ಬೀಜಿಂಗ್: ಗಂಡಂದಿರು ದಾರಿ ತಪ್ಪುವುದನ್ನು ತಡೆಯಲು ಪತ್ನಿಯರಿಗಾಗಿ ಚೀನಾದಲ್ಲಿ ತೆರೆದಿರುವ ಹೊಸ ತರಬೇತಿ ಶಿಬಿರ ಇದೀಗ ಭಾರಿ ಸದ್ದು ಮಾಡುತ್ತಿದೆ. ಮಧ್ಯ ವಯಸ್ಕ ಪತ್ನಿಯರಿಗಾಗಿ “ಸೆಕ್ಸ್ ಅಪೀಲ್ ಟ್ರೈನಿಂಗ್ ಕ್ಯಾಂಪ್ಸ್” ಆರಂಭಿಸಲಾಗಿದ್ದು, ಗಂಡಂದಿರು ಬೇರೆ ಹೆಣ್ಣಿನ ಸಹವಾಸ ಮಾಡದಂತೆ ತಡೆಯಲು ಮತ್ತು ತಮ್ಮ ಮೋಹದ ಬಲೆಗೆ ಬೀಳಿಸಿಕೊಳ್ಳುವ ತಂತ್ರಗಳನ್ನು ಈ ಶಿಬಿರಗಳಲ್ಲಿ ಹೇಳಿಕೊಡಲಾಗುತ್ತದೆ. ಆದರೆ, ಇದು ಪುಕ್ಕಟ್ಟೆಯಲ್ಲ, ಇದಕ್ಕಾಗಿ ಹಣ ಪಾವತಿ ಮಾಡಬೇಕಾಗುತ್ತದೆ.
ಕಳೆದ ಜುಲೈ ತಿಂಗಳಲ್ಲಿ ಚೀನಾದ ಜೆಜಿಯಾಂಗ್ ಪ್ರಾಂತ್ಯದಲ್ಲಿರುವ ಹ್ಯಾಂಗ್ಜೌ ಪೂರ್ವ ನಗರದಲ್ಲಿ ನಡೆದ ತರಬೇತಿ ಶಿಬಿರದಲ್ಲಿ ಕೆಲ ಮಹಿಳೆಯರು ಪಾಲ್ಗೊಂಡಿದ್ದರು. ಈ ವೇಳೆ ಪ್ರತಿ ಮಹಿಳೆಗೆ 2999 ಯುವಾನ್ (420 ಡಾಲರ್, ಭಾರತೀಯ ಕರೆನ್ಸಿಯಲ್ಲಿ 35,230 ರೂಪಾಯಿ) ಚಾರ್ಜ್ ಮಾಡಲಾಗಿತ್ತು. ಈ ಶಿಬಿರಕ್ಕೆ ಸಂಬಂಧಿಸಿದ ಜಾಹೀರಾತು ಪೋಸ್ಟರ್ನಲ್ಲಿ “ಸೆಕ್ಸ್ ಅಪೀಲ್ ಎಂದರೆ ಮಹಿಳೆ ತನ್ನ ಜೀವನದ ಮೇಲೆ ಹಿಡಿತ ಸಾಧಿಸುವುದು” ಎಂದು ಬರೆಯಲಾಗಿತ್ತು.
ಇನ್ನು ಈ ಶಿಬಿರದ ದೃಷ್ಟಿಕೋನವು ಸಂಪೂರ್ಣವಾಗಿ ಚೀನಾದ ನಂಬಿಕೆಗಳಿಗೆ ವಿರುದ್ಧವಾಗಿದೆ. ಚೀನಾದಲ್ಲಿ ಸೆಕ್ಸ್ ಅನ್ನು ಪ್ರಾಥಮಿಕವಾಗಿ ಸಂತಾನೋತ್ಪತ್ತಿ ಉದ್ದೇಶವನ್ನು ಹೊಂದಿರುವ ಸೂಕ್ಷ್ಮ ಮತ್ತು ಖಾಸಗಿ ವಿಷಯವೆಂದು ಪರಿಗಣಿಸುತ್ತದೆ. ಆದರೆ, ಸೆಕ್ಸ್ ಅಪೀಲ್ ಶಿಬಿರದ ಉದ್ದೇಶ ಮಾತ್ರ ಇದಕ್ಕೆ ವ್ಯತಿರಿಕ್ತವಾಗಿದೆ. ಹೀಗಾಗಿ ಇದು ಚೀನಾದಲ್ಲಿ ಹೆಚ್ಚು ಚರ್ಚೆಯ ವಿಷಯವಾಗಿದೆ.
ಇನ್ನು ಈ ಶಿಬಿರದಲ್ಲಿ ಭಾಗವಹಿಸುವ ಮಹಿಳೆಯರು ಕಪ್ಪು ಬಣ್ಣದ ಸ್ಟಾಕಿಂಗ್ಸ್ ಜತೆಗೆ ಜೋಡಿಸಲಾದ ಫಾರ್ಮ್-ಫಿಟ್ಟಿಂಗ್ ಚಿಯೋಂಗ್ಸಾಮ್ಗಳನ್ನು ಧರಿಸಬೇಕು. ಈ ಶಿಬಿರದ ಮೊದಲ ದಿನದ ಉಪನ್ಯಾಸಗಳಲ್ಲಿ ಪ್ರೀತಿಯ ಪ್ರಾಮುಖ್ಯತೆ ಮತ್ತು ಲೈಂಗಿಕ ಪರಾಕಾಷ್ಠೆ ಸಾಧಿಸುವ ತಂತ್ರಗಳನ್ನು ತಿಳಿಸಲಾಯಿತು. ಲೈಂಗಿಕ ಪರಕಾಷ್ಠೆ ಅಂದರೆ ಲೈಂಗಿಕ ಪ್ರಚೋದನೆಯ ಉತ್ತುಂಗವನ್ನು ತಲುಪಿದಾಗ ಉಂಟಾಗುವ ಲೈಂಗಿಕ ಒತ್ತಡ ಮತ್ತು ಉತ್ಸಾಹದ ಹಠಾತ್ ಬಿಡುಗಡೆಯಾಗಿದೆ.
ಶಿಬಿರದ ಎರಡನೇ ದಿನ ಕಿಸ್ಸಿಂಗ್, ಇಂದ್ರಿಯ ನೃತ್ಯ ಮತ್ತು ಪ್ರಚೋದನೆ ರೀತಿಯಲ್ಲಿ ಸ್ಟಾಕಿಂಗ್ಸ್ ಅನ್ನು ಹರಿದು ಹಾಕುವುದಕ್ಕೆ ಒತ್ತು ನೀಡಲಾಯಿತು. ಲೈಂಗಿಕ ಸಂದರ್ಭಗಳಲ್ಲಿ ತಮ್ಮ ಮೋಡಿಯನ್ನು ಹೇಗೆ ಪ್ರದರ್ಶಿಸಬೇಕು ಎಂಬುದನ್ನು ಕಲಿಸುವ ಗುರಿಯನ್ನು ಹೊಂದಿರುವ ರೋಲ್-ಪ್ಲೇಯಿಂಗ್ ವ್ಯಾಯಾಮಗಳಲ್ಲಿ ಮಹಿಳೆಯರು ತೊಡಗಿಸಿಕೊಂಡರು.
ಈ ಶಿಬಿರದಲ್ಲಿ ಭಾಗವಹಿಸಿದವರಲ್ಲಿ ಹೆಚ್ಚಿನವರು 35 ರಿಂದ 55 ವರ್ಷ ವಯಸ್ಸಿನ ಮಹಿಳೆಯರು ಎಂದು ಆನ್‌ಲೈನ್ ಮೂಲಗಳು ಬಹಿರಂಗಪಡಿಸಿವೆ. ಈ ಶಿಬಿರದಲ್ಲಿ ಭಾಗವಹಿಸಿದ ಹೆಸರೇಳಲು ಇಚ್ಛಿಸದ 54 ವರ್ಷ ವಯಸ್ಸಿನ ಮಹಿಳೆಯೊಬ್ಬರು, ತನ್ನ ಮಗನ ಸಹಪಾಠಿಯೊಂದಿಗೆ ಲೈಂಗಿಕ ಭಾವನೆಗಳನ್ನು ಬೆಳೆಸಿಕೊಂಡಿದ್ದನ್ನು ಹಂಚಿಕೊಂಡರು.
ನಿಮ್ಮ ಮದುವೆಯ ಉತ್ಸಾಹವನ್ನು ಪುನರುಜ್ಜೀವನಗೊಳಿಸಿ, ನಿಮ್ಮ ಕಾಮಪ್ರಚೋದಕ ಜೀವನವನ್ನು ಜೀವಂತಗೊಳಿಸಿ” ಎಂಬ ಶಿಬಿರದ ಘೋಷಣೆಯನ್ನು ಓದಿದ ನಂತರ ಹೆಚ್ಚಿನ ಮಹಿಳೆಯರು ಈ ತರಬೇತಿ ಶಿಬಿರಕ್ಕೆ ಆಕರ್ಷಿತರಾದರು. ಅಲ್ಲದೆ, ತಮ್ಮ ಸ್ವಾಭಿಮಾನವನ್ನು ಕಂಡುಕೊಳ್ಳಲು ಈ ಶಿಬಿರ ಸಹಾಯ ಮಾಡಿತು. ಮಧ್ಯವಯಸ್ಕ ಮಹಿಳೆಯರು ಶಕ್ತಿಯುತ ಮತ್ತು ಹೆಚ್ಚು ಆಕರ್ಷಕವಾಗಿರಬಹುದು ಎಂದು ನಂಬಲು ಪ್ರೋತ್ಸಾಹಿಸಿತು ಎಂದು ಭಾಗವಹಿಸಿದ ಮಹಿಳೆಯರು ಹೇಳಿಕೊಂಡರು.
ಅಂದಹಾಗೆ ಈ ಶಿಬಿರವನ್ನು “ಸೆಕ್ಸ್ ಅಪೀಲ್ ಅಕಾಡೆಮಿ” ಎಂದು ಕರೆಯಲ್ಪಡುವ ಕಂಪನಿಯು ಆಯೋಜಿಸಿದೆ ಎಂದು ಮೇನ್‌ಲ್ಯಾಂಡ್ ಮಾಧ್ಯಮ ವರದಿ ಮಾಡಿದೆ. ಈ ಶಿಬಿರದಲ್ಲಿ ಪರಿಣಿತ ಬೋಧಕರು ಮತ್ತು ಥೆರೆಪಿಸ್ಟ್ಗಳು ಒಳಗೊಂಡಿದ್ದು, ಅವರೆಲ್ಲ ಚೀನಾ ಸೆಕ್ಸಾಲಜಿ ಅಸೋಸಿಯೇಷನ್ ಆಯೋಜಿಸಿದ ಬಹು-ಶಿಸ್ತಿನ ತರಬೇತಿಯನ್ನು ಪಡೆದಿದ್ದಾರೆ. ಲೈಂಗಿಕ ಔಷಧ ಮತ್ತು ಮಾನವ ಅಂಗರಚನಾಶಾಸ್ತ್ರದಂತಹ ಕ್ಷೇತ್ರಗಳಲ್ಲಿ ಪರಿಣಿತಿ ಪಡೆದಿದ್ದು, ಲೈಂಗಿಕ ಚಿಕಿತ್ಸೆಯ ಔಪಚಾರಿಕ ಅಭ್ಯಾಸಕಾರರಾಗಿದ್ದಾರೆ ಎಂದು ಕಂಪನಿ ಹೇಳಿದೆ ಎಂದು ಮೇನ್‌ಲ್ಯಾಂಡ್ ವರದಿಯಲ್ಲಿ ತಿಳಿಸಿದೆ.
ಇನ್ನು ಸೆಕ್ಸ್ ಅಪೀಲ್ ಟ್ರೈನಿಂಗ್ ಕ್ಯಾಂಪ್ ಚೀನಾದಲ್ಲಿ ವ್ಯಾಪಕ ಟೀಕೆಗಳನ್ನು ಹುಟ್ಟುಹಾಕಿದೆ. ಇದೊಂದು ಅನೈತಿಕ ವ್ಯಾಪಾರ ಮಾರ್ಗಾವಾಗಿದ್ದು, ದುರ್ಬಲ ಮತ್ತು ತಮ್ಮ ಜೀವನದ ಬಗ್ಗೆ ಆಸಕ್ತಿ ಹೊಂದಿರುವ ಮಹಿಳೆಯರ ಲಾಭವನ್ನು ಈ ಶಿಬಿರ ಪಡೆದುಕೊಳ್ಳುತ್ತದೆ. ಈ ಮಧ್ಯವಯಸ್ಸಿನ ಮಹಿಳೆಯರು ಸರಿ ತಪ್ಪುಗಳನ್ನು ವಿವೇಚಿಸಲು ಸಾಧ್ಯವಿಲ್ಲ. ಓದು ಅಥವಾ ಶಿಕ್ಷಣವನ್ನು ಮುಂದುವರಿಸುವ ಮೂಲಕ ತಮ್ಮ ಆಕರ್ಷಣೆಯನ್ನು ಆರೋಗ್ಯಕರ ರೀತಿಯಲ್ಲಿ ಸುಧಾರಿಸಬಹುದು ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. (ಏಜೆನ್ಸೀಸ್)
ಇಡ್ಲಿ ತಿನ್ನುವಾಗ ವ್ಯಕ್ತಿ ದುರಂತ ಸಾವು! ನೀವು ಕೂಡ ಎಂದಿಗೂ ಈ ತಪ್ಪುಗಳನ್ನು ಮಾಡ್ಬೇಡಿ…
ನನ್ನ ದೇಹದ ಬಗ್ಗೆ ಮೊದಲೇ ಗೊತ್ತಿರಲಿಲ್ಲವೇ? ಬೇಡ ಎನ್ನಲು ಇಂಥಾ ನೀಚ ಕಾರಣ ಕೊಡಬೇಕಿತ್ತಾ? ಕಸ್ತೂರಿ ಆಕ್ರೋಶ