More

    ಮಲೆನಾಡಿನ ಸ್ಟೈಲ್​​ನಲ್ಲಿ ಕೆಂಪು ಇರುವೆ ಚಟ್ನಿ ಮಾಡುವುದು ಹೇಗೆ? ಬಾಯಲ್ಲಿ ನೀರೂರಿಸುವ ಸರಳ ವಿಧಾನ ಇಲ್ಲಿದೆ..

    ಬೆಂಗಳೂರು: ಇರುವೆಗಳು ಕಂಡರೆ ಸಹವಾಸವೇ ಬೇಡ ಅಂತಾ ಇರುವೆಗಳು ಇರುವ ಕಡೆ ಅಪ್ಪಿತಪ್ಪಿಯೂ ಮುಖ ಹಾಕುವುದಿಲ್ಲ. ಆದರೆ ಮಲೆನಾಡಿನಲ್ಲಿ ಕೆಂಪು ಇರುವೆಎಲ್ಲಿದ್ದಾವೆ ಅಂತಾ ಹುಡುಕುತ್ತಾರೆ. ಕೆಂಪು ಇರುವೆಗಳಿಂದ ರುಚಿಯಾ ಚಟ್ನಿ ಮಾಡಿ ಸವಿಯುತ್ತಾರೆ. ನಾವು ಇಂದು ನಿಮಗೆ ಮೆಲೆನಾಡ ಸ್ಟೈಲ್​​ನಲ್ಲಿ ಕೆಂಪು ಇರುವೆ ಚಟ್ನಿ ಮಾಡುವ ವಿಧಾನವನ್ನು ತಿಳಿಸಿಕೊಡುತ್ತೇವೆ.

    ಬೇಕಾಗುವ ಸಾಮಗ್ರಿಗಳು:
    1) ಕೆಂಪು ಇರುವೆ(ಚಗಳಿ)- ಒಂದು ಕಪ್​
    2)ಈರುಳ್ಳಿ – 1 ದೊಡ್ಡದು
    3) ಬೆಳ್ಳುಳ್ಳಿ- 2
    4) ಶುಂಠಿ- ಸಣ್ಣ ತುಂಡು
    5) ಅರಿಶಿಣ- 1 ಸ್ಟೋನ್​
    6 ) ರುಚಿಗೆ ತಕ್ಕಷ್ಟು ಉಪ್ಪು
    7) ಕೊಬ್ಬರಿ ಎಣ್ಣೆ- 2 ಸ್ಟೋನ್​
    8) ತೆಂಗಿನಕಾಯಿ ತುರಿ- ಅರ್ಧೇ ಕಪ್​
    9) ಹಸಿ ಮೆಣಸಿನಕಾಯಿ – ಬೇಕಾದಷ್ಟು

    ಮಾಡುವ ವಿಧಾನ: ಇರುವೆಗಳನ್ನು ಮನೆಗೆ ತಂದು ಆ ಪಾತ್ರೆಗೆ ಸ್ವಲ್ಪ ಶಾಕ ಕೊಟ್ಟು ಮತ್ತೊಮ್ಮೆ ಚಗಳಿಯನ್ನು ಸೊಪ್ಪು ಸದೆಯಿಂದ ಬೇರ್ಪಡಿಸುತ್ತಾರೆ.

    ಹಸಿ ಮೆಣಸಿನಕಾಯಿ ಅಥವಾ ಜೀರಿನ ಮೆಣಸಿನಕಾಯಿ ಜೊತೆಗೆ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ತೆಂಗಿನಕಾಯಿಯನ್ನು ಹುರಿದುಕೊಂಡು ಚಗಳಿ ಜತೆ ಹಾಕಿ ರುಬ್ಬುವ ಕಲ್ಲಿನಲ್ಲಿ ಕಡೆಯುತ್ತಾರೆ.

    ರುಬ್ಬುವ ವೇಳೆ ಅರಿಶಿನ ಮತ್ತು ಉಪ್ಪಿನ ಪುಡಿಯನ್ನು ಕೂಡ ಮಿಶ್ರಣ ಮಾಡಿ ಚೆನ್ನಾಗಿ ನುಣ್ಣಗೆ ಆಗುವ ತನಕ ಕಲ್ಲಿನಲ್ಲಿ ಕಡೆಯಲಾಗುತ್ತದೆ.

    ಚಗಳಿಯಲ್ಲಿ ಹುಳಿ ಅಂಶ ಇರುವುದರಿಂದ ಯಾವುದೇ ಹುಳಿ ಪದಾರ್ಥಗಳನ್ನು ಚಟ್ನಿಗೆ ಬಳಸುವುದಿಲ್ಲ. ಚೆನ್ನಾಗಿ ರುಬ್ಬುವ ಕಲ್ಲಿನಲ್ಲಿ ಕಡೆದ ಬಳಿಕ ರುಚಿ ರುಚಿಯಾದ ಚಗಳಿ ಚಟ್ನಿ ಸಿದ್ಧವಾಗುತ್ತದೆ. ರೆಡಿಯಾದ ಚಗಳಿ ಚಟ್ನಿಯನ್ನು ಅಕ್ಕಿ ರೊಟ್ಟಿ ಜೊತೆ ಸವಿದರೆ ತುಂಬಾ ಚೆನ್ನಾಗಿರುತ್ತದೆ.

    ಕೆಂಪು ಇರುವೆ ಚಟ್ನಿಗೆ ಲಭಿಸಿತು ಜಿಐ ಟ್ಯಾಗ್; ಈ ಚಟ್ನಿ ಸರ್ವರೋಗಕ್ಕು ಮದ್ದು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts