ಶೈಕ್ಷಣಿಕ ಗುಣಮಟ್ಟ ಹೆಚ್ಚಳಕ್ಕೆ ಕಾರ್ಯಾಗಾರ ಸಹಕಾರಿ

Gur_Pilikula
Published on

ವಿಜಯವಾಣಿ ಸುದ್ದಿಜಾಲ ಗುರುಪುರ

ಕಾರ್ಯಾಗಾರಗಳು ನಮ್ಮ ಜಿಲ್ಲೆಯ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಉನ್ನತೀಕರಣ ಹಾಗೂ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಸಹಕಾರಿ. ಶಿಕ್ಷಕರು ತಮ್ಮ ಶಾಲೆಗಳಲ್ಲಿ ಈ ಕಾರ್ಯಾಗಾರದ ಅನುಭವ ಪ್ರಯೋಗಿಸಿದಲ್ಲಿ ಉತ್ತಮ ಫಲಿತಾಂಶ ಕಂಡುಕೊಳ್ಳಲು ಸಾಧ್ಯವಿದೆ ಎಂದು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ಕ್ಯುರೇಟರ್ ಜಗನ್ನಾಥ ಹೇಳಿದರು.

ಎಸ್ಸೆಸ್ಸೆಲ್ಸಿಯ ವಿಜ್ಞಾನ ಮತ್ತು ಗಣಿತ ಪರೀಕ್ಷೆಯಲ್ಲಿ ಜಿಲ್ಲೆಯ ವಿದ್ಯಾರ್ಥಿಗಳ ಫಲಿತಾಂಶ ಉನ್ನತೀಕರಣ ಮತ್ತು ವಿಷಯ ಸಂಪದೀಕರಣ ಅಂಶಗಳ ಕುರಿತು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಸೋಮವಾರ ಆಯೋಜಿಸಲಾದ ಸಂವಹನ, ವಿಚಾರ ವಿನಿಮಯ ವಾಡಿಕೊಳ್ಳುವ ಉದ್ದೇಶದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಮಂಗಳೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಉತ್ತರ ವಲಯ ಹಾಗೂ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂ ಬೆಂಗಳೂರು, ದ.ಕ. ಜಿಲ್ಲೆ, ಮಂಗಳೂರು ಉತ್ತರ ವಲಯ ಟಕ ಆಶ್ರಯದಲ್ಲಿ ಕಾರ್ಯಾಗಾರ ಆಯೋಜಿಸಲಾಗಿತ್ತು.

ಮಂಗಳೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಶಿಕ್ಷಣ ಸಂಯೋಜಕ ರಮೇಶ್ ಆಚಾರ್ಯ ವಾತನಾಡಿದರು. ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂ ಬೆಂಗಳೂರು, ದ.ಕ. ಜಿಲ್ಲೆ ಮಂಗಳೂರು ಉತ್ತರ ವಲಯ ಟಕದ ಅಧ್ಯಕ್ಷ ವಾಸುದೇವ ರಾವ್ ಕಾರ್ಯಕ್ರಮ ನಿರ್ವಹಿಸಿದರು. ಟಕದ ಪದಾಧಿಕಾರಿ ಕರುಣ ಎಸ್.ಸ್ವಾಗತಿಸಿದರು.

ಅಧಿವೇಶನದಲ್ಲಿ ಬ್ರಹ್ಮಾವರದ ಚೇತನಾ ಪ್ರೌಢಶಾಲಾ ಸಹಶಿಕ್ಷಕ ಗೋವಿಂದ ರಾವ್, ಮೊಡಂಕಾಪು ಕಾರ್ಮೆಲ್ ಕಾನ್ವೆಂಟ್ ಪ್ರೌಢಶಾಲಾ ಸಹಶಿಕ್ಷಕ ರೋಶನ್ ಪಿಂಟೊ, ಬಂಟ್ವಾಳ ತಾಲೂಕಿನ ನಿವೃತ್ತ ಶಿಕ್ಷಕ ರಾಧಾಕೃಷ್ಣ ಬಾಳಿಗ, ಮಂಗಳೂರಿನ ಲೇಡಿಹಿಲ್ ವಿಕ್ಟೋರಿಯಾ ಪ್ರೌಢಶಾಲಾ ಸಹಶಿಕ್ಷಕಿ ಬಿಂದು ಸಿ.ಆ್ಯಂಟನಿ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಸವಾರೋಪ ಸವಾರಂಭದಲ್ಲಿ ಶಿಕ್ಷಕರು ಅನಿಸಿಕೆ ಹಂಚಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net