ವಿದ್ಯಾರ್ಥಿಗಳ ಕಲಿಕೆಯಲ್ಲಿ ಪಾಲಕರ ಪಾತ್ರ ಮುಖ್ಯ

blm
Published on

ಕಾರ್ಕಳ: ವಿದ್ಯಾರ್ಥಿಗಳ ಕಲಿಕೆಯಲ್ಲಿ ಗುರುಗಳ ಪಾತ್ರ ಎಷ್ಟು ಮಹತ್ವವಾಗಿದೆಯೋ ಅಷ್ಟೇ ಪಾಲಕರ ಪಾತ್ರವೂ ಮುಖ್ಯ ಎಂದು ಸಹ ಸಂಸ್ಥಾಪಕ ಗಣಪತಿ ಭಟ್ ಕೆ.ಎಸ್. ಹೇಳಿದರು.

ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಶಿಕ್ಷಕ-ಪಾಲಕರ ಸಭೆ ಉದ್ದೇಶಿಸಿ ಮಾತನಾಡಿದರು.

ಸಂಸ್ಥಾಪಕ ಡಾ.ಬಿ.ಗಣನಾಥ ಶೆಟ್ಟಿ ಮಾತನಾಡಿ, ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಪಾಲಕರ ಪಾತ್ರ ಅತ್ಯಂತ ಮಹತ್ವವಾಗಿದೆ. ಶಾಲೆಯಲ್ಲಿ ದೊರಕುವ ಶಿಕ್ಷಣದ ಜತೆಗೆ ಮನೆಯಲ್ಲಿ ಒಳ್ಳೆಯ ವಾತಾವರಣ ನಿರ್ಮಾಣಗೊಂಡಾಗ ಮಕ್ಕಳು ಕಲಿಕೆಯಲ್ಲಿ ಉನ್ನತ ಮಟ್ಟ ಏರಲು ಸಾಧ್ಯ ಎಂದರು.

ಮುಂದಿನ ಶಿಕ್ಷಣಕ್ಕೆ ದೊರಕುವ ವಿದ್ಯಾರ್ಥಿವೇತನ ಕುರಿತು ವಿಜಯ ಕುಮಾರ್ ಮಾಹಿತಿ ನೀಡಿದರು. ಉಪನ್ಯಾಸಕಿ ಪ್ರಿಯಾಂಕ ತೀರ್ಥರಾಮ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net