ಮುಂಬೈ: ಈ ಷೇರುಗಳ ಬೆಲೆ 3 ದಿನಗಳಲ್ಲಿ 65% ರಷ್ಟು ಏರಿಕೆಯಾಗಿದ್ದು, ಅನುಭವಿ ಹೂಡಿಕೆದಾರರು 3,00,000 ಕ್ಕೂ ಹೆಚ್ಚು ಷೇರುಗಳನ್ನು ಖರೀದಿಸಿದ್ದಾರೆ.
ಬೆಸ್ಟ್ ಆಗ್ರೋಲೈಫ್ ಲಿಮಿಟೆಡ್ (Best Agrolife Ltd.) ಷೇರುಗಳಲ್ಲಿ ಬಿರುಗಾಳಿಯ ಏರಿಕೆ ಕಂಡುಬಂದಿದೆ. ಕಂಪನಿಯ ಷೇರುಗಳು ಕೇವಲ 3 ದಿನಗಳಲ್ಲಿ 65% ಏರಿಕೆಯಾಗಿದೆ. ಬೆಸ್ಟ್ ಆಗ್ರೋಲೈಫ್ ಷೇರುಗಳ ಬೆಲೆ 3 ದಿನಗಳಲ್ಲಿ 458.10 ರೂ.ನಿಂದ 756.50 ರೂ.ಗೆ ಏರಿಕೆಯಾಗಿದೆ. ಹಿರಿಯ ಹೂಡಿಕೆದಾರ ಆಶಿಶ್ ಕಚೋಲಿಯಾ ಕೂಡ ಕಂಪನಿಯ 3 ಲಕ್ಷಕ್ಕೂ ಹೆಚ್ಚು ಷೇರುಗಳನ್ನು ಖರೀದಿಸಿದ್ದಾರೆ.
ಕೀಟನಾಶಕಗಳು ಮತ್ತು ಕೃಷಿ ರಾಸಾಯನಿಕಗಳ ಉದ್ಯಮಕ್ಕೆ ಸಂಬಂಧಿಸಿದ ಸಣ್ಣ ಕ್ಯಾಪ್ ಕಂಪನಿಯಾದ ಬೆಸ್ಟ್ ಆಗ್ರೋಲೈಫ್ ಲಿಮಿಟೆಡ್‌ನ ಷೇರುಗಳ ಬೆಲೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ.
ಬೆಸ್ಟ್ ಆಗ್ರೊಲೈಫ್ ಷೇರುಗಳ ಬೆಲೆ ಬುಧವಾರ 16% ರಷ್ಟು ಭಾರಿ ಏರಿಕೆಯೊಂದಿಗೆ 756.50 ರೂ. ತಲುಪಿದೆ. 3 ದಿನಗಳಲ್ಲಿ ಕಂಪನಿಯ ಷೇರುಗಳ ಬೆಲೆ 65% ಜಿಗಿದಿವೆ. ಬೆಸ್ಟ್ ಆಗ್ರೋಲೈಫ್ ಷೇರುಗಳ ಬೆಲೆ 3 ದಿನಗಳಲ್ಲಿ 458.10 ರೂ.ನಿಂದ 756.50 ರೂ.ಗೆ ಏರಿಕೆಯಾಗಿದೆ. ಬುಧವಾರದ ವಹಿವಾಟಿನ ಅಂತ್ಯಕ್ಕೆ ಕಂಪನಿಯ ಷೇರುಗಳ ಬೆಲೆ 662.65 ರೂ.ಗೆ ತಲುಪಿದೆ.
ದಿಗ್ಗಜ ಹಾಗೂ ಅನುಭವಿ ಹೂಡಿಕೆದಾರ ಆಶಿಶ್ ಕಚೋಲಿಯಾ ಕೂಡ ಬೆಸ್ಟ್ ಆಗ್ರೋಲೈಫ್ ಮೇಲೆ ದೊಡ್ಡ ಬಾಜಿ ಕಟ್ಟಿದ್ದಾರೆ.
ಕಳೆದ 6 ವರ್ಷಗಳಲ್ಲಿ ಬೆಸ್ಟ್ ಆಗ್ರೊಲೈಫ್‌ನ ಷೇರುಗಳ ಬೆಲೆಯಲ್ಲಿ 26,000% ಕ್ಕಿಂತ ಹೆಚ್ಚು ಜಿಗಿತ ಕಂಡುಬಂದಿದೆ. ಕಂಪನಿಯ ಷೇರುಗಳ ಬೆಲೆ ಏಪ್ರಿಲ್ 3, 2018 ರಂದು 2.50 ರೂ. ಇತ್ತು. ಏಪ್ರಿಲ್ 3, 2024 ರಂದು ಷೇರುಗಳ ಬೆಲೆ 662.65 ರೂ. ತಲುಪಿದೆ.
ಕಳೆದ 6 ವರ್ಷಗಳಲ್ಲಿ, ಬೆಸ್ಟ್ ಆಗ್ರೊಲೈಫ್ ಷೇರುಗಳ ಬೆಲೆ 26,400% ರಷ್ಟು ವೇಗವಾಗಿ ಏರಿಕೆ ಕಂಡಿದೆ. ಕಳೆದ 4 ವರ್ಷಗಳಲ್ಲಿ, 221% ರಷ್ಟು ಏರಿಕೆಯಾಗಿದೆ. ಕಂಪನಿಯ ಷೇರುಗಳ 52 ವಾರದ ಗರಿಷ್ಠ ಬೆಲೆ 1374 ರೂ. ಹಾಗೂ ಕನಿಷ್ಠ ಬೆಲೆ 453.75 ರೂ. ಇದೆ.
ಆಶಿಶ್ ಕಚೋಲಿಯಾ ಅವರು ಈ ಕಂಪನಿಯ 300000 ಕ್ಕೂ ಹೆಚ್ಚು ಷೇರುಗಳನ್ನು ಖರೀದಿಸಿದ್ದಾರೆ. ಆಶಿಶ್ ಕಚೋಲಿಯಾ ಅವರು ಕಂಪನಿಯ 321202 ಷೇರುಗಳನ್ನು ಹೊಂದಿದ್ದಾರೆ ಅಥವಾ ಕಂಪನಿಯಲ್ಲಿ 1.36% ಪಾಲನ್ನು ಹೊಂದಿದ್ದಾರೆ. ಕಚೋಲಿಯಾ ಅವರನ್ನು ಹೊರತುಪಡಿಸಿ, ಕ್ವಾಂಟ್ ಮ್ಯೂಚುಯಲ್ ಫಂಡ್ ಕೂಡ ಬೆಸ್ಟ್ ಆಗ್ರೋಲೈಫ್ ಮೇಲೆ ಬಾಜಿ ಕಟ್ಟಿದೆ. ಕ್ವಾಂಟ್ ಸ್ಮಾಲ್ ಕ್ಯಾಪ್ ಫಂಡ್ ಈ ಕಂಪನಿಯ 5,00,000 ಷೇರುಗಳನ್ನು ಖರೀದಿಸಿದೆ.
ಕಳೆದ 6 ತಿಂಗಳಲ್ಲಿ ಈ ಕಂಪನಿಯ ಷೇರುಗಳ ಬೆಲೆ ಅಂದಾಜು ಶೇ. 40ರಷ್ಟು ಕುಸಿದಿವೆ. ಬೆಸ್ಟ್ ಆಗ್ರೋಲೈಫ್ ಷೇರುಗಳ ಬೆಲೆ ಅಕ್ಟೋಬರ್ 4, 2023 ರಂದು ರೂ 1091.40 ರಷ್ಟಿತ್ತು, ಅದು ಈಗ ರೂ 662.65 ತಲುಪಿದೆ. ಈ ವರ್ಷ ಇಲ್ಲಿಯವರೆಗೆ, ಬೆಸ್ಟ್ ಆಗ್ರೋಲೈಫ್ ಷೇರುಗಳು ಅಂದಾಜು 22% ರಷ್ಟು ಕುಸಿತ ಕಂಡಿವೆ. ಈ ಷೇರಿನ ಸಾರ್ವಕಾಲಿಕ ಗರಿಷ್ಠ ಬೆಲೆ ರೂ. 1,774.45 ಹಾಗೂ ಕನಿಷ್ಠ ಬೆಲೆ ರೂ. 2.50 ಇದೆ.
ರೂ. 202ರಿಂದ 80 ಕುಸಿದ ಬ್ಯಾಂಕ್ ಷೇರಿಗೆ ಈಗ ಬೇಡಿಕೆ: 100 ರೂಪಾಯಿ ದಾಟಲಿದೆ ಎನ್ನುತ್ತಾರೆ ತಜ್ಞರು