

ಲಂಡನ್: ಕರೊನಾ ಮೂರನೇ ಅಲೆ ಪ್ರವೇಶ ಮಾಡಿರುವ ಹೊತ್ತಿನಲ್ಲಿ ಬಹುತೇಕ ಎಲ್ಲರೂ ಎರಡು ಡೋಸ್ ಲಸಿಕೆ ಪಡೆದುಕೊಂಡಿದ್ದರೆ, ಇನ್ನು ಕೆಲವರು ಬೂಸ್ಟರ್ ಡೋಸ್ ಲಸಿಕೆ ಪಡೆಯುವ ಯೋಚನೆಯಲ್ಲಿದ್ದಾರೆ. ಮತ್ತೊಂದೆಡೆ 15ರಿಂದ 18ನೇ ವಯಸ್ಸಿನವರಿಗೆ ಲಸಿಕೀಕರಣ ಆರಂಭವಾಗಿದ್ದರೆ, ಇನ್ನೊಂದೆಡೆ 12ರಿಂದ 14ರ ವಯಸ್ಸಿನವರಿಗೂ ಮಾರ್ಚ್ನಲ್ಲಿ ಲಸಿಕೆ ನೀಡಲು ಸಿದ್ಧತೆ ನಡೆಯುತ್ತಿದೆ.
ಈ ನಡುವೆ ಎರಡು ಡೋಸ್ ಲಸಿಕೆ ತೆಗೆದುಕೊಂಡರೂ ನೆಮ್ಮದಿ ಇಲ್ಲ ಎಂಬಂಥ ಅಂಶವೊಂದು ಹೊರಬಿದ್ದಿದೆ. ಅದರಲ್ಲೂ ಈ ಅಧ್ಯಯನದ ಅಂಶವನ್ನು ಯುಕೆ ಸರ್ಕಾರವೂ ಒಪ್ಪಿಕೊಂಡಿದ್ದು, ಆತಂಕಕಾರಿ ವಿಷಯವೊಂದು ಬಹಿರಂಗಗೊಂಡಿದೆ. ಯುಕೆ ಆರೋಗ್ಯ ಇಲಾಖೆಗೆ ಸಲ್ಲಿಕೆ ಆಗಿರುವ 'ಕೋವಿಡ್-19 ವ್ಯಾಕ್ಸಿನ್ ಸರ್ವೆಯಲೆನ್ಸ್ ರಿಪೋರ್ಟ್'ನಲ್ಲಿ ಈ ಅಂಶ ಉಲ್ಲೇಖಗೊಂಡಿದೆ. ಎರಡೂ ಡೋಸ್ ಲಸಿಕೆ ಪಡೆದಿರುವವರಲ್ಲಿ ಸಹಜ ರೋಗನಿರೋಧಕ ಶಕ್ತಿ ಲಸಿಕೆಯಿಂದಾಗಿ ಹಾನಿಗೊಂಡಿದೆ ಎಂಬುದನ್ನು ಯುಕೆ ಸರ್ಕಾರ ಒಪ್ಪಿದೆ.
ಒಮ್ಮೆ ಎರಡೂ ಡೋಸ್ ಲಸಿಕೆ ಪಡೆದುಕೊಂಡರೆ ಕೋವಿಡ್-19 ಅಥವಾ ಯಾವುದೇ ಇತರ ವೈರಸ್ ವಿರುದ್ಧ ಸಂಪೂರ್ಣ ಸಹಜ ರೋಗನಿರೋಧಕ ಶಕ್ತಿ ಹೊಂದಲು ಸಾಧ್ಯವಿಲ್ಲ ಎಂಬುದನ್ನು ಈ ವರದಿಯ ಅಂಶಗಳಲ್ಲಿ ಕಂಡುಬಂದಿದೆ. ಎರಡು ಡೋಸ್ ಲಸಿಕೆ ಪಡೆದ ಬಳಿಕ ಸೋಂಕಿಗೆ ಒಳಗಾದವರಲ್ಲಿ ಎನ್ ಆ್ಯಂಟಿಬಾಡಿ ಮಟ್ಟ ತಗ್ಗಿರುವುದು ಕಂಡುಬಂದಿದೆ. ಮಾತ್ರವಲ್ಲ ಲಸಿಕೆ ಪಡೆಯದವರಿಗಿಂತ ಲಸಿಕೆ ಪಡೆದ ವಯಸ್ಕರೇ ಸೋಂಕಿಗೆ ಹೆಚ್ಚಾಗಿ ಒಳಗಾಗುತ್ತಿರುವುದು ಕೂಡ ಈ ವರದಿಯಲ್ಲಿ ಕಂಡುಬಂದಿದೆ.
ಮುಂದೆ ಸೋಂಕಿಗೆ ಒಳಗಾದಾಗ ವೈರಸ್ನ ಸ್ಪೈಕ್ ಪ್ರೊಟೀನ್ ಅಥವಾ ಅದರ ಇತರ ಯಾವುದೇ ಭಾಗದ ವಿರುದ್ಧ ದೇಹ ಆ್ಯಂಟಿಬಾಡಿ ಉತ್ಪಾದಿಸುವ ಸಾಮರ್ಥ್ಯವನ್ನು ಈ ಲಸಿಕೆ ಕುಗ್ಗಿಸುತ್ತದೆ ಎಂಬುದನ್ನೂ ಈ ವರದಿ ಹೊರಗೆಡಹಿದೆ. ಹೀಗಾಗಿ ಲಸಿಕೀಕರಣಕ್ಕೆ ಒಳಗಾದವರು ಈಗಾಗಲೇ ಸೋಂಕಿಗೆ ಒಳಗಾಗಿ ಗುಣವಾಗಿದ್ದರೂ ಮುಂದೆ ಯಾವುದೇ ರೂಪಾಂತರಿ ವೈರಸ್ಗೆ ಬೇಗ ತುತ್ತಾಗುವ ಸಾಧ್ಯತೆ ಇರುತ್ತದೆ ಎಂಬುದೂ ಕಂಡುಬಂದಿದೆ.
ಮತ್ತೊಂದೆಡೆ ಲಸಿಕೆ ಪಡೆಯದವರು ಒಮ್ಮೆ ಸೋಂಕಿಗೆ ಒಳಗಾದರೆ ಸಂಬಂಧಿತ ವೈರಸ್ನ ಎಲ್ಲ ವರ್ಗದ ಸೋಂಕಿಗೂ ಶಾಶ್ವತವಲ್ಲದಿದ್ದರೂ ದೀರ್ಘಕಾಲೀನ ರೋಗನಿರೋಧಕ ಶಕ್ತಿ ಪಡೆದಿರುತ್ತಾರೆ ಎನ್ನಲಾಗಿದೆ.