ಸಂಸ್ಕಾರದೊಂದಿಗಿ ಶಿಕ್ಷಣ ಕಾಲದ ಅಗತ್ಯ

Sul_Chuntharu
Published on

ಸುಳ್ಯ: ಶಾಲೆಗಳು ಇಂದು ವ್ಯಾಪಾರೀಕರಣ ಆಗುವ ಕಾಲಘಟ್ಟದಲ್ಲಿ ಗುರುಕುಲ ಪದ್ಧತಿಯಲ್ಲಿ ಶಿಕ್ಷಣದ ಪಾವಿತ್ರೃ ಕಾಪಾಡಿಕೊಂಡು, ಸಂಸ್ಕಾರ ನೀಡುವ ಶಾಲೆ ಈಗಿನ ಅಗತ್ಯ. ಸಂಸ್ಕಾರದೊಂದಿಗೆ ಕಲಿತಾಗ ಸತ್ಪ್ರಜೆಯಾಗಲು ಸಾಧ್ಯ ಎಂದು ಜಿಲ್ಲಾ ಗೃಹರಕ್ಷಕ ದಳ ಮಾಜಿ ಸಮಾದೇಷ್ಟ ಡಾ.ಮುರಲೀ ಮೋಹನ್ ಚೂಂತಾರು ಹೇಳಿದರು.

ಅವರು ನಗರದ ಸ್ನೇಹ ಶಾಲೆಯ ‘ಸ್ನೇಹ ಆರೋಗ್ಯ ಕೇಂದ್ರ’ವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು. ವೈದ್ಯ ಡಾ.ವಿದ್ಯಾ ಶಾಂಭವ ಪಾರೆ ಅಧ್ಯಕ್ಷತೆ ವಹಿಸಿದ್ದರು.

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ.ಗಿರೀಶ್ ಭಾರದ್ವಾಜ್, ಡಾ.ರಂಗಯ್ಯ ಶುಭ ಹಾರೈಸಿದರು. ಮಕ್ಕಳ ತಜ್ಞ ಡಾ.ಶ್ರೀಕೃಷ್ಣ ಭಟ್, ಡಾ.ವಿದ್ಯಾಶಾರದಾ ಮೊದಲಾದವರಿದ್ದರು.

ಆರೋಗ್ಯ ಕೇಂದ್ರದ ವೈದ್ಯೆ ಡಾ.ಸುಶ್ಮಿತಾ ಎಂ.ಎಂ. ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂಸ್ಥೆಯ ಅಧ್ಯಕ್ಷ ಡಾ.ಚಂದ್ರಶೇಖರ ದಾಮ್ಲೆ ಸ್ವಾಗತಿಸಿದರು. ಮುಖ್ಯಶಿಕ್ಷಕಿ ಜಯಲಕ್ಷ್ಮೀ ದಾಮ್ಲೆ ವಂದಿಸಿದರು. ಅಕ್ಷರ ದಾಮ್ಲೆ ನಿರೂಪಿಸಿದರು. ಡಾ.ಮುರಲೀಮೋಹನ್ ಚೂಂತಾರು ದಂಪತಿಯನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net