ನಾದಿನಿ ಜತೆ ಭಾವನ ಅಕ್ರಮ ಸಂಬಂಧ! ಅವಳಿ ಮಕ್ಕಳನ್ನು ಗರ್ಭದಲ್ಲಿ ಹೊತ್ತಿದ್ದ ಹೆಂಡತಿಯನ್ನೇ ಕೊಂದ ಗಂಡ!

pregnant
Published on

ನವದೆಹಲಿ: ಅವಳಿ ಜವಳಿ ಮಕ್ಕಳನ್ನು ಗರ್ಭದಲ್ಲಿ ಹೊತ್ತಿದ್ದ ಹೆಂಡತಿಯನ್ನು ಗಂಡನೇ ಗುಂಡಿಕ್ಕಿ ಕೊಲೆ ಮಾಡಿರುವ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದಿದೆ.

ಸೈನಾ ಹೆಸರಿನ ಮಹಿಳೆ ಸಾವನ್ನಪ್ಪಿರುವ ದುರ್ದೈವಿ. ಸೈನಾ ಡ್ರಗ್ಸ್​ ಪ್ರಕರಣವೊಂದರ ಮೇಲೆ ಜೈಲು ಸೇರಿದ್ದು, ಶನಿವಾರವಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಳು. ಗರ್ಭಿಣಿ ಎನ್ನುವ ಕಾರಣಕ್ಕೆ ಆಕೆಯನ್ನು ಬಿಡುಗಡೆ ಮಾಡಲಾಗಿತ್ತು. ಆದರೆ ಬಿಡುಗಡೆಯಾದ ಮೂರೇ ದಿನಗಳಲ್ಲಿ ಆಕೆಯ ಗಂಡ ವಸೀಮ್​ ಆಕೆಯನ್ನು ಕೊಲೆ ಮಾಡಿದ್ದಾನೆ.

ಅಂದ ಹಾಗೆ ಸೈನಾಳಿಗೆ ವಸೀಮ್​ ಮೊದಲನೇ ಗಂಡನಾಗಿರಲಿಲ್ಲ. ಈ ಹಿಂದೆ ಆಕೆ ಶರಫತ್ ಶೇಖ್ ಹೆಸರಿನ ಗ್ಯಾಂಗ್​ಸ್ಟಾರ್​ನನ್ನು ಮದುವೆಯಾಗಿದ್ದಳು. ಆತ ಡ್ರಗ್ಸ್​ ಪ್ರಕರಣದ ಮೇಲೆ ಜೈಲು ಸೇರಿದ್ದ. ಅದಾದ ನಂತರ ಆಕೆ ವಸೀಮ್​ನನ್ನು ಮದುವೆಯಾಗಿದ್ದಳು. ಆಮೇಲೆ ಜೈಲು ಸೇರಿದ್ದಳು.

ಸೈನಾ ಜೈಲಿಗೆ ಹೋದ ನಂತರ ಒಬ್ಬಂಟಿಯಾದ ವಸೀಮ್​ ಸೈನಾಳ ತಂಗಿಯ ಮೇಲೆ ಕಣ್ಣು ಹಾಕಿದ್ದಾನೆ. ಆಕೆಯನ್ನು ಬಲೆಗೆ ಬೀಳಿಸಿಕೊಂಡು ಅನೈತಿಕ ಸಂಬಂಧ ಬೆಳೆಸಿಕೊಂಡಿದ್ದಾನೆ. ಆದರೆ ಸೈನಾ ಮನೆಗೆ ವಾಪಸಾದಾಗಿನಿಂದ ಆ ಸಂಬಂಧಕ್ಕೆ ತಡೆ ಬಿದ್ದಿದೆ. ಅದೇ ಸಿಟ್ಟಿನಿಂದ ಗರ್ಭಿಣಿ ಸೈನಾಳನ್ನು ಕೊಲೆ ಮಾಡಿದ್ದಾನೆ. ಸೈನಾಳ ಸಹಾಯಕನಾಗಿ ಮನೆಯಲ್ಲಿದ್ದವನಿಗೂ ಗುಂಡು ಹಾರಿಸಿದ್ದು, ಆತನ ಸ್ಥಿತಿ ಗಂಭೀರವಾಗಿರುವುದಾಗಿ ತಿಳಿಸಲಾಗಿದೆ. ಈ ಎಲ್ಲ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net