More

    ಮತದಾರರಿಗೆ ಒಆರ್‌ಎಸ್ ಪಾಕೇಟ್

    ರಾಯಚೂರು: ಬಿಸಿಲ ಪ್ರಖರತೆ ಹೆಚ್ಚಾಗಿರುವುದರಿಂದ ಮತ ಚಲಾಯಿಸಲು ಬರುವ ಮತದಾರರು ನಿರ್ಜಲೀಕರಣಕ್ಕೆ ಒಳಗಾದಲ್ಲಿ ಒಆರ್‌ಎಸ್ ಪಾಕೇಟ್ ವಿತರಣೆಗೆ ಜಿಲ್ಲಾಡಳಿತ ಮುಂದಾಗಿದೆ.
    ಪ್ರತಿ ಚುನಾವಣೆಯಲ್ಲಿ ಎಲ್ಲ ಮತಗಟ್ಟೆಗಳಿಗೆ ವೈದ್ಯಕೀಯ ಕೀಟ್ ವಿತರಿಸಲಾಗುತ್ತಿದ್ದು, ಅದರೊಂದಿಗೆ ಒಆರ್‌ಎಸ್ ಪಾಕೇಟ್‌ಗಳನ್ನು ಕೂಡಾ ವಿತರಿಸಲಾಗುತ್ತಿತ್ತು. ಆದರೆ ಈ ಬಾರಿ ಬಿಸಿಲ ಪ್ರಖರತೆ ಹೆಚ್ಚಾಗಿರುವ ಕಾರಣ ಈ ಬಾರಿ ಹೆಚ್ಚಿನ ಒಆರ್‌ಎಸ್ ಪಾಕೇಟ್ ವಿತರಣೆ ಕ್ರಮಕೈಗೊಳ್ಳಲಾಗುತ್ತಿದೆ.
    ಪ್ರತಿ ಬೂತ್‌ಗೆ ನೀಡಲಾಗುವ ವೈದ್ಯಕೀಯ ಕಿಟ್‌ನಲ್ಲಿ ಪ್ರಥಮ ಚಿಕಿತ್ಸೆಗೆ ಬೇಕಾದ ವೈದ್ಯಕೀಯ ಸಾಮಗ್ರಿ ಜತೆಗೆ 10 ಒಆರ್‌ಎಸ್ ಪಾಕೇಟ್ ನೀಡಲಾಗುತ್ತಿದೆ. ಅದರ ಜತೆಗೆ ಆಶಾ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ಪ್ರತಿ ಬೂತ್‌ಗೆ ತಲಾ 50ರಂತೆ ಒಆರ್‌ಎಸ್ ಪಾಕೇಟ್‌ಗಳನ್ನು ನೀಡಲಾಗುತ್ತಿದೆ.
    ಬೆಳಗ್ಗೆ ಮತ್ತು ಸಂಜೆ ಬಿಸಿಲ ಪ್ರಖರತೆ ಕಡಿಮೆಯಿರುವ ಕಾರಣ ಮತದಾರರಿಗೆ ಒಆರ್‌ಎಸ್ ಪಾಕೆಟ್ ವಿತರಣೆ ಅವಶ್ಯವಿರುವುದಿಲ್ಲ. ಆದರೆ ಮಧ್ಯಾಹ್ನದ ಹೊತ್ತಲ್ಲಿ ಮತ ಚಲಾಯಿಸಲು ಮತಗಟ್ಟೆಗೆ ಬರುವ ಮತದಾರರು ನಿರ್ಜಲೀಕರಣಕ್ಕೆ ಒಳಗಾಗುವ ಸಾಧ್ಯತೆಗಳಿದ್ದು, ಅವಶ್ಯವಿದ್ದರಿಗೆ ಪಾಕೇಟ್ ವಿತರಿಸಲು ಜಿಲ್ಲಾಡಳಿತ ಮುಂದಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts