ನವದೆಹಲಿ: ಮುಂಬರುವ ಐಪಿಎಲ್ 18ನೇ ಆವೃತ್ತಿಗು ಮುನ್ನವೇ ಲಖನೌ ಸೂಪರ್ಜೈಂಟ್ (ಎಲ್ಎಸ್ಜಿ) ತಂಡದ ನಾಯಕ ಕೆ.ಎಲ್. ರಾಹುಲ್, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವನ್ನು ಸೇರಲಿದ್ದಾರೆ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಬಲವಾಗಿ ಕೇಳಿಬರುತ್ತಿದೆ. ಈ ವಿಚಾರವಾಗಿ ರಾಹುಲ್ ಕೊನೆಗೂ ಮೌನ ಮುರಿದಿದ್ದಾರೆ.
ಮೂಲತಃ ಕನ್ನಡಿಗರಾಗಿರುವ ರಾಹುಲ್ಗೆ ಆರ್‌ಸಿಬಿ ಪರ ಆಡುವ ಆಸೆ ಇದೆ. ಈ ಬಗ್ಗೆ ಈ ಹಿಂದೆಯೇ ಹೇಳಿಕೊಂಡಿದ್ದಾರೆ. ಆದಾಗ್ಯೂ, ಐಪಿಎಲ್ ಹರಾಜಿನಲ್ಲಿ ಬೇರೆ ತಂಡದ ಪಾಲಾದ ಹಿನ್ನೆಲೆಯಲ್ಲಿ ಅಲ್ಲಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಐಪಿಎಲ್ 2022ರಿಂದ ಲಖನೌ ಸೂಪರ್‌ಜೈಂಟ್ಸ್‌ನ ನಾಯಕತ್ವವನ್ನು ಕೆಎಲ್ ರಾಹುಲ್ ನಿರ್ವಹಿಸುತ್ತಿದ್ದಾರೆ. ತಂಡವು ಐಪಿಎಲ್ ಪ್ರವೇಶಿಸಿದ ಮೊದಲ ವರ್ಷದಲ್ಲೇ ತಂಡವನ್ನು ಪ್ಲೇಆಫ್‌ಗೆ ಕೊಂಡೊಯ್ದು ನಾಯಕನಾಗಿ ತಮ್ಮ ಸಾಮರ್ಥ್ಯವನ್ನು ತೋರಿಸಿದರು. ಇದಕ್ಕೂ ಮೊದಲು ರಾಹುಲ್ ಅವರು ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗಿದ್ದರು.
ಕಳೆದ ಐಪಿಎಲ್ನಲ್ಲಿ ನಡೆದ ಘಟನೆಯಿಂದ ಕೆ.ಎಲ್. ರಾಹುಲ್ ಎಲ್ಎಸ್ಜಿ ಫ್ರಾಂಚೈಸಿಯೊಂದಿಗೆ ಅಸಮಾಧಾನ ಹೊಂದಿದ್ದಾರೆಂದು ತಿಳಿದುಬಂದಿದೆ. ಕಳೆದ ಮೇ 08ರಂದು ಸನ್ ರೈಸರ್ಸ್ ಹೈದರಾಬಾದ್ (ಎಸ್ಆರ್ಎಚ್) ಮತ್ತು ಲಖನೌ ಸೂಪರ್ ಜೈಂಟ್ಸ್ (ಎಲ್ಎಸ್ಜಿ) ವಿರುದ್ಧದ ಪಂದ್ಯದ ವೇಳೆ ಆಘಾತಕಾರಿ ಘಟನೆ ನಡೆಯಿತು. ಪಂದ್ಯದ ಸೋತಿದ್ದಕ್ಕೆ ಎಲ್ಎಸ್ಜಿ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಲಖನೌ ನಾಯಕ ಕೆ.ಎಲ್.ರಾಹುಲ್ ಜೊತೆ ಅಸಭ್ಯವಾಗಿ ವರ್ತಿಸಿ ವಿವಾದಕ್ಕೀಡಾಗಿದರು. ಪಂದ್ಯ ಮುಗಿದ ನಂತರ ಲಖನೌ ಮಾಲೀಕರು ಮೈದಾನದಲ್ಲೇ ರಾಹುಲ್ ಮೇಲೆ ತಮ್ಮ ಕೋಪವನ್ನು ವ್ಯಕ್ತಪಡಿಸಿದರು. ಈ ಘಟನೆ ಕ್ರಿಕೆಟ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಘಟನೆಯಿಂದ ರಾಹುಲ್ ಅವರಿಗೂ ತಂಡದ ಮೇಲೆ ಬೇಸರವಿದೆ ಮತ್ತು ಬೇರೆ ತಂಡಕ್ಕೆ ಹೋಗಲಿದ್ದಾರೆ ಎಂಬ ಚರ್ಚೆಗಳು ಆರಂಭವಾದವು. ಅದರಲ್ಲೂ ಆರ್ಸಿಬಿಗೆ ರಾಹುಲ್ ಬರಲಿದ್ದಾರೆ ಎಂಬ ಸುದ್ದಿ ಬಲವಾಗಿದೆ.
ಇದೇ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ಆ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಕೆಎಲ್ ರಾಹುಲ್ ಜೊತೆ ಮಾತನಾಡಿದ್ದಾರೆ. ಆರ್‌ಸಿಬಿ ತಂಡದಲ್ಲಿ ನಿಮ್ಮನ್ನು ನೋಡಲು ಬಯಸುತ್ತೇನೆ. ನಾನು ಆರ್‌ಸಿಬಿ ಅಭಿಮಾನಿ. ಬಹಳ ವರ್ಷಗಳಿಂದ ಆರ್‌ಸಿಬಿ ಫಾಲೋ ಮಾಡುತ್ತಾ ಬರುತ್ತಿದ್ದೇನೆ. ನೀವು ಈ ಹಿಂದೆ ಆರ್ಸಿಬಿಯಲ್ಲಿದ್ರಿ ಇದೀಗ ಮತ್ತೆ ಆರ್ಸಿಬಿಗೆ ಬರಬೇಕೆಂಬ ಆಸೆ ಇದೆ ಎಂದು ಆ ವ್ಯಕ್ತಿ ಹೇಳಿದ್ದಾರೆ.
I'm happy that KL Rahul knows about the rumours that are going around for him & RCB.
Please boss change your IPL team! 🙏❤️ pic.twitter.com/Os06Uj39gQ
— Kunal Yadav (@Kunal_KLR) September 14, 2024
ಈ ವೇಳೆ ಪ್ರತಿಕ್ರಿಯೆ ನೀಡಿರುವ ರಾಹುಲ್, ನಾನು ಕೂಡ ಅದನ್ನೇ ಭಾವಿಸುತ್ತೇನೆ ಎಂದಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ರಾಹುಲ್ ಅವರು ಆರ್ಸಿಬಿಗೆ ಬರೋದು ಪಕ್ಕಾ ಎಂದು ಕ್ರೀಡಾಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. (ಏಜೆನ್ಸೀಸ್)
ನಿಮ್ಮ ಅಂಗೈನಲ್ಲಿ ತ್ರಿಶೂಲ ಗುರುತು ಇದೆಯಾ ನೋಡಿ… ಇದರರ್ಥ ತಿಳಿದ್ರೆ ನಿಮ್ಮ ಹುಬ್ಬೇರೋದು ಖಚಿತ!
ಇನ್ಮುಂದೆ ನಾನು ಕೂಡ ನಿಮ್ಮನ್ನು ಅಣ್ಣಾ ಎಂದೇ ಕರೆಯುತ್ತೇನೆ! ನಾನಿ ಬಗ್ಗೆ ವಿಜಯ್ ಅಚ್ಚರಿ ಹೇಳಿಕೆ