ಇತಿಹಾಸದಲ್ಲಿ ನಂಜೇಗೌಡ, ಉರಿಗೌಡ‌ ಇದ್ದಾರಾ?; ಡಿಕೆಶಿ ಪ್ರಶ್ನೆ

dks
Published on

ಬೆಂಗಳೂರು: ಇತಿಹಾಸದಲ್ಲಿ ನಂಜೇಗೌಡ, ಉರಿಗೌಡ‌ ಇದ್ದಾರಾ? ಯಾವ ಉರಿಗೌಡನೂ ಇಲ್ಲವೆಂದು ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಬಿಜೆಪಿಯನ್ನು ಟೀಕೆ ಮಾಡಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾವ ಇತಿಹಾಸದಲ್ಲಿ ನಂಜೇಗೌಡ, ಉರಿಗೌಡ‌ ಇದ್ದಾರೆ. ಇವರ ಹೆಸರಿನಲ್ಲಿ ಮಹಾದ್ವಾರ ನಿರ್ಮಾಣ ಮಾಡಲು ಹೇಳಿದ್ದು ಯಾರು? ಎಂದು ಪ್ರಶ್ನೆ ಮಾಡಿ ಕಿಡಿಕಾರಿದ್ದಾರೆ.

ಶೃಂಗೇರಿ, ಶ್ರೀರಂಗಪಟ್ಟಣಕ್ಕೆ ಅದರದ್ದೇ ಆದ‌ ಇತಿಹಾಸ‌ ಇದೆ. ಅಂಬೇಡ್ಕರ್, ಗಾಂಧಿ, ನಾರಾಯಣಗುರು ಯಾರನ್ನ ಇವರು ಬಿಟ್ಟಿಲ್ಲ. ಕೂಡಲ್ ಪ್ರವೀಣ್ ಸೂದ್ ವರ್ಗಾವಣೆ ಆಗಬೇಕು, ನಾನು ಒಳ್ಳೆಯ ಅಧಿಕಾರಿ ಅನ್ಕೊಂಡಿದ್ದೆ. ಆದರೆ ಮೂರು ‌ವರ್ಷ ಆದರೂ ಪ್ರವೀಣ್ ಸೂದ್ ವರ್ಗಾವಣೆ ಆಗಿಲ್ಲ. ನಮ್ಮ ಮೇಲೆ ಮಾತ್ರ ಕೇಸ್ ಹಾಕುತ್ತಾರೆ.

ಮಂಡ್ಯ ಸಮಾವೇಶಕ್ಕೆ 300 ರೂಪಾಯಿ ನೀಡಿ ಜನ ಕರೆ ತಂದಿದ್ದಾರೆ. ನಾವು ಅಧಿಕಾರಕ್ಕೆ ‌ಬಂದಾಗ‌ ಇವರ ಮೇಲೆ ಕ್ರಮ ತೆಗೆದುಕೊಳ್ಳುವುದು ಖಚಿತವಾಗಿದೆ. ಅಧಿಕಾರಿಗಳಿಗೆ ಡಿ.ಕೆ ಶಿವಕುಮಾರ್ ಎಚ್ಚರಿಕೆ ಕೊಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net