ಕಾರ್ಕಳ: ಮಹಾವಿಷ್ಣುವೇ ದಶರಥ ಮಹಾರಾಜನ ಪುತ್ರನಾಗಿ ಈ ಭೂಮಿಯಲ್ಲಿ ಜನಿಸಿದ. ಶ್ರೀರಾಮಚಂದ್ರ ತನ್ನ ಆದರ್ಶ ಮತ್ತು ಉದಾತ್ತ ಗುಣಗಳಿಂದ ಮಹಾ ವಿಷ್ಣುವಿನ ಪದವಿಗೇರಿದ ಮತ್ತು ರಾಮಾಯಣ ವೇದದ ಅರ್ಹತೆ ಪಡೆದುಕೊಂಡಿತು ಎಂದು ವಾಗ್ಮಿ ಡಾ.ರಾಘವೇಂದ್ರ ರಾವ್ ಪಡುಬಿದ್ರಿ ಹೇಳಿದರು.

ಕನ್ನಡ ಸಂಘ ಕಾಂತಾವರ, ಅಲ್ಲಮಪ್ರಭು ಪೀಠ, ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕಾರ್ಕಳ ತಾಲೂಕು ಘಟಕ ಸಹಭಾಗಿತ್ವದಲ್ಲಿ ಶನಿವಾರ ದ್ವಿತೀಯ ಸೋಪಾನ ಯಜ್ಞ ಸಂರಕ್ಷಣಿಯ ಪಥದಲ್ಲಿ ವಿಷಯದ ಕುರಿತು ಉಪನ್ಯಾಸ ನೀಡಿದರು.
ಡಾ.ನಾ.ಮೊಗಸಾಲೆ, ಎಸ್. ನಿತ್ಯಾನಂದ ಪೈ, ಮಿತ್ರಪ್ರಭಾ ಹೆಗ್ಡೆ, ಏರ್‌ವೈಸ್ ಮಾರ್ಷಲ್ ರಮೇಶ್ ಕಾರ್ಣಿಕ್, ಕಾರ್ಯಕ್ರಮದ ಪ್ರಾಯೋಜಕ ಲಕ್ಷ್ಮಣ ಕುಡ್ವ ಉಪಸ್ಥಿತರಿದ್ದರು. ಸದಾನಂದ ನಾರಾವಿ ಸ್ವಾಗತಿಸಿದರು. ಸುಧಾಕರ ಶ್ಯಾನುಭೋಗ್ ವಂದಿಸಿದರು. ಡಾ.ಸುಮತಿ ಪಿ. ನಿರೂಪಿಸಿದರು.