ಬಿಸಿಲಿನ ಶಾಖಕ್ಕೆ ನಿಮ್ಮ ಮುಖ ಕಪ್ಪಾಗಿದೆಯೇ; ಹೀಗೆ ಮೊಸರಿನಿಂದ ಫೇಸ್ ವಾಶ್ ಮಾಡಿ; ನಂತರ ರಿಸಲ್ಟ್​ ನೋಡಿ| Face wash

curd
Published on

Face wash| ಮೊಸರು ನಮ್ಮ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಮೊಸರು ದೇಹದ ಆಂತರಿಕ ಆರೋಗ್ಯಕ್ಕೆ ಮಾತ್ರವಲ್ಲದೆ ನಿಮ್ಮ ಚರ್ಮಕ್ಕೂ ತುಂಬಾ ಪ್ರಯೋಜನಕಾರಿ ಎಂಬುದು ನಿಮಗೆ ಗೊತ್ತಾ?

ಪ್ರಾಚೀನ ಕಾಲದಿಂದ ಇಂದಿನವರೆಗೂ ಕೂಡ ಭಾರತದ ಅನೇಕ ಹಳ್ಳಿಗಳಲ್ಲಿ ಮಹಿಳೆಯರು ಮೊಸರನ್ನು ಹಚ್ಚುವ ಮೂಲಕ ಮುಖವನ್ನು ಸ್ವಚ್ಛಗೊಳಿಸುತ್ತಾರೆ. ಆಯುರ್ವೇದಾಚಾರ್ಯರ ಸೂಚನೆಯಂತೆ ನೀವು ಮನೆಯಲ್ಲಿಯೇ ಫೇಸ್ ವಾಶ್ ತಯಾರಿಸಿ ಹಚ್ಚುವುದರಿಂದ, ಕೆಲವೇ ನಿಮಿಷಗಳಲ್ಲಿ ನಿಮ್ಮ ಮುಖ ಹೊಳೆಯುತ್ತದೆ. ಹಾಗಾದರೆ ಅದನ್ನು ಹೇಗೆ ಮಾಡಬೇಕೆಂಬುದನ್ನು ತಿಳಿಯೋಣ.

ಮೊಸರು ಅನೇಕ ರೀತಿಯ ಪೋಷಕಾಂಶಗಳನ್ನು ಒಳಗೊಂಡಿರುವ ನೈಸರ್ಗಿಕ ಉತ್ಪನ್ನವಾಗಿದೆ. ಹಾಗಾಗಿ, ಇದರಿಂದ ತಯಾರಿಸಿದ ಫೇಸ್ ವಾಶ್‌ನಲ್ಲಿ ಯಾವುದೇ ರಾಸಾಯನಿಕಗಳನ್ನು ಬಳಸಲಾಗುವುದಿಲ್ಲ ಮತ್ತು ಅದರಲ್ಲಿ ಬೆರೆಸಲಾದ ಪದಾರ್ಥಗಳು ಸಾಮಾನ್ಯವಾಗಿ ಮನೆಯಲ್ಲಿ ಸಿಗುವಂತವಾಗಿದ್ದು, ಇವು ಸಂಪೂರ್ಣವಾಗಿ ನೈಸರ್ಗಿಕವಾಗಿರುತ್ತವೆ.

ಆಯುರ್ವೇದದಲ್ಲಿ ಮೊಸರು ಚರ್ಮಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಮನೆಯಲ್ಲಿಯೇ ಮೊಸರಿನಿಂದ ಫೇಸ್ ​ವಾಶ್ ತಯಾರಿಸಬಹುದು ಎಂದು ಹೇಳುತ್ತಾರೆ. ಇದು ನಿಮ್ಮ ಚರ್ಮದ ಹೊಳಪನ್ನು ಕಾಪಾಡಿಕೊಳ್ಳಲು ಮತ್ತು ಹೆಚ್ಚುತ್ತಿರುವ ಶಾಖದಲ್ಲಿ ಕಳೆದುಹೋದ ಕಾಂತಿಯನ್ನು ಮರಳಿ ಪಡೆಯಲು ಸಹಾಯ ಮಾಡುತ್ತದೆ.

ಮೊಸರಿನಿಂದ ತೆಗೆಯುವ ಸಾರವು ನೈಸರ್ಗಿಕವಾಗಿದ್ದು, ಯಾವುದೇ ಅಡ್ಡಪರಿಣಾಮಗಳನ್ನು ಹೊಂದಿರುವುದಿಲ್ಲ. ಇದನ್ನು ನಿಯಮಿತವಾಗಿ ಬಳಸುವುದರಿಂದ ಚರ್ಮಕ್ಕೆ ಹಲವು ಪ್ರಯೋಜನಗಳಿವೆ. ಕಳೆದುಹೋದ ಕಾಂತಿಯನ್ನು ಮರಳಿ ಪಡೆಯುವುದು, ಚರ್ಮದ ಮಂದತೆಯನ್ನು ನಿವಾರಿಸುವುದು, ಚರ್ಮ ಕುಗ್ಗುವುದನ್ನು ತಡೆಯುವುದು, ಮೊಡವೆಗಳು ಇತ್ಯಾದಿ ಸಮಸ್ಯೆಗಳನ್ನು ಈ ಮೊಸರಿನಿಂದ ನಿವಾರಿಸಬಹುದಾಗಿದೆ.

curd

ಮೊಸರಿನಿಂದ ಫೇಸ್ ವಾಶ್ ತಯಾರಿಸುವುದೇಗೆ?

(ಇಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಯಾವುದೇ ಪರಿಹಾರವನ್ನು ಪ್ರಯತ್ನಿಸುವ ಮೊದಲು ತಜ್ಞರ ಸಲಹೆಯನ್ನು ಪಡೆಯುವುದು ಉತ್ತಮ)

(ಏಜೆನ್ಸೀಸ್)

ಮೊಸರು ಫೇಸ್ ವಾಶ್ ಮಾಡಲು ಮೊದಲನೆಯದಾಗಿ ಎರಡು ಚಮಚ ಮೊಸರು, ಒಂದು ಚಮಚ ಜೇನುತುಪ್ಪ ಮತ್ತು ಒಂದು ಚಮಚ ಕಡಲೆ ಹಿಟ್ಟು ಬೇಕಾಗುತ್ತದೆ. ನಂತರ ಮೊಸರು, ಜೇನುತುಪ್ಪ ಮತ್ತು ಕಡಲೆ ಹಿಟ್ಟನ್ನು ಚೆನ್ನಾಗಿ ಮಿಶ್ರಣ ಮಾಡಿ. ಇದಾದ ಬಳಿಕ ಅದನ್ನು 5 ನಿಮಿಷಗಳ ಕಾಲ ಫ್ರಿಜ್​ನಲ್ಲಿ ಇರಿಸಿ ಮತ್ತು ನಂತರ ಅದನ್ನು ತೆಗೆದು ನಿಮ್ಮ ಮುಖಕ್ಕೆ ಹಚ್ಚಿ. ಇದನ್ನು ಇದನ್ನು ನಿಮ್ಮ ಮುಖಕ್ಕೆ ಹಚ್ಚಿ ನಿಧಾನವಾಗಿ ಮಸಾಜ್ ಮಾಡಿ. ಇದರ ನಂತರ ನಿಮ್ಮ ಮುಖವನ್ನು ಬೆಚ್ಚಗಿನ ನೀರಿನಿಂದ ತೊಳೆದು ಹತ್ತಿ ಬಟ್ಟೆಯಿಂದ ಒರೆಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net