ದೈಹಿಕ ಸಂಬಂಧ ಬೆಳೆಸುವ ಬದಲು... ಸದ್ಯ ಎಲ್ಲೆಡೆ ಸದ್ದು ಮಾಡ್ತಿದೆ ಹೊಸ ಸಿಮ್ಮರ್​ ಡೇಟಿಂಗ್​ ಟ್ರೆಂಡ್​! Simmer Dating

Simmer Dating
Published on

Simmer Dating : ನಾವಿಂದು ಡೇಟಿಂಗ್​ ಟ್ರೆಂಡ್ಸ್​ ಯುಗದಲ್ಲಿ ವಾಸಿಸುತ್ತಿದ್ದೇವೆ. ಘೋಸ್ಟಿಂಗ್​, ಸಿಚುವೇಶನ್​ಶಿಪ್​, ಬ್ರೆಡ್​ಕ್ರಂಬಿಂಗ್​, ಜೋಂಬಿಯಿಂಗ್, ಸ್ಲೆಡ್ಜಿಂಗ್​​ ಮತ್ತು ಫ್ರೆಂಡ್​ಶಿಪ್​ ಮ್ಯಾರೇಜ್​ನಂತಹ ಅನೇಕ ಡೇಟಿಂಗ್​ ಟ್ರೆಂಡ್ಸ್​ ಜಗತ್ತಿನಲ್ಲಿಂದು ಚರ್ಚೆಯಾಗುತ್ತಿವೆ. ಅನೇಕ ದೇಶದ ಯುವಕರು ಈ ಟ್ರೆಂಡ್ಸ್​ ಹಿಂದೆ ಬಿದ್ದಿದ್ದಾರೆ. ಇದೀಗ ಈ ಗುಂಪಿನ ಅಡಿಯಲ್ಲಿ ಬಂದಿರುವ ಹೊಸ ಟ್ರೆಂಡ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದೆ. ಅದುವೇ ಸಿಮ್ಮರ್​ ಟ್ರೆಂಡ್​.

ಪ್ರಸ್ತುತ ಜಗತ್ತು ವೇಗವಾಗಿ ಬದಲಾಗುತ್ತಿದೆ. ಕ್ಷಣಾರ್ಧದಲ್ಲೇ ಎಲ್ಲ ಮಾಹಿತಿ ನಮಗೆ ಗೊತ್ತಾಗುತ್ತಿದೆ. ಡೇಟಿಂಗ್ ಅಪ್ಲಿಕೇಶನ್‌ಗಳು ಅನೇಕ ರೀತಿಯ ಸಂಬಂಧಗಳನ್ನು ಬೆಳೆಸುತ್ತಿವೆ. ಇದೇ ಸಂದರ್ಭದಲ್ಲಿ ಸಿಮ್ಮರ್ ಡೇಟಿಂಗ್ ಕೂಡ ಎಲ್ಲೆಡೆ ಟ್ರೆಂಡ್ ಆಗುತ್ತಿದೆ.

ಏನಿದು ಸಿಮ್ಮರ್​ ಡೇಟಿಂಗ್​?

ಈ ಹೊಸ ಡೇಟಿಂಗ್​ ಟ್ರೆಂಡ್​ನಲ್ಲಿ ಸಂಬಂಧಗಳು ನಿಧಾನವಾಗಿ ಬೆಳೆಯುತ್ತವೆ. ನೀವು ಇಷ್ಟಪಡುವ ಯಾರಿಗಾದರೂ ನಿರಂತರವಾಗಿ ಮಸೇಜ್​ ಕಳುಹಿಸುವುದು, ನಂತರ ಕಾಫಿಗಾಗಿ ಭೇಟಿಯಾಗುವುದು ಮತ್ತು ಸಂಬಂಧವನ್ನು ಮುಂದುವರಿಸುವುದು ಸಿಮ್ಮರ್ ಡೇಟಿಂಗ್​ನ ವಿಶೇಷತೆ.

ಈ ಟ್ರೆಂಡ್​ನಲ್ಲಿ ದೈಹಿಕ ಸಂಬಂಧಕ್ಕೆ ಧಾವಿಸುವ ಬದಲು ಅಥವಾ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವ ಬದಲು, ಭಾವನಾತ್ಮಕ ಸಂಬಂಧ ಮತ್ತು ಹೊಂದಾಣಿಕೆಯನ್ನು ನಿರ್ಮಿಸುತ್ತದೆ. ಸಿಮ್ಮರ್​ ಡೇಟಿಂಗ್ ಆಳವಾದ ಮತ್ತು ಅರ್ಥಪೂರ್ಣವಾದ ಸಂಬಂಧವನ್ನು ಬೆಳೆಸುತ್ತದೆ. ಇಲ್ಲಿ ಸಂಬಂಧವು ಬಹಳ ನಿಧಾನವಾಗಿ ರೂಪುಗೊಳ್ಳುತ್ತದೆ. ಸದ್ಯ ಯುವಜನತೆ ಈ ಸಂಬಂಧದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ತೋರಿಸುತ್ತಿದ್ದಾರೆ.

ಇನ್ನು ಈ ಡೇಟಿಂಗ್ ಟ್ರೆಂಡ್‌ನಲ್ಲಿ ಇನ್ನೊಬ್ಬರ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಅವಕಾಶವಿದೆ. ಅಲ್ಲದೆ, ಈ ರೀತಿಯ ಸಂಬಂಧವು ತುಂಬಾ ಪ್ರಬಲವಾಗಿರುತ್ತದೆ. ಹೀಗಾಗಿಯೇ ಹೆಚ್ಚಿನ ಯುವ ಜನಾಂಗ ಈ ಡೇಟಿಂಗ್​ ಟ್ರೆಂಡ್​ ಅನ್ನು ಅನುಸರಿಸುತ್ತಿದ್ದಾರೆ.

ಸಿಮ್ಮರ್ ಡೇಟಿಂಗ್‌ನ ಪ್ರಯೋಜನಗಳೇನು?

ಈ ಹೊಸ ರೀತಿಯ ಡೇಟಿಂಗ್‌ನಲ್ಲಿ ಇತರ ವ್ಯಕ್ತಿಯ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳಲು ನಿಮಗೆ ಅವಕಾಶವಿರುತ್ತದೆ. ಸಂಬಂಧವನ್ನು ಮುಂದುವರಿಸಬೇಕೆ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಲು ಸಹ ನಿಮಗೆ ಸಹಾಯ ಮಾಡುತ್ತದೆ. ಈ ಡೇಟಿಂಗ್​ ಮೇಲೆ ಪೂರ್ಣ ಏಕಾಗ್ರತೆ ಇಲ್ಲದಿರುವುದರಿಂದ, ವೈಯಕ್ತಿಕ ಬೆಳವಣಿಗೆಗೂ ಸಮಯವಿರುತ್ತದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net