ಸಾಲಿಗ್ರಾಮ ಮೇಳದ ಕಮ್ಮಟಗಳು ಅಭಿನಂದನಾರ್ಹ

kammata
Published on

ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ ಯಕ್ಷಗಾನ ಆಕರ್ಷಣೀಯ ಕಲೆಯಾಗಿದೆ. ಕಾಲ ಬದಲಾಗಿದ್ದರೂ ಯಕ್ಷಗಾನದ ಆಕರ್ಷಣೆ ಮಾತ್ರ ಕಡಿಮೆಯಾಗಿಲ್ಲ. ಐವತ್ತರ ಸಂಭ್ರಮದಲ್ಲಿರುವ ಸಾಲಿಗ್ರಾಮ ಮಕ್ಕಳ ಮೇಳ ಶಾಲೆಗಳಲ್ಲಿ ಆಯೋಜಿಸುವ ವೇಷಭೂಷಣಗಳ ಪರಿಚಯ ಕಮ್ಮಟ ಅಭಿನಂದನಾರ್ಹ ಎಂದು ಜಿಎಸ್‌ವಿಎಸ್ ಅಸೋಸಿಯೇಷನ್ ಕಾರ್ಯದರ್ಶಿ ಎಚ್.ಗಣೇಶ್ ಕಾಮತ್ ಹೇಳಿದರು. ಕೋಟ ಸಾಲಿಗ್ರಾಮ ಮಕ್ಕಳ ಮೇಳದ ಐವತ್ತರ ಸುವರ್ಣ ಸಂಭ್ರಮ ಪ್ರಯುಕ್ತ ಆಯೋಜಿಸಲಾದ ಬಡಗುತಿಟ್ಟಿನ ವೇಷಭೂಷಣಗಳ ಪರಿಚಯ ಕಾರ್ಯಕ್ರಮ ಯಕ್ಷಲೋಕದೊಳಗೊಂದು ಪಯಣ ಉದ್ಘಾಟಿಸಿ ಮಾತನಾಡಿದರು. ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಸುದರ್ಶನ ಉರಾಳ ಅಧ್ಯಕ್ಷತೆ ವಹಿಸಿದ್ದರು. ಗಂಗೊಳ್ಳಿ ಸರಸ್ವತಿ ವಿದ್ಯಾಸಂಸ್ಥೆಗಳ ಸಂಚಾಲಕ ಎನ್.ಸದಾಶಿವ ನಾಯಕ್, ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ನಾಗರಾಜ ಶೆಟ್ಟಿ, ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಂ.ಸಿ. ಉಪಸ್ಥಿತರಿದ್ದರು. ಮಕ್ಕಳ ಮೇಳದ ಕಾರ್ಯದರ್ಶಿ ಸುಜಯೀಂದ್ರ ಹಂದೆ ಸ್ವಾಗತಿಸಿದರು. ಯಶಸ್ವಿ ಕಲಾವೃಂದ ಕಾರ್ಯದರ್ಶಿ ವೆಂಕಟೇಶ ವೈದ್ಯ ವಂದಿಸಿದರು. ನಾರಾಯಣ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.

ವಿವಿಧ ಹಂತದ ಕಲಿಕೆ

ಸರಸ್ವತಿ ವಿದ್ಯಾಲಯ ಕನ್ನಡ ಮಾಧ್ಯಮ ಶಾಲೆಯ ಹಲವು ವಿದ್ಯಾರ್ಥಿಗಳು ಬಣ್ಣಗಳ ಮಿಶ್ರಣ, ಮುದ್ರೆ ರೇಖೆಗಳ ಲೇಪನ, ಗೆಜ್ಜೆ, ಕಸೆ ಕಟ್ಟುವುದು, ಅಂಗಾಭರಣ, ಕೇದಗೆಮುಂದಲೆ, ಕಿರೀಟ ಧಾರಣೆಯ ವಿವಿಧ ಹಂತಗಳಲ್ಲಿ ಭಾಗಿಯಾದರು. ಉಪನ್ಯಾಸಕರು ಮತ್ತು ಬೋಧಕೇತರರು ವಿವಿಧ ವೇಷಭೂಷಣಗಳನ್ನು ಧರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net