

ಕಾಸರಗೋಡು: ಚೆರ್ವತ್ತೂರು ಚೀಮೇನಿ ರಸ್ತೆಯ ಆನಿಕ್ಕಾಡಿ ಎಂಬಲ್ಲಿ ಸ್ಕೂಟರ್ ಹಾಗೂ ಬುಲೆಟ್ ಬೈಕ್ ಡಿಕ್ಕಿಯಾಗಿ, ಸ್ಕೂಟರ್ ಚಾಲಕ ಮೃತಪಟ್ಟಿದ್ದಾರೆ. ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ, ಭೀಮನಡಿ ವಾಳಪ್ಪಳ್ಳಿ ನಿವಾಸಿ ಹಾಗೂ ಚೀಮೇನಿ ಅತ್ತುಟ್ಟಿಯಲ್ಲಿ ವಾಸಿಸುತ್ತಿರುವ ಟಿ. ಅಶ್ರಫ್(49)ಮೃತಪಟ್ಟವರು. ಬುಲೆಟ್ ಸವಾರ ನಿಡುಂಬ ನಿವಾಸಿ ಅಖಿಲ್ ಗಂಭೀರ ಗಾಯಗೊಂಡಿದ್ದು, ಕಣ್ಣೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸ್ಕೂಟರ್ ಸವಾರ ಅಶ್ರಫ್‌ರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ಅಶ್ರಫ್ ಜಿಲ್ಲಾಧಿಕಾರಿ ಕಚೇರಿಯ ಎಸ್‌ಸಿಎಸ್‌ಟಿ ಸೆಕ್ಷನ್ ಸಿಬ್ಬಂದಿಯಾಗಿದ್ದರು. ಮುಸ್ಲಿಂ ಲೀಗ್ ಪೋಷಕ ಸಂಟನೆ ಎಸ್‌ಇಯು ಜಿಲ್ಲಾ ಕಾರ್ಯದರ್ಶಿ ಹಾಗೂ ಅತ್ತುಟ್ಟಿ ಜವಾಅತ್ ಸಮಿತಿ ಸದಸ್ಯರಾಗಿದ್ದರು.