ಅಚ್ಚರಿ ಮೂಡಿಸಿದ ಮೂರು ಕಾಲಿನ ಆನೆ; ಈ ಸ್ಟೋರಿ ಓದಿ..

elephant
Published on

ದಕ್ಷಿಣ ಆಫ್ರಿಕಾ: ಮೂರು ಕಾಲಿನ ಆನೆಯೊಂದು ದಕ್ಷಿಣ ಆಫ್ರಿಕಾ ಅರಣ್ಯದಲ್ಲಿ ಪತ್ತೆಯಾಗಿದೆ. ಈ ಆನೆಯ ಕಥೆಯೊಂದು ಸೋಶಿಯಲ್​​ ಮೀಡಿಯಾದಲ್ಲಿ ಸಖತ್​ ವೈರಲ್​​ ಆಗಿದೆ.

ಈ ಮೂರು ಕಾಲಿನ ಆನೆಯ ಸ್ಪೂರ್ತಿದಾಯಕ ಕಥೆಯನ್ನು ಕಂಟೆಂಟ್ ಕ್ರಿಯೇಟರ್ ಡೈಲನ್ ಪೊನ್ಸ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾದ ಸತಾರಾದಲ್ಲಿ ಈ ಮೂರು ಕಾಲಿನ ಆನೆಯನ್ನು ನೋಡಿದ ಅನುಭವವನ್ನು ನೆನಪಿಸಿಕೊಂಡಿದ್ದಾರೆ.

ಆನೆಗಳ ಗುಂಪು ನೀರಿನಲ್ಲಿ ಆಟವಾಡುತ್ತಿದ್ದವು. ಈ ಆನೆ ಒಂದು ಕಾಲು ಕಳೆದುಕೊಂಡಿದ್ದು, ಮೊದಲಿಗೆ ತಿಳಿದಿರಲ್ಲಿಲ್ಲ. ತನ್ನ ಆನೆಗಳ ಹಿಂಡಿನೊಂದಿಗೆ  ಸುಂದರ ಜೀವನ ನಡೆಸುತ್ತಿತ್ತು ಈ ಮುದ್ದಾದ ಆನೆ. ದುರದೃಷ್ಟವಶಾತ್ ಆನೆಗಳಿಗೆ ಸಾಮಾನ್ಯವಾಗಿ ಕಂಡುಬರುವ ಕಾಯಿಲೆಯಿಂದಾಗಿ ಈ ಆನೆ ತನ್ನ ಅಂಗವನ್ನು ಕಳೆದುಕೊಂಡಿರಬಹುದು ಅಥವಾ ನರಭಕ್ಷಕ ದಾಳಿಗೆ ಬಲಿಯಾಗಿರಬಹುದು ಎಂಬುದು ತಿಳಿದಿಲ್ಲ. ಆದರೆ ಈ ಆನೆಗೆ ಮೂರು ಕಾಲುಗಳು ಮಾತ್ರ ಇದೆ. ಆನೆ ತನ್ನ ಹಿಂಡುಗಳೊಂದಿಗೆ ಓಡಾಡಿಕೊಂಡು ತನ್ನದೇ ರೀತಿಯಲ್ಲಿ ಜೀವನವನ್ನುನಡೆಸುತ್ತಿದೆ. ಇದು ಹೃದಯಸ್ಪರ್ಶಿಯಾಗಿತ್ತು ಎಂದು ತಮ್ಮ ಅನುಭವವವನ್ನು ಹಂಚಿಕೊಂಡಿದ್ದಾರೆ.

ಇಂತಹ ಯಾವುದೇ ಇತರ ಗಾಯಗೊಂಡ ಪ್ರಾಣಿಗಳನ್ನು ರಸ್ತೆಯ ಸಮೀಪದಲ್ಲಿ ನೋಡಿದರೆ, ನಿಮ್ಮಿಂದ ಆದ ಸಹಾಯ ಮಾಡಿ. ಮಾನವೀಯತೆಯಿಂದ ಅವುಗಳನ್ನು ನೋಡಿ ಎಂದು ಸೋಶಿಯಲ್​​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಈ ಪೋಸ್ಟ್​ ನೋಡಿದ ನೆಟ್ಟಿಗರು ಕಾಮೆಂಟ್ ಮಾಡುತ್ತಾ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net