ವಿಜಯವಾಡ: ಮದುವೆಯಾದ ಮಾರನೇ ದಿನ ನವಜೋಡಿ ದೇವರ ದರ್ಶನ ಪಡೆಯುವುದು ಸಾಮಾನ್ಯ. ಅದೇ ರೀತಿ ಇಲ್ಲೊಂದು ಜೋಡಿ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗಿದ್ದರು. ಆದರೆ, ತಿಮ್ಮಪ್ಪನ ದರ್ಶನ ಬದಲು ಆ ಜೋಡಿಗೆ ಪೊಲೀಸರ ದರ್ಶನವಾಗಿದೆ. ಅಂದರೆ, ನವ ಜೋಡಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಸಲಿಗೆ ಏನಾಯಿತು? ನವದಂಪತಿಯನ್ನು ಏಕೆ ಬಂಧಿಸಿದರು? ಅವರು ಮಾಡಿದ ತಪ್ಪಾದರೂ ಏನು? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
ತಿರುಮಲ ದರ್ಶನಕ್ಕೆ ಬಂದಿದ್ದ ವಿಜಯವಾಡ ಮೂಲದ ನವ ಜೋಡಿಯನ್ನು ಪೊಲೀಸರು ಬಂಧಿಸಿರುವುದು ಇದೀಗ ಸಂಚಲನ ಮೂಡಿಸಿದೆ. ವಿಜಯವಾಡ ಮೂಲದ ಸಾಂಬಶಿವರಾವ್ ಅಲಿಯಾಸ್ ಶಿವ ಮತ್ತು ಅಲೇಖ್ಯ ಕಳೆದ ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ, ಇಬ್ಬರ ಮದುವೆಗೆ ಎರಡೂ ಕುಟುಂಬದವರಿಂಗಲೂ ವಿರೋಧ ಇತ್ತು. ಎರಡು ದಿನಗಳ ಹಿಂದಷ್ಟೇ ಇಬ್ಬರು ಮನೆ ಬಿಟ್ಟು ಹೋಗಿ ಮದುವೆಯಾಗಿದ್ದರು.
ಇತ್ತ ಅಲೇಖ್ಯಾ ಕುಟುಂಬಸ್ಥರು ವಿಜಯವಾಡದ ಭವಾನಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ಸ್ವೀಕರಿಸಿದ ಪೊಲೀಸರು ತನಿಖೆ ನಡೆಸಿ, ನವವಿವಾಹಿತರು ತಿರುಮಲ ದೇವರ ದರ್ಶನಕ್ಕೆಂದು ತಿರುಮಲಕ್ಕೆ ಬರುತ್ತಿರುವುದು ಗೊತ್ತಾಗಿದೆ. ಈ ಬಗ್ಗೆ ಭವಾನಿಪುರಂ ಪೊಲೀಸರು ತಿರುಚಾನೂರು ಪೊಲೀಸರಿಗೆ ಮಾಹಿತಿ ನೀಡಿದರು.
ನವಜೋಡಿ ತಮ್ಮ ವಾಹನದಲ್ಲಿ ತಿರುಚಾನೂರು ಬಳಿ ಬರುತ್ತಿದ್ದಾಗ ಪೊಲೀಸರು ಅವರನ್ನು ಬಂಧಿಸಿ, ಭವಾನಿಪುರಂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇತ್ತ ತಮ್ಮ ಬಂಧನವನ್ನು ಪ್ರಶ್ನಿಸಿರುವ ಅಲೇಖ್ಯ, ಕಳೆದ 11 ವರ್ಷಗಳಿಂದ ಪ್ರೀತಿಸುತ್ತಿದ್ದು ಈಗ ಪರಸ್ಪರ ಒಪ್ಪಿ ಮದುವೆಯಾಗಿದ್ದೇವೆ ಎಂದಿದ್ದಾರೆ. ಮದುಮಗ ಶಿವ ಕೂಡ ಒಪ್ಪಿಯೇ ಮದುವೆ ಆಗಿದ್ದೇವೆ ಎಂದಿದ್ದಾನೆ. ಪೊಲೀಸರು ನಮಗೆ ರಕ್ಷಣೆ ನೀಡಬೇಕು ಎಂದು ಇಬ್ಬರು ಮನವಿ ಮಾಡಿದ್ದಾರೆ.
ವಶಕ್ಕೆ ಪಡೆದಿರುವ ನವಜೋಡಿಯನ್ನು ಭವಾನಿಪುರಂ ಪೊಲೀಸರ ವಶಕ್ಕೆ ಒಪ್ಪಿಸಲಾಗುವುದು ಎಂದು ತಿರುಚಾನೂರು ಸಿಐ ಸುನೀಲ್ ಕುಮಾರ್ ತಿಳಿಸಿದ್ದಾರೆ. (ಏಜೆನ್ಸೀಸ್)
ಯಾರೇ ಒಪ್ಪಲಿ ಒಪ್ಪದಿರಲಿ ಆತನೇ ವಿಶ್ವದ ಶ್ರೇಷ್ಠ ಬೌಲರ್! ಭಾರತದ ವೇಗಿಯನ್ನು ಮೆಚ್ಚಿದ ಪಾಕ್ ಲೆಜೆಂಡ್
ರಾಜ್ಯಪಾಲರ ನಡೆ ವಿರುದ್ಧ ರಾಜ್ಯಾದ್ಯಂತ ನಾಳೆ ಕಾಂಗ್ರೆಸ್ ಪ್ರತಿಭಟನೆ: ಡಿಸಿಎಂ ಡಿ.ಕೆ. ಶಿವಕುಮಾರ್