ಕೋಡಿಕನ್ಯಾನದಲ್ಲಿ ಸಾಹಿತ್ಯ ಪ್ರೇರಣಾ ಕಾರ‌್ಯಕ್ರಮ

kota-4
Published on

ಕೋಟ: ಬ್ರಹ್ಮಾವರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಸಾಹಿತ್ಯ ಪ್ರೇರಣಾ ಕಾರ್ಯಕ್ರಮ ಕೋಡಿಕನ್ಯಾನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ನಡೆಯಿತು.

ನಿವೃತ್ತ ಬ್ಯಾಂಕ್ ಅಧಿಕಾರಿ ಕೆ.ಚಂದ್ರಶೇಖರ ನಾವಡ ಕಾರ್ಯಕ್ರಮ ಉದ್ಘಾಟಿಸಿದರು. ಬ್ರಹ್ಮಾವರ ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ರಾಮಚಂದ್ರ ಐತಾಳ್ ಶುಭಹಾರೈಸಿದರು. ಸಂಪನ್ಮೂಲ ವ್ಯಕ್ತಿಗಳಾಗಿದ್ದ ನಿವೃತ್ತ ಶಿಕ್ಷಕ ನಾಗೇಶ ಮಯ್ಯ, ನರಸಿಂಹ ತುಂಗ, ಸ್ನೇಹಕೂಟದ ಭಾರತಿ ಮಯ್ಯ, ಭಾಗ್ಯೇಶ್ವರಿ ಮಯ್ಯ ಅವರು ಕವನ ರಚನೆ, ಕಥೆ ರಚನೆ, ಪಠ್ಯದ ಪದ್ಯಗಳು, ನಾಟಕ ಅಭಿನಯ, ಯಕ್ಷಗಾನ ಪ್ರಾತ್ಯಕ್ಷಿಕೆಗಳನ್ನು ನಡೆಸಿದರು. ಪಂಚಾಯಿತಿ ಅಧಿಕಾರಿ ಪೂರ್ಣಿಮಾ, ನರಸಿಂಹಮೂರ್ತಿ ಇದ್ದರು. ಮುಖ್ಯ ಶಿಕ್ಷಕಿ ಸಂಪಾ ಸ್ವಾಗತಿಸಿದರು. ಶಿಕ್ಷಕಿ ಜ್ಯೋತಿ ವಂದಿಸಿದರು. ವಿಜಯ ನಾಯಿರಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net