ರಮದಲ್ಲಿರುವಾಗ ಈ ಕುಟುಂಬ ದುಃಖಕ್ಕೀಡಾಗಿದೆ. ಹೊಸವರ್ಷದ ಮೊದಲ ದಿನವೇ ಮಗುವನ್ನು ಕಳೆದುಕೊಂಡ ನೋವು ಇಡೀ ಕುಟುಂಬವನ್ನು ಶೋಕಕ್ಕೀಡು ಮಾಡಿದೆ.

ಹಿಟಾಚಿ ವಾಹನವೊಂದನ್ನು ರಿವರ್ಸ್ ತೆಗೆದುಕೊಳ್ಳುತ್ತಿದ್ದಾಗ ಅಪಘಾತ ಸಂಭವಿಸಿ ಮೂರು ವರ್ಷದ ಮಗು ಮರಳಿ ಬಾರದ ಲೋಕಕ್ಕೆ ತೆರಳಿದಂತಾಗಿದೆ. ಬೆಂಗಳೂರಿನ ಉಪ್ಪಾರಪೇಟೆಯ ಧನ್ವಂತರಿ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ.

ಸಿಮಿಯಾನ್​ (3) ಮೃತಪಟ್ಟ ಮಗು. ಬೆಳಗ್ಗೆ ತಂದೆಯೊಂದಿಗೆ ಬಂದಿದ್ದ ಮಗು, ನೋಡನೋಡುತ್ತಿದ್ದಂತೆ ಅಪಘಾತಕ್ಕೆ ಒಳಗಾಗಿ ಸ್ಥಳದಲ್ಲೇ ಸಾವಿಗೀಡಾಗಿದೆ. ಹಿಟಾಚಿ ವಾಹನವನ್ನು ರಿವರ್ಸ್ ತೆಗೆಯುತ್ತಿದ್ದಾಗ ಮಗು ಬಂದಿದ್ದನ್ನು ಆಪರೇಟರ್​ ಗಮನಿಸದೇ ಅಪಘಾತ ಸಂಭವಿಸಿದೆ. ಉಪ್ಪಾರಟೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net