ಮುಂಬೈ: ಮಂದಗತಿಯ ಮಾರುಕಟ್ಟೆ ಚಲನೆಯ ನಡುವೆಯೇ ಹೂಡಿಕೆದಾರರು ಬುಧವಾರ ಐಡಿಬಿಐ ಬ್ಯಾಂಕ್ ಷೇರುಗಳ ಮೇಲೆ ಮುಗಿಬಿದ್ದರು. ವಾರದ ಮೂರನೇ ವಹಿವಾಟಿನ ದಿನವಾದ ಬುಧವಾರ ಈ ಷೇರು ಬೆಲೆ ಇಂಟ್ರಾ ಡೇ ವಹಿವಾಟಿನಲ್ಲಿ ಅಂದಾಜು ಶೇಕಡಾ 6 ಏರಿಕೆಯಾಗಿ 88.35 ರೂ. ತಲುಪಿತ್ತು. ಅಂತಿಮವಾಗಿ, 5.34%ರಷ್ಟು ಏರಿಕೆಯಾಗಿ, 87.85 ರೂ.ಗೆ ತಲುಪಿತು.
ಈ ಷೇರು ಬೆಲೆ ಮುಂದಿನ ದಿನಗಳಲ್ಲಿ ಏರಿಕೆಯಾಗಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.
ಎಲ್‌ಕೆಪಿ ಸೆಕ್ಯುರಿಟೀಸ್ ಬ್ರೋಕರೇಜ್ ಸಂಸ್ಥೆಯ ಹಿರಿಯ ತಾಂತ್ರಿಕ ಮತ್ತು ಉತ್ಪನ್ನಗಳ ತಜ್ಞ ಕುನಾಲ್ ಶಾ ಅವರು, ಐಡಿಬಿಐ ಬ್ಯಾಂಕ್‌ನ ಷೇರು ಬೆಲೆ 93 ರಿಂದ 100 ರೂ. ತಲುಪಲಿದೆ ಎಂದಿದ್ದಾರೆ. ಈ ಷೇರನ್ನು ಖರೀದಿಸಲು ಅವರು ಸಲಹೆ ನೀಡಿದ್ದಾರೆ. ತಜ್ಞರು ಸ್ಟಾಪ್ ಲಾಸ್ ಅನ್ನು 82 ರೂ.ಗೆ ನಿಗಪಡಿಸಿದ್ದಾರೆ.
ಫೆಬ್ರವರಿ 2024 ರಲ್ಲಿ ಈ ಷೇರು ರೂ 98 ರ ಮಟ್ಟವನ್ನು ತಲುಪಿತ್ತು. ಈ ಷೇರುಗಳ ಸಾರ್ವಕಾಲಿಕ ಗರಿಷ್ಠ ಬೆಲೆ ರೂ. 202.25 ಹಾಗೂ ಕನಿಷ್ಠ ಬೆಲೆ ರೂ. 13.90 ಇದೆ.
ತಜ್ಞರ ಪ್ರಕಾರ, ಈ ಷೇರುಗಳು ಇತ್ತೀಚೆಗೆ ಒತ್ತಡದಿಂದ ಹೊರಬಂದಿವೆ. ಇದರೊಂದಿಗೆ ವಹಿವಾಟಿನ ಪ್ರಮಾಣವೂ ಹೆಚ್ಚಿದೆ. ಇದು ಹೂಡಿಕೆದಾರರಿಂದ ಹೆಚ್ಚುತ್ತಿರುವ ಆಸಕ್ತಿಯ ಸಂಕೇತವಾಗಿದೆ.
ಸಾಕಷ್ಟು ಪ್ರಮಾಣದ ಬೆಂಬಲದೊಂದಿಗೆ ಸ್ಟಾಕ್ ತನ್ನ 20-ದಿನದ ಚಲಿಸುವ ಸರಾಸರಿಯನ್ನು (20DMA) ದಾಟಿದೆ. ಈ ಸಾಮೂಹಿಕ ಸಂಕೇತಗಳು ಸ್ಟಾಕ್ ಪ್ರಬಲವಾಗಿದೆ ಎಂದು ಸೂಚಿಸುತ್ತದೆ. ಈ ಷೇರು ಅಲ್ಪಾವಧಿಯಲ್ಲಿ ಏರಿಕೆಯಾಗಲಿದೆ.
ಸರ್ಕಾರ ಪಾಲು ಮಾರಾಟ:
ಪ್ರಸ್ತುತ ಹಣಕಾಸು ವರ್ಷದಲ್ಲಿ 2024-25 ರಲ್ಲಿ ಐಡಿಬಿಐ ಬ್ಯಾಂಕ್‌ನ ಕಾರ್ಯತಂತ್ರದ ಮಾರಾಟವನ್ನು ಸರ್ಕಾರ ಪೂರ್ಣಗೊಳಿಸಬಹುದು. ಇತ್ತೀಚೆಗೆ, ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆಯ (ಡಿಐಪಿಎಎಂ) ಕಾರ್ಯದರ್ಶಿ ತುಹಿನ್ ಕಾಂತಾ ಪಾಂಡೆ ಅವರು, ಐಡಿಬಿಐ ಬ್ಯಾಂಕ್ ಖಾಸಗೀಕರಣ ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
ನಿಯಂತ್ರಕರ ಅನುಮೋದನೆ ಪಡೆದ ನಂತರ ಹಣಕಾಸು ಬಿಡ್‌ಗಳನ್ನು ಆಹ್ವಾನಿಸಲಾಗುತ್ತದೆ. ಎಲ್‌ಐಸಿ ಜೊತೆಗೆ ಐಡಿಬಿಐ ಬ್ಯಾಂಕ್‌ನಲ್ಲಿ ಸರ್ಕಾರವು ಅಂದಾಜು 61 ಪ್ರತಿಶತ ಪಾಲನ್ನು ಮಾರಾಟ ಮಾಡುತ್ತಿದೆ. ಇದಕ್ಕಾಗಿ, ಅಕ್ಟೋಬರ್ 2022 ರಲ್ಲಿ ಖರೀದಿದಾರರಿಂದ ಬಿಡ್‌ಗಳನ್ನು ಆಹ್ವಾನಿಸಲಾಗಿದೆ.
ಡಿಸೆಂಬರ್‌ನ ಹೊತ್ತಿಗೆ, ಸರ್ಕಾರ ಮತ್ತು ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಈ ಬ್ಯಾಂಕ್‌ನಲ್ಲಿ ಶೇಕಡಾ 94.71 ಪಾಲನ್ನು ಹೊಂದಿದೆ.
ದಾಖಲೆ ಬರೆದ ಅದಾನಿ ಪವರ್ ಷೇರು ಬೆಲೆ: ಈ ಸ್ಟಾಕ್ನಲ್ಲಿ ಹೂಡಿಕೆ ಮಾಡುವ ಕುರಿತು ತಜ್ಞರು ಏನು ಹೇಳುತ್ತಾರೆ?