ಹೈದರಾಬಾದ್: ನಟಿ ಕಸ್ತೂರಿ ಅವರು 80 ಮತ್ತು 90ರ ದಶಕದಲ್ಲಿ ಬಹು ಬೇಡಿಕೆ ನಟಿಯಾಗಿದ್ದರು. ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಸಿನಿಮಾಗಳಲ್ಲಿ ನಟಿಸುವ ಮೂಲಕ ಬಹುಭಾಷಾ ನಟಿ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ಎಲ್ಲ ಸಿನಿರಂಗದ ಸ್ಟಾರ್ ನಟರ ಜತೆ ಕಸ್ತೂರಿ ಅಭಿನಯಿಸಿದ್ದಾರೆ. ಈಗಲೂ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಕಸ್ತೂರಿ ಅವರು ಸಕ್ರಿಯರಾಗಿದ್ದಾರೆ. ಅವರು ಸಾಮಾಜಿಕ ಕಾರ್ಯಕರ್ತೆಯೂ ಹೌದು. ರಾಜಕೀಯ ಹಾಗೂ ಸಿನಿಮಾ ಸೇರಿದಂತೆ ಸಮಾಜದಲ್ಲಿ ನಡೆಯುವ ಕೆಲ ಘಟನೆಗಳ ಬಗ್ಗೆ ಮುಕ್ತವಾಗಿ ಅಭಿಪ್ರಾಯ ವ್ಯಕ್ತಪಡಿಸುವುದರಲ್ಲಿ ಅವರು ಎಂದಿಗೂ ದೂರ ಉಳಿಯುವುದಿಲ್ಲ.
ಕೇರಳ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದ್ದ ಇತ್ತೀಚಿನ ಹೇಮಾ ಸಮಿತಿ ವರದಿ ಕುರಿತು ಕಸ್ತೂರಿ ಶಂಕರ್ ಅವರು ಮಾತನಾಡಿದ್ದಾರೆ. ಹೇಮಾ ಸಮಿತಿ ವರದಿ ಬಿಡುಗಡೆಯಾದ ನಂತರ ಹಲವು ನಟಿಯರು ತಮಗಾದ ಲೈಂಗಿಕ ಕಿರುಕುಳವನ್ನು ಬಹಿರಂಗಪಡಿಸುತ್ತಿದ್ದಾರೆ. ಇದೀಗ ತಮಗಾದ ಕಹಿ ಅನುಭವದ ಬಗ್ಗೆ ಮಾತನಾಡಿರುವ ಕಸ್ತೂರಿ, ತಮ್ಮ ಎರಡನೇ ಸಿನಿಮಾದಲ್ಲೇ ನಿರ್ದೇಶಕರು ಹೊಂದಾಣಿಕೆ ಮಾಡಿಕೊಳ್ಳುವಂತೆ ಕೇಳಿದ್ದರು ಎಂದಿದ್ದಾರೆ.
ಇತ್ತೀಚೆಗೆ ಯೂಟ್ಯೂಬ್ ಚಾನೆಲ್ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಕಸ್ತೂತಿ, ನನ್ನ ಎರಡನೇ ಸಿನಿಮಾದಲ್ಲಿ ಆ ಚಿತ್ರದ ನಿರ್ದೇಶಕರು ನನ್ನೊಂದಿಗೆ ಅನುಚಿತವಾಗಿ ಮಾತನಾಡಿ, ಹೊಂದಾಣಿಕೆ ಮಾಡಿಕೊಳ್ಳುವಂತೆ ಕೇಳಿದರು. ನಾನು ಅವರಿಗೆ ಸಹಕಾರ ನೀಡದ ಕಾರಣ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿದ ನಂತರವೂ ನನ್ನನ್ನು ಚಿತ್ರದಿಂದ ಕೈಬಿಡಲಾಗಿತ್ತು ಎಂದು ಕಸ್ತೂರಿ ಆರೋಪ ಮಾಡಿದ್ದಾರೆ.
ಸಾಮಾನ್ಯವಾಗಿ ಸಿನಿಮಾದಲ್ಲಿ ನಟಿಸಲು ಒಪ್ಪಂದಕ್ಕೆ ಸಹಿ ಹಾಕಿದಾಗ ಆ ಪಾತ್ರಕ್ಕೆ ಈ ನಟಿ ಸೂಕ್ತವೇ ಎಂದು ಪರಿಶೀಲನೆ ಮಾಡುತ್ತಾರೆ. ಆ ಪಾತ್ರಕ್ಕೆ ನಟಿಯ ದೇಹ ಹೇಗಿದೆ ಎಂಬುದನ್ನು ಮೊದಲೇ ಖಚಿತಪಡಿಸಿಕೊಳ್ಳುತ್ತಾರೆ. ಆಡಿಷನ್‌ನಲ್ಲಿಯೇ ಇದೆಲ್ಲವೂ ಗೊತ್ತಾಗಲಿದೆ. ಆಗ ಅವರ ಕಣ್ಣಿಗೆ ನಾನು ತೆಳ್ಳಗಿದ್ದೇನೆ ಎಂದು ಗೊತ್ತಿರಲಿಲ್ಲವೇ? ಮೊದಲ ಹಂತದ ಶೂಟಿಂಗ್ ನಂತರ ನಾನು ತೆಳ್ಳಗಿದ್ದೇನೆ ಎಂದು ಹೇಳಿ ಚಿತ್ರದಿಂದ ನನ್ನನ್ನು ತೆಗೆದುಹಾಕಿದರು ಎಂದು ಕಸ್ತೂರಿ ಶಂಕರ್ ತಿಳಿಸಿದರು.
ನನಗೆ ಡ್ಯಾನ್ಸ್ ಅಥವಾ ಆ್ಯಕ್ಟಿಂಗ್ ಬರೋದಿಲ್ಲ ಅಂತ ಹೇಳಿದ್ದರೆ ಮನಸ್ಸು ನಿರಾಳವಾಗುತ್ತಿತ್ತು. ಆದರೆ, ಇಂತಹ ನೀಚ ಕಾರಣಕ್ಕೆ ನನ್ನನ್ನು ಹೊರಗೆ ಕಳುಹಿಸಿದರು. ನಾನು ಶ್ರೀಮಂತ ಕುಟುಂಬದ ಹುಡುಗಿ. ನನ್ನ ತಾಯಿ ವಕೀಲರು ಮತ್ತು ಚಿತ್ರರಂಗದಲ್ಲಿ ನನಗೂ ಇಂತಹ ಘಟನೆಗಳು ನಡೆದಿವೆ. ಸಿನಿಮಾ ನಂಬಿ ಜೀವನ ಸಾಗಿಸಲು ಕೆಲವು ಮಹಿಳೆಯರು ಇಲ್ಲಿಗೆ ಬರುತ್ತಾರೆ. ಅಂತಹವರು ಹೆಣ್ಣುಮಕ್ಕಳನ್ನು ಏನು ಮಾಡಬೇಕು ನೀವೇ ಯೋಚಿಸಿ ಎಂದರು. ಅಲ್ಲದೆ, ಸಿನಿಮಾ ಕ್ಷೇತ್ರಕ್ಕೆ ಪ್ರವೇಶಿಸಲು ಬಯಸುವ ಹುಡುಗಿಯರು ಧೈರ್ಯ ಮತ್ತು ಜಾಗರೂಕರಾಗಿರಬೇಕು ಎಂದರು. (ಏಜೆನ್ಸೀಸ್)
ಎದುರಾಳಿ ತಂಡದವರು ನನ್ನನ್ನು ಅಪಹರಿಸಿ ಕೈ ಕತ್ತರಿಸುವುದಾಗಿ ಬೆದರಿಸಿದ್ದರು! ಕಹಿ ಘಟನೆ ಬಿಚ್ಚಿಟ್ಟ ಆರ್. ಅಶ್ವಿನ್
ಪುರುಷರ ಲೈಂಗಿಕ ಸಾಮರ್ಥ್ಯ ಮ್ಯಾಗಿ ಇದ್ದಂತೆ ಎಂದಿದ್ದ ನಟಿ ರೆಜಿನಾರಿಂದ ಮತ್ತೊಂದು ಶಾಕಿಂಗ್ ಹೇಳಿಕೆ!