More

    ಯುವಕನ ಸಮಯ ಪ್ರಜ್ಞೆಯಿಂದ ಉಳಿಯಿತು 6 ತಿಂಗಳ ಮಗುವಿನ ಜೀವ!

    ರಾಮನಗರ: ನಿಲ್ಲಿಸಿದ್ದ ಕಾರಿನಿಂದ ಕೆಳಗೆ ಇಳಿದ ಪತಿ, ತಮ್ಮ ಮಗುವನ್ನು ಹಿಡಿದು ಹೊರಗೆ ನಿಂತಿದ್ದ ವೇಳೆ ಒಳಗಿದ್ದ ಪತ್ನಿ ಕಾರಿನ ಹ್ಯಾಂಡ್​ ಬ್ರೇಕ್​ ಒತ್ತಿದ ಪರಿಣಾಮ ಕಾರು ದಿಢೀರ್​ ಮುಂದೆ ಚಲಿಸಿದೆ. ಈ ವೇಳೆ ಕೈಯಲ್ಲಿದ್ದ ಮಗುವನ್ನು ಬಿಳಿಸುತ್ತಿದ್ದ ಪತಿಯಿಂದ ಯುವಕನೊಬ್ಬ ಸಮಯ ಪ್ರಜ್ಞೆಯಿಂದ ಕಂದಮನನ್ನು ರಕ್ಷಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

    ಇದನ್ನೂ ಓದಿ: ಜಾಮೀನು ಸಿಕ್ಕರೂ 3 ವರ್ಷ ಜೈಲಿನಲ್ಲಿದ್ದ!; ಇಮೇಲ್ ನೋಡದ ಅಧಿಕಾರಿಗಳಿಗೆ ದಂಡ ವಿಧಿಸಿದ ಕೋರ್ಟ್..

    ಈ ಘಟನೆ ರಾಮನಗರದ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದ ಬಳಿ ನಡೆದಿದ್ದು, ದೃಶ್ಯ ಸ್ಥಳೀಯ ಅಂಗಡಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸ್ವಿಫ್ಟ್​ ಕಾರನ್ನು ಪಾರ್ಕಿಂಗ್ ಮಾಡಿದ ಪತಿ ತಮ್ಮ 6 ತಿಂಗಳ ಮಗುವನ್ನು ಕೈಯಲ್ಲಿಡಿದು ಹೆಂಡತಿಗೆ ಕೆಳಗಿಳಿಯಲು ಹೇಳಿದ್ದಾರೆ. ಕಾರಿನಿಂದ ಇಳಿಯುವಾಗ ತಿಳಿಯದೆ ಹ್ಯಾಂಡ್​ ಬ್ರೇಕ್​ ಮೇಲೆ ಮಹಿಳೆ ಕೈಯಿಟ್ಟ ಪರಿಣಾಮ ಕಾರು ದಿಢೀರ್​ ಮುಂದೆ ಚಲಿಸಿದೆ.

    ಇದನ್ನೂ ಓದಿ:  ಬುದ್ಧಿಮಾಂದ್ಯರಿಗೆ ಹಾಗೂ ಆರೈಕೆದಾರರಿಗೆ ಉಚಿತ ಕಣ್ಣಿನ ಔಷಧಿ ವಿತರಣೆ ಶಿಬಿರ

    ಕೂಡಲೇ ಕಾರನ್ನು ನಿಲ್ಲಿಸಲು ಮುಂದಾದ ಪತಿ ಕಾರೊಳಗೆ ಕುಳಿತುಕೊಳ್ಳಲು ಯತ್ನಿಸುವಾಗ ಆತನ ಕೈಯಲ್ಲಿದ್ದ ಮಗು ಕೆಳಗೆ ಬೀಳುತ್ತಿದ್ದುದನ್ನು ಗಮನಿಸಿದ  ಯುವಕನೊಬ್ಬ ಮಗುವನ್ನು ತನ್ನ ಸಮಯ ಪ್ರಜ್ಞೆಯಿಂದ ಬಚಾವ್ ಮಾಡಿದ್ದಾನೆ. ಈ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಸಮಂತಾ ನಟಿಸಬೇಕಿದ್ದ ಸಿನಿಮಾಗೆ ರಶ್ಮಿಕಾ ಮಂದಣ್ಣ ನಾಯಕಿ?

    ರಾಜ್ಯೋತ್ಸವ ರಸಪ್ರಶ್ನೆ - 24

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts