ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ ಏನಾಗುತ್ತದೆ? ಉದ್ಯೋಗ ಸಿಗುತ್ತದೆಯೇ ಅಥವಾ ಇಲ್ಲವೇ? ಮದುವೆ ಆಗುತ್ತಾ? ಜೀವನದಲ್ಲಿ ಸೆಟಲ್ ಆಗ್ತೀನಾ? ಎಂಬಿತ್ಯಾದಿ ವಿಚಾರಗಳನ್ನು ತಿಳಿದುಕೊಳ್ಳುವ ಆಸಕ್ತಿಯನ್ನು ಜನರು ತೋರಿಸುತ್ತಾರೆ. ಆದರೆ, ಕೆಲವರಿಗೆ ಈ ಜ್ಯೋತಿಷ್ಯದ ಮೇಲೆ ನಂಬಿಕೆ ಇರುವುದಿಲ್ಲ. ಆದರೂ ಬಹುತೇಕ ಮಂದಿ ಜಾತಕವನ್ನು ನಂಬುತ್ತಾರೆ. ಈ ಕಾರಣಕ್ಕೆ ಜ್ಯೋತಿಷಿಗಳಿಗೆ ತುಂಬಾ ಬೇಡಿಕೆ ಇದೆ.
ಅಂದಹಾಗೆ ನಮ್ಮ ಗ್ರಹಗತಿ ಆಧಾರದ ಮೇಲೆ ನಮ್ಮ ಜೀವನದ ಆಗು-ಹೋಗುಗಳನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ಜ್ಯೋತಿಷ್ಯ ಶಾಸ್ತ್ರ ಬಹಳ ಮುಖ್ಯವಾಗಿದೆ. ಜ್ಯೋತಿಷ್ಯದಲ್ಲಿ ಹಲವು ವಿಧಾನಗಳಿರುವುದು ನಿಮಗೆಲ್ಲರಿಗೂ ಗೊತ್ತೇ ಇದೆ. ಅದರಲ್ಲಿ ಹಸ್ತ ಸಾಮುದ್ರಿಕಾ ಕೂಡ ಒಂದು. ಹಸ್ತ ಸಾಮುದ್ರಿಕ ಎಂದರೆ ಹಸ್ತದ ಮೇಲಿನ ರೇಖೆಗಳ ಆಧಾರದ ಮೇಲೆ ಭವಿಷ್ಯವನ್ನು ಊಹಿಸುವುದು. ಈ ಹಸ್ತಸಾಮುದ್ರಿಕ ಶಾಸ್ತ್ರವನ್ನು ನಂಬುವ ಅನೇಕ ಜನರಿದ್ದಾರೆ. ಅವರಲ್ಲಿ ಸಾಮಾನ್ಯ ನಾಗರಿಕರಷ್ಟೇ ಅಲ್ಲ ಸೆಲೆಬ್ರಿಟಿಗಳು ಕೂಡ ಇದ್ದಾರೆ.
ನಮ್ಮ ಅಂಗೈನಲ್ಲಿ ವಿವಿಧ ರೀತಿಯ ರೇಖೆಗಳು ಅಥವಾ ಗೀರುಗಳಿವೆ. ಈ ಗೆರೆಗಳಿಂದಾಗಿ ಕೆಲವೊಂದು ಚಿಹ್ನೆಗಳು ಕೂಡ ರಚನೆಯಾಗಿವೆ. ಒಬ್ಬೊಬ್ಬರಲ್ಲೂ ಒಂದೊಂದು ರೀತಿಯ ಚಿಹ್ನೆಗಳಿರುತ್ತವೆ. ಕೆಲವರಲ್ಲಿ ತ್ರಿಕೋನ ಗುರುತು ಕೂಡ ಇರುತ್ತದೆ. ಈ ತ್ರಿಕೋನ ಗುರುತು ಹೊಂದಿರುವುದರ ಅರ್ಥ ಏನೆಂದು ನಾವೀಗ ತಿಳಿದುಕೊಳ್ಳೋಣ.
ಅಂಗೈಯಲ್ಲಿರುವ ಲೈಫ್ ಲೈನ್, ಬುದ್ಧಿ ರೇಖಾ ಮತ್ತು ಧನ ರೇಖಾಗಳ ಸಂಯೋಜನೆಯಿಂದ ಈ ತ್ರಿಕೋನ ಗುರುತು ರೂಪುಗೊಳ್ಳುತ್ತದೆ. ಇದನ್ನು ಧನ ತ್ರಿಕೋನ ಅಥವಾ ಅದೃಷ್ಟ ತ್ರಿಕೋನ ಎಂದು ಕರೆಯಲಾಗುತ್ತದೆ. ಈ ತ್ರಿಕೋನವನ್ನು ಕೈಯಲ್ಲಿ ಹೊಂದಿರುವವರಿಗೆ ದೀರ್ಘಾಯುಷ್ಯವಿರುತ್ತದೆ. ಅಲ್ಲದೆ, ವೃತ್ತಿ ಮತ್ತು ವ್ಯವಹಾರದಲ್ಲಿ ಯಾವುದೇ ಅಡಚಣೆ ಇಲ್ಲದೆ ಉತ್ತಮವಾಗಿ ಸಾಗುತ್ತಾರೆ.
ತ್ರಿಕೋನ ಗುರುತು ಹೊಂದಿರುವ ಸರ್ಕಾರಿ ನೌಕರಿ ಅಥವಾ ಖಾಸಗಿ ನೌಕರರು ಬೇಗ ಬಡ್ತಿ ಪಡೆದು ಉನ್ನತ ಸ್ಥಾನಕ್ಕೆ ಹೋಗುತ್ತಾರೆ. ಒಂದು ವೇಳೆ ಬಿಜಿನೆಸ್ ಮಾಡುತ್ತಿದ್ದರೆ ಉತ್ತಮ ಲಾಭ ಗಳಿಸಿ ಶೀಘ್ರ ಲಕ್ಷಾಧಿಪತಿಗಳಾಗುತ್ತಾರೆ. ಅಂಗೈಯಲ್ಲಿ ಇಂತಹ ತ್ರಿಕೋನ ಇರುವವರು ಖಂಡಿತಾ ಲಕ್ಷಾಧಿಪತಿಗಳಾಗುತ್ತಾರೆ ಎನ್ನುತ್ತಾರೆ ಹಸ್ತಸಾಮುದ್ರಿಕ ತಜ್ಞರು.
ಈ ತ್ರಿಕೋನ ಚಿಹ್ನೆ ಹೊಂದಿರುವವರು ಯಾವುದೇ ಕೆಲಸ ಮಾಡಿದರೂ ಆ ಕೆಲಸದಲ್ಲಿ ಹೆಚ್ಚು ಕಷ್ಟಪಡದೆ ಸಲೀಸಾಗಿ ಯಶಸ್ವಿಯಾಗುತ್ತಾರೆ. ಅಲ್ಲದೆ ಕೋಟ್ಯಾಧಿಪತಿ ಯೋಗ ಮತ್ತು ಅಷ್ಟ ಐಶ್ವರ್ಯ ಯೋಗ ಸಿಗುತ್ತದೆ ಎಂದು ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ಹೇಳಲಾಗಿದೆ. ಇನ್ನೇಕೆ ತಡ ನಿಮ್ಮ ಅಂಗೈನಲ್ಲೂ ಈ ತ್ರಿಕೋನ ಚಿಹ್ನೆ ಇದೆಯಾ ಎಂಬುದನ್ನು ಒಮ್ಮೆ ನೋಡಿ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್ಸೈಟ್ ಜವಾಬ್ದಾರರಾಗಿರುವುದಿಲ್ಲ.
ನಿಮ್ಮ ಅಂಗೈನಲ್ಲಿ ತ್ರಿಶೂಲ ಗುರುತು ಇದೆಯಾ ನೋಡಿ… ಇದರರ್ಥ ತಿಳಿದ್ರೆ ನಿಮ್ಮ ಹುಬ್ಬೇರೋದು ಖಚಿತ!
ಮುಂದಿನ ಐಪಿಎಲ್ನಲ್ಲಿ ಆರ್ಸಿಬಿ ಪರ ಆಡ್ತೀರಾ? ಕೊನೆಗೂ ಮೌನ ಮುರಿದ ಕೆ.ಎಲ್. ರಾಹುಲ್