

ಬ್ರಹ್ಮಾವರ: ಭಾರತ ವಿಕಸಿತಗೊಂಡಿರುವುದು ಬಿಜೆಪಿ ಆಡಳಿತದ ಅವಧಿಯಲ್ಲಿ. ಸರ್ಕಾರದ ಯೋಜನೆ ಮತ್ತು ಸಾಧನೆ ಕಾರ್ಯಕರ್ತರ ಮೂಲಕ ಮನೆ ಮನೆಗಳಿಗೆ ತಲುಪಿದಲ್ಲಿ ವಾತ್ರ ಸಾಧನೆಗೆ ಅರ್ಥ ಬರುತ್ತದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಭಾರತೀಯ ಜನತಾ ಪಾರ್ಟಿ ಉಡುಪಿ ಗ್ರಾವಾಂತರ ಇವರ ವತಿಯಿಂದ ಭಾನುವಾರ ಉನ್ನತಿ ಸಭಾಂಗಣದಲ್ಲಿ ಜರುಗಿದ ವಿಕಸಿತ ಭಾರತ ಸಂಕಲ್ಪ ಸಭೆಯಲ್ಲಿ ಮಾತನಾಡಿದರು.
ವಿಕಾಸ ಪೂತ್ತೂರು ಮಾತನಾಡಿ, ಆಪರೇಶನ್ ಸಿಂದೂರ ಮೂಲಕ ಭಾರತದ ಪರಾಕ್ರಮ ವಿಶ್ವಮಟ್ಟದಲ್ಲಿ ತಿಳಿಯುವಂತಾಗಿದೆ. ಭಾರತದಲ್ಲಿ ಬಾಬಾ ಸಾಹೇಬ್ ಅಂಬೆಡ್ಕರ್‌ರ ಸಂವಿಧಾನ ನಿಜ ಅರ್ಥದಲ್ಲಿ ಸಾಕಾರಗೊಂಡಿರುವುದು ಜಮ್ಮು ಮತ್ತು ಕಾಶ್ಮೀರದಲ್ಲಿ ಎಂದರು.
ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ವಾಜಿ ಶಾಸಕ ಪ್ರಮೋದ್ ಮಧ್ವರಾಜ್, ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಪೃಥ್ವಿರಾಜ್ ಶೆಟ್ಟಿ, ಪ್ರಮುಖರಾದ, ಹರಿಮಕ್ಕಿ ರತ್ನಾಕರ ಶೆಟ್ಟಿ, ಬಿ.ಎನ್ ಶಂಕರ ಪೂಜಾರಿ, ಬೈಕಾಡಿ ಸುಪ್ರಸಾದ್ ಶೆಟ್ಟಿ, ರಾವೇಂದ್ರ ಕುಂದರ್ ಜೆ.ಬಿ., ಶೋಭಾ ಪೂಜಾರಿ, ಆದರ್ಶ ಶೆಟ್ಟಿ ಕೆಂಜೂರು, ಉಮೇಶ್ ನಾಯ್ಕ ಚೇರ್ಕಾಡಿ ಇನ್ನಿತರು ಉಪಸ್ಥಿತರಿದ್ದರು. ಬಿಜೆಪಿ ಗ್ರಾವಾಂತರ ಅಧ್ಯಕ್ಷ ರಾಜೀವ ಕುಲಾಲ್ ಸ್ವಾಗತಿಸಿ, ಜಿಲ್ಲಾ ಸಂಚಾಲಕ ರಾಜೇಶ್ ಕಾವೇರಿ ಪ್ರಸ್ತಾವನೆಗೈದರು. ಕಳ್ತೂರು ಮನೋಜ್ ಶೆಟ್ಟಿ ನಿರೂಪಿಸಿದರು.