ಕುಡಿದ ಮತ್ತಿನಲ್ಲಿ ಗೋಡೆಗೆ ತಲೆ ಜಜ್ಜಿ ಮಾವನನ್ನ ಕೊಂದ ಅಳಿಯ

haveri crime
ಆರೋಪಿ ರಮೇಶ್​​
Published on

ಹಾವೇರಿ: ಕುಡಿದ ಮತ್ತಿನಲ್ಲಿದ್ದ ಅಳಿಯ ಜಗಳ ಮಾಡುವಾಗ ಮಾವನನ್ನ ಕೊಂದಿದ್ದಾನೆ. ಹಾವೇರಿ ಜಿಲ್ಲೆ ಹಾನಗಲ್ಲ ತಾಲೂಕಿನ ಆಡೂರು ಗ್ರಾಮದಲ್ಲಿ ಘಟನೆ ನಡೆದಿದೆ.

ಮೈಲಾರಪ್ಪ ಮೃತ ನಾಗಿದ್ದಾನೆ. ಮಾವನನ್ನು ಕೊಲೆ ಮಾಡಿದ ಅಳಿಯ ರಮೇಶ್. ಜಗಳ ಮಾಡುವ ಸಂದರ್ಭದಲ್ಲಿ ಕೋಪದಲ್ಲಿ ಮಾವನನ್ನು ಗೋಡೆ ಕಡೆಗೆ ತಳ್ಳಿದ್ದಾನೆ. ಈ ವೇಳೆ ತಲೆ ಗೋಡೆಗೆ ತಗುಲಿ ಮೈಲಾರಪ್ಪ ಸ್ಥಳದಲ್ಲೇ ಮೃತ ಪಟ್ಟಿದ್ದಾನೆ.

ಕೆಲವು ದಿನಗಳಿಂದ ಮಾವ-ಅಳಿಯ ಇಬ್ಬರ ನಡುವೆ ಕಲಹ ನಡೆಯುತ್ತಿತ್ತು. ಒಮ್ಮಿಂದ ಒಮ್ಮೆಲೇ ಗಲಾಟೆ ಹೆಚ್ಚಾಗುತ್ತಿದ್ದಂತೆ ಇಬ್ಬರು ಬಡಿದಾಡಿದ್ದಾರೆ. ಈ ವೇಳೆ ಮಾವ ಪ್ರಾಣ ಬಿಟ್ಟಿದ್ದಾನೆ. ಆರೋಪಿ ರಮೇಶ್ ನನ್ನು ಬಂಧಿಸಲಾಗಿದೆ ಆಡೂರು ಪೋಲಿಸರು ತಿಳಿಸಿದ್ದಾರೆ.

ಆಡೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಹಾವೇರಿ ಜಿಲ್ಲಾ ಪೊಲಿಸ್ ವರಿಷ್ಠಧಿಕಾರಿ ಡಾ. ಶಿವಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net