ಎಷ್ಟೇ ಪ್ರಯತ್ನಪಟ್ಟರು ತೂಕ ಇಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲವೇ? ಬೊಜ್ಜು ಸಮಸ್ಯೆಯಿಂದ ಬೇಸತ್ತಿದ್ದೀರಾ? ಈ ಒಂದು ಹಣ್ಣನ್ನು ತಿಂದರೆ ಸಾಕು ನಿಮ್ಮ ಬೊಜ್ಜು ಬೆಣ್ಣೆಯಂತೆ ಕರಗಿ ಹೋಗುತ್ತದೆ. ನೋಡಲು ಈ ಹಣ್ಣು ಪೇರಲದಂತೆ ಕಾಣುತ್ತದೆ. ಆದರೆ, ಇದರ ಹೆಸರು ಗಾರ್ಸಿನಿಯಾ ಕಾಂಬೋಜಿಯಾ. ಇದನ್ನು ಮಲಬಾರ್ ಹುಣಸೆಹಣ್ಣು ಎಂದೂ ಕರೆಯುತ್ತಾರೆ.
ಗಾರ್ಸಿನಿಯಾ ಕಾಂಬೋಜಿಯಾ ಉಷ್ಣವಲಯದ ಹಣ್ಣು. ತೂಕವನ್ನು ಕಡಿಮೆ ಮಾಡಲು ಪ್ರಾಚೀನ ಕಾಲದಿಂದಲೂ ಇದನ್ನು ಬಳಸಲಾಗುತ್ತಿದೆ. ಭಾರತ ಮತ್ತು ಆಫ್ರಿಕಾದ ಭಾಗಗಳಲ್ಲಿ ಮಾತ್ರ ಬೆಳೆಯುವ ಉಷ್ಣವಲಯದ ಹಣ್ಣು ಇದಾಗಿದೆ. ಇದು ನಮ್ಮ ದೇಹದ ಚಯಾಪಚಯವನ್ನು ವೇಗಗೊಳಿಸುತ್ತದೆ ಮತ್ತು ತೂಕವನ್ನು ಕಡಿಮೆ ಮಾಡುತ್ತದೆ. ಮತ್ತೊಂದು ಆಶ್ಚರ್ಯಕರ ಸಂಗತಿಯೆಂದರೆ, ಈ ಹಣ್ಣನ್ನು ವಿಶ್ವದಾದ್ಯಂತ ತೂಕ ಇಳಿಸುವ ಪೂರಕಗಳು ಮತ್ತು ಔಷಧಿಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.
ಅಂದಹಾಗೆ ಗಾರ್ಸಿನಿಯಾ ಕಾಂಬೋಜಿಯಾ ಹಣ್ಣಿನ ತೊಗಟೆಯು ತುಂಬಾ ಶಕ್ತಿಯುತವಾದ ಸಂಯುಕ್ತಗಳನ್ನು ಒಳಗೊಂಡಿದೆ. ಇದರಲ್ಲಿರುವ ಹೈಡ್ರಾಕ್ಸಿಸಿಟ್ರಿಕ್ ಆಮ್ಲವು (ಎಚ್ಸಿಎ) ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಸಿವನ್ನು ನಿಯಂತ್ರಿಸುತ್ತದೆ. ಕೊಬ್ಬಿನ ಉತ್ಪಾದನೆಯನ್ನು ತಡೆಯುತ್ತದೆ ಹಾಗೂ ವೇಗವಾದ ಚಯಾಪಚಯವನ್ನು ಉತ್ತೇಜಿಸುತ್ತದೆ.
ಎಚ್ಸಿಎ ಅಂದರೆ ಏನು?
ಹೈಡ್ರಾಕ್ಸಿಸಿಟ್ರಿಕ್ ಆಮ್ಲವು ಒಂದು ಸಕ್ರಿಯ ಸಂಯುಕ್ತವಾಗಿದೆ. ಇದು ಇನ್ಸುಲಿನ್ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕೊಬ್ಬಿನ ಶೇಖರಣೆಯನ್ನು ಕಡಿಮೆ ಮಾಡುತ್ತದೆ. ಕೆಲವು ಅಧ್ಯಯನಗಳ ಪ್ರಕಾರ, ಗಾರ್ಸಿನಿಯಾವನ್ನು ಸೇವಿಸುವುದರಿಂದ ಹಸಿವು ಕಡಿಮೆಯಾಗುತ್ತದೆ ಎಂದು ಹೇಳಲಾಗಿದೆ. ಎಚ್ಸಿಎ ಮೆದುಳಿನಲ್ಲಿ ಸಿರೊಟೋನಿನ್ ಮಟ್ಟವನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನಗಳು ತೋರಿಸಿವೆ.
ಕೊಬ್ಬನ್ನು ತಡೆಯುತ್ತದೆ
ಎಚ್ಸಿಎ, ಸಿಟ್ರೇಟ್ ಲೈಟ್ ಕಿಣ್ವವನ್ನು ಪ್ರತಿಬಂಧಿಸುತ್ತದೆ. ಅಂದಹಾಗೆ ಈ ಕಿಣ್ವವು ಕಾರ್ಬೋಹೈಡ್ರೇಟ್ ಅನ್ನು ಕೊಬ್ಬಾಗಿ ಪರಿವರ್ತಿಸುತ್ತದೆ. ಕಿಣ್ವವನ್ನೇ ಪ್ರತಿಬಂಧಿಸುವ ಮೂಲಕ ಕೊಬ್ಬಿನ ಉತ್ಪಾದನೆಯನ್ನು ಕಡಿಮೆ ಮಾಡಲು ಎಚ್ಸಿಎ ಸಹಾಯ ಮಾಡುತ್ತದೆ. ಇದರ ಜೊತೆಗೆ, ದೇಹದಲ್ಲಿನ ಕೊಬ್ಬನ್ನು ಕೊಬ್ಬಿನ ರಚನೆಯಿಲ್ಲದೆ ಕಾರ್ಯಗಳಿಗಾಗಿ ಬಳಸಿಕೊಳ್ಳಲು ನೆರವಾಗುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಇದರ ಉರಿಯೂತ ನಿವಾರಕ ಗುಣಗಳು ಕೀಲು ನೋವನ್ನು ಕಡಿಮೆ ಮಾಡುತ್ತದೆ. ಶ್ವಾಸಕೋಶ ಮತ್ತು ಸ್ತನ ಕ್ಯಾನ್ಸರ್ ತಡೆಗಟ್ಟಲು ಸಹಾಯ ಮಾಡುತ್ತದೆ. ಕೆಂಪು ರಕ್ತ ಕಣಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ. ಗಾರ್ಸಿನಿಯಾ ತೂಕ ನಷ್ಟಕ್ಕೆ ಅತ್ಯುತ್ತಮ ಹಣ್ಣಾಗಿ ಕೆಲಸ ಮಾಡುತ್ತದೆ. ಆದರೆ, ಈ ಬಗ್ಗೆ ಹೆಚ್ಚಿನ ಸಂಶೋಧನೆ ಅಗತ್ಯವಿದೆ. ಆದರೆ ಆಹಾರ ಮತ್ತು ಔಷಧ ಆಡಳಿತ (ಎಫ್ಡಿಎ)ದ ಪ್ರಕಾರ, ಇದನ್ನು ಅತಿಯಾಗಿ ಸೇವಿಸುವುದು ಸಹ ಸುರಕ್ಷಿತವಲ್ಲ.
ಅಡ್ಡ ಪರಿಣಾಮಗಳೂ ಇವೆ
ಗಾರ್ಸಿನಿಯಾ ಕಾಂಬೋಜಿಯಾ ಹಣ್ಣು ಸೇವನೆಯು ಕೆಲ ಅಡ್ಡಪರಿಣಾಮಗಳನ್ನು ಸಹ ಉಂಟು ಮಾಡುತ್ತದೆ. ಗಾರ್ಸಿನಿಯಾವನ್ನು ಅತಿಯಾಗಿ ಸೇವಿಸುವುದನ್ನು ನಿಲ್ಲಿಸಲು ಆಹಾರ ಮತ್ತು ಔಷಧ ಆಡಳಿತ (FDA) ಎಚ್ಚರಿಕೆ ನೀಡಿದೆ. ಇದು ತೀವ್ರವಾದ ಹೊಟ್ಟೆ ಅಸ್ವಸ್ಥತೆ ಮತ್ತು ಯಕೃತ್ತಿನ ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂದು ವರದಿಯಾಗಿದೆ. ಅತಿಸಾರ, ತಲೆನೋವು, ಚರ್ಮದ ಮೇಲೆ ದದ್ದುಗಳಂತಹ ಸಮಸ್ಯೆಗಳು ಉಂಟಾಗುತ್ತವೆ. ಈ ರೀತಿ ಏನಾದರೂ ಸಂಭವಿಸಿದರೆ, ತಕ್ಷಣ ಆ ಹಣ್ಣು ತಿನ್ನುವುದನ್ನು ನಿಲ್ಲಿಸಿ.
ಹಕ್ಕು ನಿರಾಕರಣೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.
ಕೊಲೆಸ್ಟ್ರಾಲ್ ವಿಚಾರದಲ್ಲಿ ಹರಿದಾಡುತ್ತಿರುವ ಈ 3 ಸುಳ್ಳುಗಳನ್ನು ಎಂದಿಗೂ ನಂಬಲೇಬೇಡಿ…
ನಿಮ್ಮ ಅಂಗೈನಲ್ಲಿ ಈ ರೀತಿ ತ್ರಿಕೋನ ಚಿಹ್ನೆ ಇದೆಯಾ? ಇದ್ರೆ ಏನಾಗುತ್ತೆ? ಇಲ್ಲಿದೆ ನೋಡಿ ಅಚ್ಚರಿಯ ಸಂಗತಿ…