ಆರೋಗ್ಯ ವಿಚಾರದಲ್ಲಿ ನೀವು ತಿಳಿಯದೇ ಮಾಡುವ ಕೆಲ ತಪ್ಪುಗಳು ನಿಮ್ಮ ಆರೋಗ್ಯವನ್ನೇ ಹಾಳು ಮಾಡುತ್ತದೆ. ಇಂದು ಅನೇಕ ಜನರು ಅಧಿಕ ಕೊಲೆಸ್ಟ್ರಾಲ್‌ನಂತಹ ಸಮಸ್ಯೆಗಳಿಂದ ಬಳಲುತ್ತಿರುವುದು ಗೊತ್ತೇ ಇದೆ. ಕೊಲೆಸ್ಟ್ರಾಲ್ ಅಂದ ಕೂಡಲೇ ಎಲ್ಲರು ಹೆದರುತ್ತಾರೆ. ಕೊಲೆಸ್ಟ್ರಾಲ್ ಇದ್ದರೆ ಆರೋಗ್ಯಕ್ಕೆ ಹಾನಿ ಖಂಡಿತ ಎಂದು ಭಾವಿಸುತ್ತಾರೆ. ಕೊಲೆಸ್ಟ್ರಾಲ್ ಇದ್ದವರಲ್ಲಿ ಹೃದಯಾಘಾತ, ಅಧಿಕ ರಕ್ತದೊತ್ತಡ ಹಾಗೂ ಮಧುಮೇಹದಂತಹ ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂಬುದು ನಿಜ.
ಆದರೆ, ಕೊಲೆಸ್ಟ್ರಾಲ್ ಬಗ್ಗೆ ಕೆಲವು ಸುಳ್ಳುಗಳು ಕೂಡ ನಮ್ಮ ನಡುವೆ ಹರಿದಾಡುತ್ತಿವೆ. ಆ ಸುಳ್ಳುಗಳು ಯಾವುವು ಎಂಬುದನ್ನು ಆರೋಗ್ಯ ತಜ್ಞರು ಬಹಿರಂಗಪಡಿಸಿದ್ದಾರೆ. ಕೊಲೆಸ್ಟ್ರಾಲ್ ಕೇವಲ ಹಾನಿಯನ್ನುಂಟು ಮಾಡುವುದಿಲ್ಲ ಆರೋಗ್ಯಕ್ಕೆ ಕೊಲೆಸ್ಟ್ರಾಲ್ ಬಹಳ ಮುಖ್ಯ ಎನ್ನುತ್ತಾರೆ ಆರೋಗ್ಯ ತಜ್ಞರು. ಆದ್ದರಿಂದ ಕೊಲೆಸ್ಟ್ರಾಲ್ ಅನ್ನು ಸಂಪೂರ್ಣವಾಗಿ ನಿರ್ಲಕ್ಷಿಸಬೇಡಿ. ಕೊಲೆಸ್ಟ್ರಾಲ್ ವಿಚಾರದಲ್ಲಿ ಹರಿದಾಡುತ್ತಿರುವ ಈ 3 ಸುಳ್ಳುಗಳನ್ನು ಎಂದಿಗೂ ನಂಬಲೇಬೇಡಿ…
1. ಕೊಲೆಸ್ಟ್ರಾಲ್ ಆರೋಗ್ಯಕ್ಕೆ ಒಳ್ಳೆಯದಲ್ಲ: ಕೊಲೆಸ್ಟ್ರಾಲ್ ಹೃದಯದ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುತ್ತಾರೆ. ಆದರೆ, ಇದು ಸುಳ್ಳು. ಕೊಲೆಸ್ಟ್ರಾಲ್ನಲ್ಲಿ 2 ವಿಧಗಳಿವೆ. ಅವುಗಳೆಂದರೆ LDL ಮತ್ತು HDL. ಎಲ್‌ಡಿಎಲ್ ಒಂದು ಕೆಟ್ಟ ಕೊಲೆಸ್ಟ್ರಾಲ್ ಆಗಿದೆ. ಕಡಿಮೆ ಸಾಂದ್ರತೆಯ ಲಿಪೊಪ್ರೋಟೀನ್ ಅನ್ನು “ಕೆಟ್ಟ” ಕೊಲೆಸ್ಟ್ರಾಲ್ ಎಂದೂ ಕರೆಯುತ್ತಾರೆ. ಇದು ಕೊಲೆಸ್ಟ್ರಾಲ್‌ನ ಮುಖ್ಯ ಮೂಲವಾಗಿದೆ, ಇದು ಅಪಧಮನಿಗಳಲ್ಲಿ ಸಂಗ್ರಹಗೊಳ್ಳುತ್ತದೆ ಮತ್ತು ರಕ್ತದ ಹರಿವನ್ನು ನಿರ್ಬಂಧಿಸುತ್ತದೆ. ಹೆಚ್ಚಿನ ಮಟ್ಟದ ಎಲ್‌ಡಿಎಲ್ ಕೊಲೆಸ್ಟ್ರಾಲ್ ಹೃದ್ರೋಗ ಮತ್ತು ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ. ಉತ್ತಮ ಕೊಲೆಸ್ಟ್ರಾಲ್ ಎಂದೂ ಕರೆಯಲ್ಪಡುವ ಹೆಚ್ಚಿನ ಸಾಂದ್ರತೆಯ ಲಿಪೊಪ್ರೋಟೀನ್ ರಕ್ತದಿಂದ ಕೊಲೆಸ್ಟ್ರಾಲ್ ಅನ್ನು ಹೀರಿಕೊಳ್ಳುತ್ತದೆ ಮತ್ತು ದೇಹದಿಂದ ತೆಗೆದುಹಾಕಲು ಯಕೃತ್ತಿಗೆ ಹಿಂತಿರುಗಿಸುತ್ತದೆ. ಹೆಚ್ಚಿನ ಮಟ್ಟದ ಎಚ್‌ಡಿಎಲ್ ಕೊಲೆಸ್ಟ್ರಾಲ್, ಹೃದ್ರೋಗ ಮತ್ತು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುತ್ತದೆ.
LDL ಅನ್ನು ಕಡಿಮೆ ಮಾಡಲು ಮತ್ತು HDL ಅನ್ನು ಹೆಚ್ಚಿಸಲು ನೀವಿದನ್ನು ಮಾಡಬಹುದು. ಆರೋಗ್ಯಕರ ಆಹಾರವನ್ನು ಸೇವಿಸಬೇಕು ಮತ್ತು ನಿಯಮಿತವಾಗಿ ವ್ಯಾಯಾಮ ಮಾಡಬೇಕು. ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಬೇಕು. ಎಲ್ಲದಕ್ಕಿಂತ ಮುಖ್ಯವಾಗಿ ಧೂಮಪಾನವನ್ನು ತ್ಯಜಿಸಬೇಕು.
2. ಆರೋಗ್ಯಕರ ಮತ್ತು ಫಿಟ್ ಆಗಿರುವ ಜನರು ಹೆಚ್ಚು ಕೊಲೆಸ್ಟ್ರಾಲ್ ಸೇವಿಸಬಹುದು: ಇದು ನಿಜಕ್ಕೂ ಸುಳ್ಳು. ಹೆಚ್ಚು ಕೊಲೆಸ್ಟ್ರಾಲ್ ಸೇವನೆ ಮಾಡುವುದರಿಂದ ಅಪಧಮನಿಗಳಲ್ಲಿ ಸಂಗ್ರಹಗೊಳ್ಳುತ್ತದೆ ಮತ್ತು ರಕ್ತದ ಹರಿವನ್ನು ನಿರ್ಬಂಧಿಸುತ್ತದೆ. ಇದರಿಂದ ಗಂಭೀರ ತೊಡಕುಗಳು ಸಂಭವಿಸಬಹುದು.
3. ಪ್ರತಿಯೊಬ್ಬರ ಕೊಲೆಸ್ಟ್ರಾಲ್ ಬೇಡಿಕೆ ಒಂದೇ ಆಗಿರುತ್ತದೆ: ಇದು ಕೂಡ ಸುಳ್ಳು. ಏಕೆಂದರೆ, ಪ್ರತಿಯೊಬ್ಬರ ದೇಹವು ವಿಭಿನ್ನವಾಗಿರುತ್ತದೆ. ಹೆಚ್ಚು ದೈಹಿಕವಾಗಿ ಸಕ್ರಿಯವಾಗಿರುವವರು ಹೆಚ್ಚು ಕೊಲೆಸ್ಟ್ರಾಲ್ ಅನ್ನು ಸೇವಿಸಬಹುದು. ಮಧುಮೇಹದಿಂದ ಬಳಲುತ್ತಿರುವರು ಕಡಿಮೆ ಕೊಲೆಸ್ಟ್ರಾಲ್ ಅನ್ನು ತೆಗೆದುಕೊಳ್ಳಬೇಕು. ಒಂದೇ ರೀತಿಯ ಕೊಲೆಸ್ಟ್ರಾಲ್ ಮಟ್ಟವು ಎಲ್ಲರ ಮೇಲೆ ಒಂದೇ ರೀತಿ ಪರಿಣಾಮ ಬೀರುವುದಿಲ್ಲ.
ಹಕ್ಕು ನಿರಾಕರಣೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.
ಇಡ್ಲಿ ತಿನ್ನುವಾಗ ವ್ಯಕ್ತಿ ದುರಂತ ಸಾವು! ನೀವು ಕೂಡ ಎಂದಿಗೂ ಈ ತಪ್ಪುಗಳನ್ನು ಮಾಡ್ಬೇಡಿ…