ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ

ಭಾಷೆ, ಸಂಸ್ಕೃತಿ ಬೆಳೆಸಿಕೊಳ್ಳದ ಜನಾಂಗ ಆಂತರಿಕ ಚೈತನ್ಯ ಕಳೆದುಕೊಳ್ಳುತ್ತದೆ. ದೇಶದ ಮಣ್ಣಿನ ಕಣಕಣದಲ್ಲೂ ಭಾಷೆಯ ಸೌಂದರ್ಯವಿದೆ. ಹಿಂದಿ ರಾಷ್ಟ್ರವನ್ನು ಜೋಡಿಸುವ ಭಾಷೆ ಎಂದು ಭುವನೇಂದ್ರ ಕಾಲೇಜಿನ ಹಿಂದಿ ಉಪನ್ಯಾಸಕ ಡಾ.ಅಶೋಕ್ ಕ್ಲಿಫರ್ಡ್ ಡಿಸೋಜ ಹೇಳಿದರು.
ಮೂಡುಬಿದಿರೆ ಕಲ್ಲಬೆಟ್ಟುವಿನ ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನಲ್ಲಿ ಹಿಂದಿ ಉತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಶಿಕ್ಷಕ ಶಿವಪ್ರಸಾದ್ ಭಟ್, ಶಿಕ್ಷಕರಾದ ನವೀನ್, ಸುಪ್ರಿಯಾ ಉಪಸ್ಥಿತರಿದ್ದರು.
ಕಾರ್ಯಕ್ರಮ ಸಂಯೋಜಕಿ ಉಪನ್ಯಾಸಕಿ ದಿವ್ಯಲಕ್ಷ್ಮಿ ರೈ ಪ್ರಾಸ್ತಾವಿಕ ಮಾತನಾಡಿದರು. ಹರ್ಷಲ್ ಸ್ವಾಗತಿಸಿದರು. ನವ್ಯಾ ವಂದಿಸಿದರು. ಮುಕ್ತಾ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳಿಂದ ಕವ್ವಾಲಿ ಗಝಲ್ ಪ್ರದರ್ಶನಗೊಂಡಿತು.