More

  ಬುದ್ಧಿಮಾಂದ್ಯರಿಗೆ ಹಾಗೂ ಆರೈಕೆದಾರರಿಗೆ ಉಚಿತ ಕಣ್ಣಿನ ಔಷಧಿ ವಿತರಣೆ ಶಿಬಿರ

  ಗದಗ: ವಿಶ್ವ ಕಲ್ಯಾಣ ಸಂಸ್ಥೆ ಹಾಗೂ ಶ್ರೀ ಸದ್ಗುರು ಈಶ್ವರಾನಂದಸ್ವಾಮಿ ಸೇವಾ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಭುವನೇಶ್ವರಿ ವಿಶೇಷ ಅಗತ್ಯವುಳ್ಳ ಮಕ್ಕಳ ಶಾಲೆಯಲ್ಲಿ ಬುದ್ಧಿಮಾಂದ್ಯರಿಗೆ ಹಾಗೂ ಆರೈಕೆದಾರರಿಗೆ ಉಚಿತ ಕಣ್ಣಿನ ಔಷಧಿ ವಿತರಣೆ ಶಿಬಿರ ಯಶಸ್ವಿಯಾಗಿ ಜರುಗಿತು.
  ಶಿಬಿರದ ಸಾನಿಧ್ಯವನ್ನು ಶ್ರೀ ಸಿದ್ಧಾರೂಢ ಮಠದ ಪೀಠಾಧಿಪತಿಗಳಾದ ಶ್ರೀ ಈಶ್ವರಾನಂದ ಮಹಾಸ್ವಾಮಿಗಳ ಶಿಷ್ಯರಾದ ಸದ್ಗುರು ದಯಾನಂದ ಮಹಾಸ್ವಾಮಿಗಳು ವಹಿಸಿ ಮಾತನಾಡಿ, ವಿಶೇಷ ಚೇತನರಿಗೆ ಭುವನೇಶ್ವರಿ ವಿಶೇಷ ಶಾಲೆಯಲ್ಲಿ ಪ್ರತಿ ತಿಂಗಳು ಉಚಿತವಾಗಿ ಕಣ್ಣಿನ ಔಷಧಿಯನ್ನು ಹಾಕಲಾಗುವುದು. ಎಲ್ಲ ಬುದ್ಧಿಮಾಂದ್ಯರು ಹಾಗೂ ಆರೈಕೆದಾರರೆಲ್ಲರೂ ಸದ್ಬಳಕೆ ಮಾಡಿಕೊಳ್ಳಬೇಕೆಂದು ಕರೆ ನೀಡುತ್ತಾ, ಈ ಸೇವಾ ಕಾರ್ಯಕ್ಕೆ ಎಲ್ಲರ ಸಹಾಯ-ಸಹಕಾರ ಬಹಳ ಅವಶ್ಯವಿದೆ. ಎಲ್ಲರೂ ಈ ಕಾರ್ಯದಲ್ಲಿ ಕೈ ಜೊಡಿಸಿ ಯಶಸ್ವಿಗೊಳಿಸಿ ವಿಶೇಷ ಚೇತನರನ್ನು ಮುಖ್ಯವಾಹಿನಿಗೆ ತರಲು ಸಹಕರಿಸನೋಣವೆಂದು ಹೇಳುತ್ತಾ, ಎಲ್ಲರಿಗೂ ಸದ್ಗುರು ಸಿದ್ಧರೂಢರು ಸನಮಂಗಲವನ್ನುAಟು ಮಾಡಲೆಂದು ಆಶೀರ್ವದಿಸಿದರು.
  ಶಿಬಿರದ ಮುಖ್ಯ ಅಥಿತಿಗಳಾಗಿ ಖ್ಯಾತ ರೇಖಿ ಹಾಗೂ ಸಮ್ಮೋಹನ ತಜ್ಞ ಡಾ.ಅರವಿಂದ ಸಜ್ಜನವರು ಮಾತನಾಡಿ, ಅವಕಾಶ ವಂಚಿತ ಮಕ್ಕಳಿಗೆ ಅತ್ಯಂತ ಪ್ರೀತಿವಾತ್ಸಲ್ಯ ಹಾಗೂ ತಾಳ್ಮೆಯಿಂದ ತರಬೇತಿ ನೀಡುತ್ತಿರುವುದು ಶ್ಲಾಘನೀಯ, ನಿಸ್ವಾರ್ಥದಿಂದ ಇಂತಹ ಸೇವಾ ಕಾರ್ಯವನ್ನು ಮಂಜುನಾಥ ಹದ್ದಣ್ಣವರ ಮಾಡುತ್ತಿದ್ದಾರೆ ಅವರು ಸಮಾಜಕ್ಕೆ ಸಮರ್ಪಣಾ ಭಾವದಿಂದ ಸೇವಾ ಕಾರ್ಯಗಳನ್ನು ಮಾಡುತ್ತಿದ್ದು, ಇದು ಸಮಾಜಕ್ಕೆ ಅತ್ಯಂತ ಅವಶ್ಯವಾದ ಸೇವಾ ಕಾರ್ಯ ಈ ಸೇವಾ ಕಾರ್ಯಕ್ಕೆ ನಾನು ಸಹಾಯ-ಸಹಕಾರ ಮಾಡುತ್ತಾ, ರೇಖಿ ಮೂಲಕ ವಿಶೇಷ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಸಾಧ್ಯವಿದೆ. ಇದನ್ನು ಉಚಿತವಾಗಿ ಈ ವಿಶೇಷ ಶಾಲೆಗೆ ಮಾಡುತ್ತೇನೆಂದು ಹೇಳಿದರು.
  ಕಾರ್ಯಕ್ರಮದ ಅಥಿತಿಗಳಾಗಿ ಉದ್ಯಮಿಗಳಾದ ಶ್ರೀ ಶಂಕರಗೌಡ ಪಾಟೀಲವರು ಹಾಗೂ ಕೆ. ಎಚ್. ನೀಲಪ್ಪ ಮಾತನಾಡಿ, ಎಲ್ಲ ಸರಿ ಇದ್ದವರಿಗೆ ಕಲಿಸುವುದು ದೊಡ್ಡ ವಿಷಯವಲ್ಲ, ಇಂತಹ ಮಕ್ಕಳಿಗೆ ತಾಳ್ಮೆಯಿಂದ ಕಲಿಸುತ್ತಿರುವ ಸಿಬ್ಬಂದಿ ವರ್ಗದ ಕಾರ್ಯ ಶ್ಲಾಘನೀಯ. ಈ ವಿಶೇಷ ಮಕ್ಕಳಿಂದ ಸಮಾಜಕ್ಕೆ, ಸಮಾಜದಿಂದ ಇವರಿಗೆ ಯಾವುದೇ ರೀತಿಯಾದ ತೊಂದರೆಯಾಗದAತೆ ನೋಡಿಕೊಳ್ಳುತ್ತಿರುವ ಈ ಸಂಸ್ಥೆಯ ಸೇವಾ ಕಾರ್ಯ ಸಮಾಜಕ್ಕೆ ಮಾದರಿಯಾಗಿದೆ. ಈ ಸೇವಾ ಕಾರ್ಯ ತುಂಬಾ ಕಷ್ಟಕರವಾದವಾಗಿದೆ. ದಿವ್ಯಾಂಗರಲ್ಲಿ ಅದ್ಬುತವಾದ ಶಕ್ತಿ ಇರುತ್ತದೆ. ಅವರನ್ನು ವೈಜ್ಞಾನಿಕವಾಗಿ ಶಿಕ್ಷಣ ಹಾಗೂ ತರಬೇತಿ ನೀಡಿ, ಸಮಾಜದಲ್ಲಿ ಸ್ವಾವಲಂಬಿ ಜೀವನವನ್ನು ನಡೆಸುವ ಹಾಗೆ ಮಾಡಿ, ಅವರಲ್ಲಿ ಸೂಪ್ತವಾದ ಶಕ್ತಿಯನ್ನು ಹೊರತರುವ ಈ ಸೇವಾ ಕಾರ್ಯ ದೇವರು ಮೆಚ್ಚುವಂತಹದ್ದು, ಈ ಸೇವಾ ಕಾರ್ಯಕ್ಕೆ ನಿರಂತರವಾಗಿ ಸಹಾಯ-ಸಹಕಾರ ನೀಡುವುದಾಗಿ ಹೇಳಿದರು.
  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಮಂಜುನಾಥ ಹದ್ದಣ್ಣವರವರು ವಹಿಸಿ ಮಾತನಾಡಿ, ವಿಶ್ವ ಕಲ್ಯಾಣ ಸಂಸ್ಥೆಯಿAದ ವಿಶೇಷ ಚೇತನರ ಸೇವೆಯನ್ನು ಕಳೆದ ೭ ವರ್ಷಗಳಿಂದ ನಿಸ್ವಾರ್ಥದಿಂದ ಮಾಢುತ್ತಿದೆ. ಎಲ್ಲ ಸೌಲಭ್ಯಗಳು ಒಂದೇ ಸೂರಿನಡಿಯಲ್ಲಿ ವಿಶೇಷ ಚೇತನರಿಗೆ ಸಿಗುವಂತೆ ಮಾಡುವ ಉದ್ದೇಶದಿಂದ ಪಂಚೇAದ್ರಿಯಗಳಲ್ಲಿ ಅಂತ್ಯAತ ಪ್ರಮುಖವಾದ ಅಂಗ ಕಣ್ಣು, ಪೂಜ್ಯರ ಸಮ್ಮುಖದಲ್ಲಿ ಕಣ್ಣಿನ ಸಂರಕ್ಷಣೆಯ ಹಿತದೃಷ್ಠಿಯಿಂದ ಉಚಿತವಾಗಿ ಕಣ್ಣಿಗೆ ಔಷಧಿಯನ್ನು ಸದ್ಗುರು ಶ್ರೀ ಸಿದ್ಧರೂಢರ ಮಠದಿಂದ ಸಿಗುತ್ತಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ. ವಿಶೇಷ ಚೇತನರ ಸರ್ವಾಂಗೀಣ ಅಭಿವೃದ್ಧಿಗೆ ನಮ್ಮ ಸಂಸ್ಥೆ ಬದ್ಧವಾಗಿದೆಂದು ಹೇಳಿದರು.
  ಶಿಬಿರದಲ್ಲಿ ದೀಪ ಬೆಳಗಿಸಿ, ಎಲ್ಲ ವಿಶೇಷ ಮಕ್ಕಳಿಗೆ, ಎಲ್ಲ ಬುದ್ಧಿಮಾಂದ್ಯರಿಗೆ ಹಾಗೂ ಆರೈಕೆದಾರರಿಗೆ ಉಚಿತ ಕಣ್ಣಿನ ಔಷಧಿಯನ್ನು ಹಾಕಲಾಯಿತು. ಶ್ರೀಮತಿ ನಿರ್ಮಲಾ ಕರಿಸಿದ್ಧಿಮಠವರು ಶಿಬಿರದಲ್ಲಿ ಪಾಲ್ಗೊಂಡ ಎಲ್ಲ ಬುದ್ದಿಮಾಂದ್ಯರಿಗೆ ಹಾಗೂ ಆರೈಕೆದಾರರಿಗೆ ಅಲ್ಪೋಪಹಾರವನ್ನು ವ್ಯವಸ್ಥೆ ಮಾಡಿದ್ದರು. ಕಾರ್ಯಕ್ರಮದಲ್ಲಿ ಮಂಜುನಾಥ ಆಸಂಗಿ, ಮಮತಾ ಪರ್ವತಗೌಡರ, ಇಂದ್ರವ್ವ ದೊಡ್ಡಮನಿ. ಶಾಂತಮ್ಮಾ ಹೂಗಾರ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವ ವಿದ್ಯಾಲಯದ ಎಮ್‌ಎಸ್‌ಡಬ್ಲೂö್ಯ ಪ್ರಶಿಕ್ಷಣಾರ್ಥಿಗಳಾದ ವಿರೇಶ ಭಂಗಿ, ಹಾಗೂ ವಿಶೇಷ ಮಕ್ಕಳು, ಸಿಬ್ಬಂದಿ ಹಾಗೂ ಪಾಲಕರು ಉಪಸ್ಥಿತರಿದ್ದರು.

  ರಾಜ್ಯೋತ್ಸವ ರಸಪ್ರಶ್ನೆ - 24

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts