More

    ಪಶ್ಚಿಮ ಬಂಗಾಳದಲ್ಲಿ ದಿ ಕೇರಳ ಸ್ಟೋರಿ ಬ್ಯಾನ್​: ಸುಪ್ರೀಂಕೋರ್ಟ್​ ಮೆಟ್ಟಿಲೇರಿದ ಚಿತ್ರತಂಡ

    ನವದೆಹಲಿ: ದಿ ಕೇರಳ ಸ್ಟೋರಿ ಸಿನಿಮಾವನ್ನು ನಿಷೇಧಿಸಿರುವ ಪಶ್ಚಿಮ ಬಂಗಾಳ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಚಿತ್ರತಂಡ ಸುಪ್ರೀಂಕೊರ್ಟ್​ ಮೆಟ್ಟಿಲೇರಿದೆ. ಅಲ್ಲದೆ, ತಮಿಳುನಾಡು ಚಿತ್ರಮಂದಿರಗಳಲ್ಲಿ ಭದ್ರತೆ ಒದಗಿಸುವಂತೆ ಸರ್ಕಾರಕ್ಕೆ ಸೂಚಿಸುವಂತೆಯೂ ಅರ್ಜಿಯಲ್ಲಿ ಮನವಿ ಮಾಡಿಕೊಳ್ಳಲಾಗಿದೆ.

    ಹಿಂಸಾಚಾರ ತಡೆಗಟ್ಟುವ ಉದ್ದೇಶ

    ಸೋಮವಾರ (ಮೇ 8) ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ದ್ವೇಷ ಮತ್ತು ಹಿಂಸಾಚಾರವನ್ನು ತಡೆಗಟ್ಟುವ ಉದ್ದೇಶದಿಂದ ವಿವಾದಾತ್ಮಕ ಸಿನಿಮಾ ಚಲನಚಿತ್ರ ‘ದಿ ಕೇರಳ ಸ್ಟೋರಿ’ ಪ್ರದರ್ಶನವನ್ನು ತಕ್ಷಣವೇ ನಿಷೇಧಿಸುವಂತೆ ಆದೇಶಿಸಿದರು.

    ಇದನ್ನೂ ಓದಿ: ಕಣ್ಣಿಗೊಂದು ಸವಾಲ್​: ಜೀನಿಯಸ್​ನಿಂದ ಮಾತ್ರ ಈ ಫೋಟೋದಲ್ಲಿರುವ ಬೆಕ್ಕನ್ನು ಪತ್ತೆಹಚ್ಚಲು ಸಾಧ್ಯ!

    ಹೆಣ್ಣುಮಕ್ಕಳ ಮೇಲೆ ಏಕಿಲ್ಲ?

    ಪಶ್ಚಿಮ ಬಂಗಾಳವೂ ದಿ ಕೇರಳ ಸ್ಟೋರಿ ಸಿನಿಮಾವನ್ನು ಬ್ಯಾನ್​ ಮಾಡಿದ ಮೊದಲ ರಾಜ್ಯ ಎನಿಸಿಕೊಂಡಿದೆ. ಈ ನಿರ್ಧಾರವನ್ನು ಕೇಂದ್ರ ಸಚಿವ ಅನುರಾಗ್​ ಠಾಕೂರ್​ ಖಂಡಿಸಿದ್ದಾರೆ. ತೃಣಮೂಲ ಕಾಂಗ್ರೆಸ್​ ಪಕ್ಷದ ಮುಖ್ಯಸ್ಥೆಗೆ ಉಗ್ರರ ಮೇಲಿರುವ ಕರುಣೆಯಷ್ಟು, ಅಮಾಯಕ ಹೆಣ್ಣುಮಕ್ಕಳ ಮೇಲೆ ಏಕಿಲ್ಲ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಅನುರಾಗ್​ ಠಾಕೂರ್​ ಸಿನಿಮಾ ಸಹ ವೀಕ್ಷಣೆ ಮಾಡಿದ್ದಾರೆ.

    ಟಿಎಂಸಿ ಸರ್ಕಾರ ವಿಧಿಸಿರುವ ನಿಷೇಧದ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಚಿತ್ರದ ನಿರ್ಮಾಪಕ ವಿಪುಲ್ ಶಾ ಕೂಡ ತಿಳಿಸಿದ್ದಾರೆ.

    ಈ ಹಿಂದೆ ಬಿಡುಗಡೆಯಾದ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಕುರಿತು ಮಾತನಾಡಿದ್ದ ಮಮತಾ ಬ್ಯಾನರ್ಜಿ, ಸಮಾಜದ ಒಂದು ವರ್ಗವನ್ನು ಅವಮಾನಿಸಲು ಈ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ ಟೀಕಿಸಿದ್ದರು.

    ಅಂದಹಾಗೆ ಪರ-ವಿರೋಧ ಚರ್ಚೆ ಹುಟ್ಟುಹಾಕಿರುವ ದಿ ಕೇರಳ ಸ್ಟೋರಿ ಸಿನಿಮಾ ಕೆಲವೆಡೆ ನಿಷೇಧದ ನಡುವೆಯೂ ಗಲ್ಲಾಪೆಟ್ಟಿಗೆಯಲ್ಲಿ ಭಾರೀ ಸದ್ದು ಮಾಡುತ್ತಿದೆ. ಪಶ್ಚಿಮ ಬಂಗಾಳ ಸರ್ಕಾರ ಈ ಸಿನಿಮಾವನ್ನು ಬ್ಯಾನ್​ ಮಾಡಿದ ಬೆನ್ನಲ್ಲೇ ಉತ್ತರ ಪ್ರದೇಶ ಸರ್ಕಾರ ಸಿನಿಮಾಗೆ ತೆರಿಗೆ ವಿನಾಯಿತಿ ಘೋಷಣೆ ಮಾಡಿದೆ. ಕೇರಳದ 32 ಸಾವಿರಕ್ಕೂ ಅಧಿಕ ಯುವತಿಯರನ್ನು ಮತಾಂತರಿಸಿ, ಐಸಿಸ್ ಪರ ಹೋರಾಡಲು, ಸಿರಿಯಾ, ಇರಾಕ್, ಅಫ್ಘಾನಿಸ್ತಾನ ದೇಶಗಳಿಗೆ ಸಾಗಿಸಲಾಗಿದೆ ಎಂಬ ಸಂಭಾಷಣೆ ಹಲವರ ಅಸಮಾಧಾನಕ್ಕೆ ಕಾರಣವಾಗಿದ್ದು, ಪರ-ವಿರೋಧ ಚರ್ಚೆಯನ್ನು ಹುಟ್ಟುಹಾಕಿದೆ.

    ಕೇರಳ ಸಿಎಂ ಪಿಣರಾಯಿ ವಿಜಯನ್, ‘ಇದು ಆರ್​ಎಸ್​ಎಸ್ ಪ್ರೇರಿತ, ಪ್ರಚಾರಕ್ಕಾಗಿ ಮಾಡಿರುವ ಸಿನಿಮಾ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದು, ಕೇರಳದ ಕಾಂಗ್ರೆಸ್ ಮುಖಂಡರು ಕೆಲವೆಡೆ ಪ್ರತಿಭಟನೆ ನಡೆಸಿದ್ದರು. ಮತ್ತೊಂದೆಡೆ ತಮಿಳು ನಾಡಿನಲ್ಲಿ ಮಲ್ಟಿಪ್ಲೆಕ್ಸ್, ಥಿಯೇಟರ್ ಮಾಲೀಕರು ಸ್ವಯಂಪ್ರೇರಿತರಾಗಿ ‘ದಿ ಕೇರಳ ಸ್ಟೋರಿ’ ಪ್ರದರ್ಶನ ಸ್ಥಗಿತಗೊಳಿಸಿದ್ದಾರೆ.

    ರಾಜ್ಯಾದ್ಯಂತ 13 ಥಿಯೇಟರ್​ಗಳಲ್ಲಿ ಮಾತ್ರ ಸಿನಿಮಾ ಪ್ರದರ್ಶಿಸಲಾಗುತ್ತಿದೆ. ಅದರ ನಡುವೆಯೇ ಸೋಮವಾರ (ಮೇ 8) ಪಶ್ಚಿಮ ಬಂಗಾಳದಲ್ಲಿ ಸಿನಿಮಾ ಬ್ಯಾನ್ ಮಾಡಲಾಗಿದೆ. ‘ದ್ವೇಷಪೂರಿತ ಘಟನೆಗಳನ್ನು ತಡೆಯಲು, ರಾಜ್ಯದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಮುನ್ನೆಚ್ಚರಿಕಾ ಕ್ರಮವಾಗಿ ಚಿತ್ರವನ್ನು ನಿರ್ಬಂಧಿಸಲಾಗುವುದು’ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ತನ್ನೊಂದಿಗೆ ಮಲಗಿದ ವೃದ್ಧನ ವಿಡಿಯೋ ಹರಿಬಿಟ್ಟ ಯುವತಿ: ಮರ್ಯಾದೆಗೆ ಅಂಜಿ ಪ್ರಾಣಬಿಟ್ಟ 72ರ ವೃದ್ಧ

    ಇತ್ತೀಚೆಗಷ್ಟೆ ಕರ್ನಾಟಕದಲ್ಲಿ ಪ್ರಧಾನಿ ನರೇಂದ್ರ ಮೋದಿ, ‘ಭಯೋತ್ಪಾ ದಕರ ಪಿತೂರಿಗಳನ್ನು ಹೊರತರುವಲ್ಲಿ ಸಿನಿಮಾ ಯಶಸ್ವಿಯಾಗಿದೆ’ ಎಂದು ‘ದಿ ಕೇರಳ ಸ್ಟೋರಿ’ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಮಧ್ಯಪ್ರದೇಶ ಸರ್ಕಾರ ಈಗಾಗಲೇ ಸಿನಿಮಾಗೆ ತೆರಿಗೆ ವಿನಾಯಿತಿ ಘೋಷಣೆ ಮಾಡಿದೆ. (ಏಜೆನ್ಸೀಸ್​)

    ದಿ ಕೇರಳ ಸ್ಟೋರಿ ಸಿನಿಮಾಗೆ ಉತ್ತರ ಪ್ರದೇಶ ಬೆಂಬಲ: ತೆರಿಗೆ ವಿನಾಯಿತಿ ಘೋಷಿಸಿದ ಸರ್ಕಾರ

    ಸೇತುವೆಗೆ ಬಿದ್ದ ಬಸ್​​; 14 ಮಂದಿ ಪ್ರಯಾಣಿಕರು ಮೃತ್ಯು, ಹಲವು ಜನ ಗಂಭೀರ

    ಪ್ರತಿ ಕನ್ನಡಿಗನ ಕನಸು, ನನ್ನ ಕನಸು, ನಿಮ್ಮ ನಿರ್ಣಯವೇ ನನ್ನ ನಿರ್ಣಯ: ಪ್ರಧಾನಿ ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts