ಗುರುಪುರ: ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಪ್ರತಿಷ್ಠೆಯ ಕಣವಾಗಿ ವಾರ್ಪಟ್ಟಿದ್ದ ಎಡಪದವು ವ್ಯವಸಾಯ ಸೇವಾ ಸಹಕಾರ ಸಂದ ಚುನಾವಣೆಯಲ್ಲಿ ಒಟ್ಟು 12 ಸ್ಥಾನಗಳಲ್ಲಿ 10 ಸ್ಥಾನ ಕಾಂಗ್ರೆಸ್ ಪಾಲಾಗಿದೆ. ಬಿಜೆಪಿಯ ಇಬ್ಬರು ವಿಜೇತರಾಗಿದ್ದಾರೆ.
ಭಾನುವಾರ ಬೆಳಗ್ಗೆ 9ರಿಂದ ಮತದಾನ ಆರಂಭವಾಗಿತ್ತು. ಕಾಂಗ್ರೆಸ್ ಆಡಳಿತ ಕೊನೆಗಾಣಿಸಲು ಜಿದ್ದಿಗೆ ಬಿದ್ದಿದ್ದ ಬಿಜೆಪಿ, ಈ ಬಾರಿಯ ಚುನಾವಣೆಯನ್ನು ಹೆಚ್ಚು ಗಂಭೀರವಾಗಿ ಪರಿಗಣಿಸಿ ಪ್ರಚಾರ ನಡೆಸಿತ್ತು. ಫಲಿತಾಂಶ ಹೊರ ಬಿದ್ದಾಗ ಬಿಜೆಪಿ ಪಾಲಿಗೆ 2 ಸ್ಥಾನಗಳು ವಾತ್ರ ದಕ್ಕಿವೆ.
ಕಾಂಗ್ರೆಸ್‌ನ ನೀಲಯ ಎಂ.ಅಗರಿ, ನೋಬರ್ಟ್ ಮಥಾಯಿಸ್, ಪ್ರಶಾಂತ್, ರಾಜೇಶ್ ಸುವರ್ಣ, ಮೋಹಿನಿ, ಹರ್ಷಲತಾ, ವಾಧವ ದೇವಾಡಿಗ, ವಿಶ್ವನಾಥ, ಗುರುಪ್ರಸಾದ್ ರೈ, ನಾರಾಯಣ ನಾಯ್ಕ ವಿಜೇತರಾದರೆ, ಬಿಜೆಪಿಯ ಕುಶಾಲ್ ಕುವಾರ್ ಮತ್ತು ತಾರನಾಥ ಸಪಲಿಗ ವಿಜಯಿಗಳಾಗಿದ್ದಾರೆ. ಸಂಘದ ಒಟ್ಟು 978 ಸಾಲಗಾರರ ಮತಗಳಲ್ಲಿ 816 ಮತಗಳು ಚಲಾವಣೆಯಾಗಿತ್ತು. ಸಾಲಗಾರರಲ್ಲದ 348 ಮತಗಳಲ್ಲಿ 239 ಮತಗಳು ಚಲಾವಣೆಯಾಗಿವೆ. ಒಟ್ಟು ಶೇ.83 ಮತದಾನವಾಗಿದೆ. ಶಿವಲಿಂಗಯ್ಯ ಚುನಾವಣಾಧಿಕಾರಿಯಾಗಿದ್ದರೆ, ಸಹಾಯಕ ಅಧಿಕಾರಿಯಾಗಿ ವಿಲಾಸ್ ರಾವ್ ಕಾರ್ಯನಿರ್ವಹಿಸಿದ್ದರು.