ಪೆರ್ಡೂರು ಮೇಳದ ಹೆಸರಾಂತ ಯಕ್ಷಗಾನ ಕಲಾವಿದ ನಾಪತ್ತೆ

yakshagana
Published on

ಉಡುಪಿ: ಬಡುಗುತಿಟ್ಟನ ಹೆಸರಾಂತ ಯಕ್ಷಗಾನ ಕಲಾವಿದರೊಬ್ಬರು ನಾಪತ್ತೆಯಾಗಿರುವ ವಿಷಯ ಇದೀಗ ಹೊರಬಿದ್ದಿದೆ. ಏಪ್ರಿಲ್​ 21ರಿಂದ ಕಲಾವಿದರು ಕಾಣೆಯಾಗಿರುವುದಾಗಿ ತಿಳಿಸಲಾಗಿದೆ.

ಮತ್ಯಾಡಿ ಗುಡ್ಡೆಯಂಗಡಿ ನಿವಾಸಿ ಕಡಬಾಳ ಉದಯ ಹೆಗಡೆ (37) ನಾಪತ್ತೆಯಾದವರು. ಇವರು ಕರಾವಳಿಯ ಹೆಸರಾಂತ ಪೆರ್ಡೂರು ಮೇಳದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಏಪ್ರಿಲ್​ 21ರಂದು ಮನೆಯಿಂದ ಕಾರಿನಲ್ಲಿ ತೆರಳಿದ್ದ ಅವರು ವಾಪಾಸು ಮನೆಗೆ ಬಂದಿಲ್ಲ. ಬಂಧು ಮಿತ್ರರು, ಸ್ನೇಹಿತರು ಎಲ್ಲರ ಮನೆಯಲ್ಲೂ ವಿಚಾರಿಸಲಾಗಿದೆ. ಉದಯ ಹೆಗಡೆ ಅವರ ಫೋನ್​ ಕೂಡ ಸಂಪರ್ಕಕ್ಕೆ ಸಿಗುತ್ತಿಲ್ಲ. ಇದರಿಂದಾಗಿ ಭಯ ಪಟ್ಟಿರುವ ಅವರ ಪತ್ನಿ ಅಶ್ವಿನಿ ಕೊಂಡದಕುಳಿ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದಾರೆ. ಕೋಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದ್ದು, ಉದಯ ಅವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net