
ಕುಂದಾಪುರ: ಸಮಾಜದ ಕೆಳ ಮಟ್ಟದಲ್ಲಿರುವ ಸಮುದಾಯಗಳನ್ನು ಸಹ ಮುಂಚೂಣಿಗೆ ತರುವಲ್ಲಿ ಸಂತ ಸೇವಾಲಾಲ್ ಅವರ ಕೊಡುಗೆ ಅಪಾರ. ಲಂಬಾಣಿ ಸಮಾಜದ ಉದ್ಧಾರಕ್ಕಾಗಿ ಸೇವಾಲಾಲ್ ಶ್ರಮಿಸಿದವರು ಎಂದು ಕುಂದಾಪುರ ನಗರ ಠಾಣಾ ಎಸ್‌ಐ ನಂಜಾ ನಾಯ್ಕ ಹೇಳಿದರು.
ತಾಲೂಕು ಆಡಳಿತದ ವತಿಯಿಂದ ಕುಂದಾಪುರದ ಪ್ರಜಾಸೌಧದ ಕೋರ್ಟ್ ಹಾಲ್‌ನಲ್ಲಿ ಶನಿವಾರ ಸಂತ ಸೇವಾಲಾಲ್ ಜಯಂತಿ ಆಚರಣೆಯಲ್ಲಿ ಮಾತನಾಡಿದರು.
ಗ್ರಾಮ ಲೆಕ್ಕಾಧಿಕಾರಿಗಳ ಸಂಘ ಅಧ್ಯಕ್ಷ ಪ್ರಕಾಶ್ ರಾಥೋಡ್ ಮಾತನಾಡಿದರು. ಉಪತಹಸೀಲ್ದಾರ್ ಪ್ರಕಾಶ್ ಪೂಜಾರಿ, ಡಾ.ಹರೀಶ್ ನಾಯ್ಕ, ಸಮುದಾಯ ಪ್ರಮುಖರಾದ ತಿಪ್ಪೇಶ್ ನಾಯ್ಕ, ಕೃಷ್ಣ, ನವೀನ್, ಅನಿಲ್, ಪ್ರದೀಪ್, ಇಲಾಖೆಯ ಅಧಿಕಾರಿಗಳು, ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದರು. ಉಪತಹಸೀಲ್ದಾರ್ ಚಂದ್ರಶೇಖರ್ ಸ್ವಾಗತಿಸಿದರು. ವಿಎ ಆನಂದಕುಮಾರ್ ಕಾರ್ಯಕ್ರಮ ನಿರೂಪಿಸಿದರು.