ಸರ್ಕಾರಿ ಶಾಲೆ ಶಿಕ್ಷಕನಿಗೆ ಬೈಕ್ ಗಿಫ್ಟ್​ ನೀಡಿ ಬೀಳ್ಕೊಟ್ಟ ಗ್ರಾಮಸ್ಥರು

bajaj pulsar bike
Published on

ಶಿವಮೊಗ್ಗ: ವಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 16 ವರ್ಷಗಳಿಂದ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ್ದ ಶಿಕ್ಷಕ ಸಂತೋಷ್ ಕಾಂಚನ್ ಅವರ ಬೀಳ್ಕೊಡುಗೆಗೆ ಗ್ರಾಮಸ್ಥರು ಆಕರ್ಷಕ ಬಜಾಜ್ ಪಲ್ಸರ್ ಬೈಕ್ ಅನ್ನು ಗಿಫ್ಟ್​ ಕೊಟ್ಟಿದ್ದಾರೆ.

ಸಂತೋಷ್ ಅವರು ವಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶಿಕ್ಷಕರಾಗಿ ಬಂದಾಗ ಇಲ್ಲಿನ ಕಾಡು ಕುಣುಬಿ ಜನಾಂಗದವರಿಗೆ ವಾಹನ ವ್ಯವಸ್ಥೆ ಇರಲಿಲ್ಲ. ಮುಖ್ಯರಸ್ತೆಗೆ ತಲುಪಬೇಕೆಂದರೆ 8 ಕಿಲೋ ಮೀಟರ್ ಕಾಲ್ನಡಿಗೆಯಲ್ಲೇ ಹೋಗಬೇಕಿತ್ತು. ಹೀಗಾಗಿ ವಿದ್ಯಾರ್ಥಿಗಳು ಹಾಗೂ ಊರಿನವರಿಗಾಗಿ ಶಿಕ್ಷಕ ಸಂತೋಷ್ ಕಾಂಚನ್ ಬೈಕ್ ಅನ್ನು ಖರೀದಿಸಿದ್ದರು.

ಗ್ರಾಮದ ಜನರಿಗೆ ಆರೋಗ್ಯ ಸಮಸ್ಯೆ ಬಂದರೆ ಈ ಶಿಕ್ಷಕನ ಬೈಕ್ ಆ್ಯಂಬುಲೆನ್ಸ್ ಆಗಿತ್ತು. ತಮ್ಮ ಶಾಲೆಯ ವಿದ್ಯಾರ್ಥಿಗಳನ್ನು ಪ್ರತಿಭಾಕಾರಂಜಿಗೂ ಈ ಬೈಕ್‌ನಲ್ಲಿಯೇ ಕರೆದುಕೊಂಡು ಹೋಗುತ್ತಿದ್ರು.

ಶಿಕ್ಷಕ ಸಂತೋಷ್ ಅವರಿಗೆ ಬೇರೆ ಊರಿನ ಶಾಲೆಗೆ ವರ್ಗವಣೆಯಾಗಿದೆ. ಸತತ 16 ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಮಾಡಿದ ಅವರಿಗೆ ಗ್ರಾಮಸ್ಥರೆಲ್ಲಾ ಸೇರಿ ಹಣ ಒಗ್ಗೂಡಿಸಿ ಒಂದುವರೆ ಲಕ್ಷ ಬೆಲೆ ಬಾಳುವ ಬಜಾಜ್ ಪಲ್ಸರ್ ಬೈಕ್ ಗಿಫ್ಟ್​ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net