ಹೈದರಾಬಾದ್: ನಟ ಚೇತನ್ ಅಭಿನಯ ಸೂರ್ಯಕಾಂತಿ ಚಿತ್ರದಲ್ಲಿ ನಟಿಸಿ ಕನ್ನಡಿಗರಿಗೂ ಪರಿಚಿತವಾಗಿರುವ ಕಾಲಿವುಡ್ ಬೆಡಗಿ ರೆಜಿನಾ ಕ್ಯಾಸ್ಸಂದ್ರ ಹೆಚ್ಚಾಗಿ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ. ಅಲ್ಲದೆ, ಬೋಲ್ಡ್ ಆಗಿ ಮಾತನಾಡುವ ಮೂಲಕ ಆಗಾಗ ವಿವಾದಕ್ಕೂ ಗುರಿಯಾಗುತ್ತಿರುತ್ತಾರೆ.
ಈ ಹಿಂದೆ 2022 ರಲ್ಲಿ ‘ಶಾಕಿನಿ ಡಾಕಿನಿ’ ಚಿತ್ರದ ಪ್ರಚಾರದ ಭಾಗವಾಗಿ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ರೆಜಿನಾ ಹುಡುಗರ ಬಗ್ಗೆ ಬೋಲ್ಡ್ ಕಾಮೆಂಟ್‌ಗಳನ್ನು ಮಾಡಿದ್ದು ಎಲ್ಲರಿಗೂ ತಿಳಿದೇ ಇದೆ. ನನ್ನ ಬಳಿ ಹೇಳಲು ಒಂದು ಜೋಕ್ಸ್ ಇದೆ. ಅದನ್ನು ನೀವು ಅರ್ಥ ಮಾಡಿಕೊಳ್ತೀರೋ? ಇಲ್ಲವೋ? ನನಗೆ ಗೊತ್ತಿಲ್ಲ, ಅದೇನೇ ಇರಲಿ, ಪುರುಷರು ಮತ್ತು ಮ್ಯಾಗಿ ಎರಡು ಕೂಡ ಒಂದೆ. ಏಕೆಂದರೆ, ಎರಡು ಕೂಡ ಎರಡೇ ನಿಮಿಷದಲ್ಲಿ ಮುಗಿಯುತ್ತದೆ ಎನ್ನುವ ಮೂಲಕ ಪುರುಷರ ಲೈಂಗಿಕ ಸಾಮರ್ಥ್ಯವನ್ನು ಅಣುಕಿಸಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಆಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀಗ ರೆಜಿನಾಗೆ ಸಂಬಂಧಿಸಿದ ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
ಅರ್ಜುನ್ ಸಾಯಿ ನಿರ್ದೇಶನದ, ದಿಲೀಪ್ ಪ್ರಕಾಶ್ ಮತ್ತು ರೆಜಿನಾ ಅಭಿನಯದ ‘ಉತ್ಸವಂ’ ಸಿನಿಮಾ ಇಂದು ತೆಲುಗು, ಕನ್ನಡ ಮತ್ತು ಹಿಂದಿಯಲ್ಲಿ ಬಿಡುಗಡೆಯಾಗಿದೆ. ಇತ್ತೀಚೆಗೆ ಉತ್ಸವಂ ಸಿನಿಮಾ ಪ್ರಚಾರದ ಭಾಗವಾಗಿ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ರೆಜಿನಾ ತಮ್ಮ ಸಂಬಂಧಗಳ ಬಗ್ಗೆ ಮಾತನಾಡಿದ್ದಾರೆ.
ನಿಮಗೆ ಅನೇಕ ಮಂದಿ ಪ್ರಪೋಸ್ ಮಾಡಿರಬಹುದು. ಅವುಗಳಲ್ಲಿ ಯಾವುದಾದರೂ ಒಂದು ಪ್ರಪೋಸ್ ನಿಮ್ಮ ಮನಸ್ಸಿಗೆ ಹಿಡಿಸಿಲ್ಲವೇ? ಎಂದು ನಿರೂಪಕರು ಪ್ರಶ್ನೆ ಕೇಳಿದರು. ಇದಕ್ಕೆ ಉತ್ತರಿಸಿದ ರೆಜಿನಾ, ನನ್ನ ಜೀವನದಲ್ಲಿ ನಾನು ಅನೇಕ ರಿಲೇಶನ್ಶಿಪ್ ಹೊಂದಿದ್ದೇನೆ. ನಾನು ಸೀರಿಯಲ್ ಡೇಟರ್ ಎಂದೂ ಹೇಳಬಹುದು. ಸದ್ಯಕ್ಕೆ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದೇನೆ ಎಂದು ರೆಜಿನಾ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸದ್ಯ ವೈರಲ್ ಆಗಿದೆ.
ಅಂದಹಾಗೆ ರಜಿನಾ ಎಸ್ಎಂಎಸ್’ ಚಿತ್ರದ ಮೂಲಕ ಟಾಲಿವುಡ್ಗೆ ಎಂಟ್ರಿ ಕೊಟ್ಟರು ಮತ್ತು ಕೆಲವೇ ಚಿತ್ರಗಳಲ್ಲಿ ನಟಿಸುವ ಮೂಲಕ ಸ್ಟಾರ್ ಹೀರೋಯಿನ್ ಆದರು. ಈ ನಡುವೆ ಮಾಡಿದ ಹೀರೋಯಿನ್ ಓರಿಯೆಂಟೆಡ್ ಚಿತ್ರಗಳು ಅಷ್ಟಾಗಿ ವರ್ಕ್ ಔಟ್ ಆಗಲಿಲ್ಲ. ಸದ್ಯ ಬಾಲಿವುಡ್‌ನತ್ತ ಹೆಚ್ಚು ಗಮನ ಹರಿಸಿದ್ದಾರೆ. ನಿರ್ದೇಶಕ ಗೋಪಿಚಂದ್ ಮಲಿನೇನಿ ಹಿಂದಿ ಚಿತ್ರವೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಇನ್ನೂ ಎರಡು ಹಿಂದಿ ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. (ಏಜೆನ್ಸೀಸ್)
ಆರ್ಸಿಬಿ ತಂಡ ಈ ಇಬ್ಬರು ಆಟಗಾರರನ್ನು ಕೈಬಿಡುವುದು ಉತ್ತಮ: ಮಾಜಿ ಕ್ರಿಕೆಟಿಗನ ಸ್ಫೋಟಕ ಹೇಳಿಕೆ
ಈ ಒಂದು ಪಾತ್ರದಲ್ಲಿ ನಟಿಸಲು ಧೈರ್ಯ ಬೇಕು! ನೀರು ಕುಡಿದಷ್ಟೇ ಸುಲಭವಾಗಿ ನಟಿಸಿದ್ರು ಕಿಚ್ಚ, ಯಾವುದು ಆ ಸಿನಿಮಾ?