More

    ತನ್ನೊಂದಿಗೆ ಮಲಗಿದ ವೃದ್ಧನ ವಿಡಿಯೋ ಹರಿಬಿಟ್ಟ ಯುವತಿ: ಮರ್ಯಾದೆಗೆ ಅಂಜಿ ಪ್ರಾಣಬಿಟ್ಟ 72ರ ವೃದ್ಧ

    ದೀಸ್ಪುರ್: ಕಾಲೇಜು ವಿದ್ಯಾರ್ಥಿನಿಯ ಜೊತೆ ಸಂಧಾನ ಸ್ಥಿತಿಯಲ್ಲಿದ್ದ ಖಾಸಗಿ ವಿಡಿಯೋವೊಂದು ಸೋರಿಕೆಯಾದ ಬೆನ್ನಲ್ಲೇ 72 ವರ್ಷದ ವೃದ್ಧನೊಬ್ಬ ಮರ್ಯಾದೆಗೆ ಅಂಜಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಅಸ್ಸಾಂನ ಜೊರ್ಹಾತ್ ಜಿಲ್ಲೆಯಲ್ಲಿ ನಡೆದಿದೆ.

    ಆರೋಪಿ ಯುವತಿಯನ್ನು ದರ್ಶನಾ ಭಾರಾಲಿ ಎಂದು ಗುರುತಿಸಲಾಗಿದೆ. ವೃದ್ಧನಿಗೆ ಬಲೆ ಬೀಸಿ, ಆತನೊಂದಿಗೆ ಸಂಭೋಗ ನಡೆಸಿ, ಮೊಬೈಲ್​ ಕ್ಯಾಮೆರಾದಿಂದ ವಿಡಿಯೋ ರೆಕಾರ್ಡ್​ ಮಾಡಿಕೊಂಡು ಪೋರ್ನ್​ ವೆಬ್​ಸೈಟ್​ಗೆ ಅಪ್​ಲೋಡ್​ ಮಾಡಿರುವ ಆರೋಪ ದರ್ಶನಾ ವಿರುದ್ಧ ಕೇಳಿಬಂದಿದೆ.

    ಇದನ್ನೂ ಓದಿ: ಹೇರ್​ ಕಟಿಂಗ್​ ಶಪಥ! ತನೂರ್​ ದೋಣಿ ದುರಂತದಲ್ಲಿ ಮೃತಪಟ್ಟ ಪೊಲೀಸ್​ ಅಧಿಕಾರಿ ನೆನೆದು ಜನರ ಕಣ್ಣೀರು

    ಕಠಿಣ ಶಿಕ್ಷೆಗೆ ಒತ್ತಾಯ

    ಈ ಘಟನೆಯು ಜೋರ್ಹಾತ್​ ಜಿಲ್ಲೆಯಲ್ಲಿ ಆಕ್ರೋಶವನ್ನು ಹುಟ್ಟುಹಾಕಿದೆ. ಅಶ್ಲೀಲ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ವೃದ್ಧ ಮತ್ತು ಅವರ ಕುಟುಂಬಕ್ಕೆ ಅಪಾರ ಹಾನಿ ಉಂಟು ಮಾಡಿದೆ. ವಿಡಿಯೋದಿಂದ ಉಂಟಾದ ಮುಜುಗರ ಮತ್ತು ಅವಮಾನವನ್ನು ಸಹಿಸಲಾಗದ ಸಂತ್ರಸ್ತ ತನ್ನ ಜೀವನವನ್ನು ಕೊನೆಗೊಳಿಸುವ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾರೆ. ಆರೋಪಿ ಯುವತಿಗೆ ಕಠಿಣ ಶಿಕ್ಷೆಯಾಗಬೇಕೆಂದು ಮೃತ ವೃದ್ಧನ ಕುಟುಂಬಸ್ಥರು ಆಗ್ರಹಿಸಿದ್ದಾರೆ.

    ಸ್ಥಳೀಯ ಪೊಲೀಸರು ಆರೋಪಿ ಯುವತಿಯನ್ನು ಬಂಧಿಸಿದ್ದು, ಆಕೆಯ ವಿರುದ್ಧ ಭಾರತೀಯ ದಂಡ ಸಂಹಿತಿಯ ಸೂಕ್ತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆಕೆ ಏಕಾಂಗಿಯಾಗಿ ಕೃತ್ಯ ಎಸಗಿದ್ದಾಳೆಯೇ? ಅಥವಾ ಆಕೆಯೊಂದಿಗೆ ಯಾರಾದರೂ ಕೈಜೋಡಿಸಿದ್ದಾರಾ ಎಂಬ ಆಯಾಮದ ಮೇಲೆ ಹೆಚ್ಚಿನ ತನಿಖೆ ಪ್ರಸ್ತುತ ನಡೆಯುತ್ತಿದೆ. (ಏಜೆನ್ಸೀಸ್​)

    ಹೇರ್​ ಕಟಿಂಗ್​ ಶಪಥ! ತನೂರ್​ ದೋಣಿ ದುರಂತದಲ್ಲಿ ಮೃತಪಟ್ಟ ಪೊಲೀಸ್​ ಅಧಿಕಾರಿ ನೆನೆದು ಜನರ ಕಣ್ಣೀರು

    ರಾಜ್ಯಕ್ಕೆ ಎದುರಾಗಲಿದೆ ನಾಯಕತ್ವ ಕೊರತೆ: ಹಲವು ಹಿರಿಯ ನಾಯಕರಿಗೆ ಇದು ಕೊನೆಯ ಚುನಾವಣೆ..

    ಕರ್ನಾಟಕ ಚುನಾವಣೆ 2023: ಹೆಚ್ಚಿನ ಮತದಾನಕ್ಕೆ ಗೋವಾ ಸರ್ಕಾರ ಸಾಥ್​, ಸರ್ಕಾರಿ ರಜೆ ಘೋಷಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts