

ಹೆಬ್ರಿ: ಜಾಗತಿಕ ಬಂಟರ ಸಂಗಳ ಒಕ್ಕೂಟ ನಿರ್ದೇಶಕರಾಗಿ ಸವಾಜ ಸೇವಕ, ಮುಂಬೈ ಉದ್ಯಮಿ ಪಡುಕುಡೂರು ಪಡುಪರ್ಕಳ ಹರೀಶ ಶೆಟ್ಟಿ ದೊಂಬಿವಿಲಿ ಅವರನ್ನು ನೇಮಕ ಮಾಡಲಾಗಿದೆ.
ಜಾಗತಿಕ ಬಂಟರ ಸಂಗಳ ಒಕ್ಕೂಟ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಆಯ್ಕೆ ಮಾಡಿದರು.
ಜನಪರ ಕಾಳಜಿಯ ಸಾವಾಜಿಕ ಕಾರ್ಯಗಳಿಗೆ ಒತ್ತು ನೀಡುವ ಹಾಗೂ ಮಹತ್ತರ ಯೋಜನೆಯಾದ ಒಕ್ಕೂಟದ ಸಭಾಭವನ ನಿರ್ವಾಣ ಸಲುವಾಗಿ ಸಹಕಾರ ನೀಡಲು ಈ ನೇಮಕ ನಡೆಸಲಾಗಿದೆ. ಪೋಷಕ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದ ಹರೀಶ ಶೆಟ್ಟಿ ಅವರು ನಿರ್ದೇಶಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಜಾಗತಿಕ ಬಂಟರ ಸಂಗಳ ಒಕ್ಕೂಟ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು ನಿರ್ದೇಶಕರಾಗಿ ಆಯ್ಕೆಯಾದ ಪಡುಕುಡೂರು ಹರೀಶ್ ಶೆಟ್ಟಿ ಅವರನ್ನು ಗೌರವಿಸಿದರು.