

Comfortably Life : 22 ವರ್ಷದ ಯುವಕ ಮಿತವ್ಯಯ ಖರ್ಚು ಮಾಡುವ ಮೂಲಕ ಕೇವಲ 20 ಸಾವಿರದಲ್ಲಿ ಬದುಕೊದೇಗೆ ಎಂದು ಹೇಳುವ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದಾನೆ. ಅಲ್ಲದೆ, 20 ಸಾವಿರ ರೂ.ನಲ್ಲಿ ಖರ್ಚು ಮಾಡೊದೇಗೆ? ಎಂದು ತಿಳಿಸಿಕೊಟ್ಟಿದ್ದಾನೆ.
ಈ ಯುವಕ ಹಂಚಿಕೊಂಡಿರುವ ಪೋಸ್ಟ್ ಇದೀಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಅನೇಕರು ತಾವು ಖರ್ಚು ಮಾಡುವ ಅಭ್ಯಾಸವನ್ನು ಮರುಮಾಪನ ಮಾಡುವ ಅವಶ್ಯಕತೆಗೆ ಪ್ರೇರೆಪಿಸಿದೆ. ಇದೀಗ ಸಾಮಾಜಿಕ ವೇದಿಕೆ ರೆಡ್ಡಿಟ್ನಲ್ಲಿ ತನ್ನ ಖರ್ಚು ವೆಚ್ಚದ ಬಗ್ಗೆ ಮಾಹಿತಿ ಪೋಸ್ಟ್ ಮಾಡಿದ್ದಾರೆ. ಆರು ತಿಂಗಳಿನಿಂದ ನಗರದಲ್ಲಿ ಸ್ವತಂತ್ರವಾಗಿ ವಾಸಿಸುತ್ತಿದ್ದು, ವೆಚ್ಚವನ್ನು ನಿರ್ವಹಿಸುವಂತೆ ಬಾಡಿಗೆಯನ್ನು ಸ್ನೇಹಿತರೊಂದಿಗೆ ಹಂಚಿಕೊಂಡಿದ್ದಾರೆ.
ಅವರ ಮಾಸಿಕ ವಿವರಗಳಲ್ಲಿ ಊಟಕ್ಕೆ 8,000 ರೂ. ಬಾಡಿಗೆಗೆ 9,000 ರೂ. ( 23,000 ಮನೆಯ ಬಾಡಿಗೆ ಭಾಗ), ಸಾರ್ವಜನಿಕ ಸಾರಿಗೆ ಮತ್ತು ರಾಪಿಡೊ ಮೂಲಕ ಪ್ರಯಾಣಕ್ಕಾಗಿ 2,000 ರೂ ಮತ್ತು ಶೌಚಾಲಯ ಹಾಗೂ ಶುಚಿಗೊಳಿಸುವ ಸಾಮಗ್ರಿಗಳಂತಹ ಇತರ ವೆಚ್ಚಗಳಿಗಾಗಿ 2,000 ರೂ, ಒಟ್ಟು ರೂ 21,000 ರೂ. ಆಗಿದೆ. ಇಷ್ಟರಲ್ಲೇ ಸಂತೃಪ್ತಿ ಇದೆ ಎಂದಿದ್ದಾರೆ.
ಅಲ್ಲದೆ, ತಮ್ಮ ನಿರ್ವಹಣಾ ಜೀವನಶೈಲಿಗೆ ಕಾರಣ ಮದ್ಯಪಾನ, ಧೂಮಪಾನ ಮತ್ತು ಆಗಾಗ್ಗೆ ಪಾರ್ಟಿ ಮಾಡುವುದನ್ನು ತಪ್ಪಿಸುವುದು ಮುಂತಾದ ಉದ್ದೇಶಪೂರ್ವಕ ಆಯ್ಕೆಗಳಾಗಿದ್ದು, ಇದು ಅವರ ಖರ್ಚುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.
"ಹೇ ಜನರೇ! ನಾನು (22) ಕಳೆದ 6 ತಿಂಗಳಿನಿಂದ ಬೆಂಗಳೂರಿನಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದೇನೆ ಮತ್ತು ಇಲ್ಲಿನ ಜೀವನ ವೆಚ್ಚದ ಬಗ್ಗೆ ಕುತೂಹಲ ಹೊಂದಿರುವ ಯಾರಿಗಾದರೂ ನನ್ನ ಮಾಸಿಕ ವೆಚ್ಚಗಳ ವಿವರವನ್ನು ಹಂಚಿಕೊಳ್ಳಬೇಕೆಂದು ನಾನು ಭಾವಿಸಿದೆ" ಎಂದು ಬಳಕೆದಾರರು ಬರೆದಿದ್ದಾರೆ.
ತಮ್ಮ ಊಟ, ಬಾಡಿಗೆ ಹಾಗೂ ದಿನನಿತ್ಯದ ಖರ್ಚಿನ ಬಗ್ಗೆ ಹಂಚಿಕೊಂಡಿದ್ದಾರೆ.
ಯುವಕನ ಆರ್ಥಿಕ ಶಿಸ್ತು ಮತ್ತು ಬಜೆಟ್ ಕೌಶಲ್ಯವನ್ನು ಶ್ಲಾಘಿಸಿದರು ಒಬ್ಬ ಬಳಕೆದಾರರು, "ನೀವು ಚೆನ್ನಾಗಿ ಜೀವನ ನಿರ್ವಹಣೆ ಮಾಡುತ್ತಿದ್ದಿರಿ ಯಂಗ್ ಮ್ಯಾನ್! ನಾನು ನಿಮ್ಮ ವಯಸ್ಸಿನಲ್ಲಿದ್ದಾಗ ಬೆಂಗಳೂರಿನಲ್ಲಿ ತಿಂಗಳಿಗೆ 22 ಸಾವಿರ ರೂಪಾಯಿ ಸಂಪಾದಿಸುತ್ತಿದ್ದೆ ಮತ್ತು ಕನಿಷ್ಠ 14 ಸಾವಿರ ರೂಪಾಯಿ ಖರ್ಚು ಮಾಡುತ್ತಿದ್ದೆ. ಇದು 6 ವರ್ಷಗಳ ಹಿಂದಿನ ಮಾತು." ಎಂದಿದ್ದಾನೆ.
ಮತ್ತೊಬ್ಬರು, "ಅದು ತುಂಬಾ ಪ್ರಭಾವಶಾಲಿಯಾಗಿದೆ! ನಾನು ನಿಜವಾಗಿಯೂ ಸ್ಫೂರ್ತಿ ಪಡೆದಿದ್ದೇನೆ ಮತ್ತು ನನ್ನ ದಿನಚರಿಯಲ್ಲಿಯೂ ಅಂತಹ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ಇಷ್ಟಪಡುತ್ತೇನೆ!" ಎಂದು ಕಾಮೆಂಟ್ ಮಾಡಿದ್ದಾರೆ.(ಏಜೆನ್ಸೀಸ್)